ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 FEBRUARY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ನಾನು ಬೌಲಿಂಗ್ ಮಾಡಿದ್ದು ಬೇರೆಯವರಿಗೆ. ಆದರೆ ಬ್ಯಾಟಿಂಗ್ ಮಾಡಿದ್ದು ಬೇರೆಯವರು. ದೇಶ ಪ್ರೇಮ ಎಂದರೆ ಪರ್ಸೆಂಟೇಜ್ ಹೆಸರಿನಲ್ಲಿ ಲೂಟಿ ಮಾಡುವುದಲ್ಲ. ಸದ್ಯದಲ್ಲೆ ಎಲ್ಲ ವಿಚಾರಕ್ಕೂ ಉತ್ತರ ಕೊಡುತ್ತೇನೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಸಂಸದ ರಾಘವೇಂದ್ರ ಅವರು ನಾಲ್ಕು ಭಾರಿ ನಮ್ಮ ಫಾರಂಗೆ ಹೋಗಿ ಬಂದಿದ್ದೇನೆ ಎಂದು ಹೇಳಿದ್ದಾರೆ. ಆ ಫಾರಂ ಯಾರದ್ದು, ಅಲ್ಲಿರುವ ಮನೆ ಯಾರ ಹೆಸರಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳಲಿ. ಸಾಗರ ರಸ್ತೆಯಲ್ಲಿ ನನ್ನ ಹೆಸರಿನಲ್ಲಿ ಆಸ್ತಿ ಎಲ್ಲಿದೆ ಎಂದು ಹುಡುಕುತ್ತೀನಿ ಎಂದರು.
ಲಿಫ್ಟ್ನಲ್ಲಿ ಬಂದವರಿಗೆ ಕಷ್ಟ ಗೊತ್ತಾಗಲ್ಲ
ಮೆಟ್ಟಿಲ ಮೇಲೆ ಮೆಟ್ಟಿಲು ಹತ್ತಿ ಸಾರ್ವಜನಿಕ ಬದುಕು ಕಟ್ಟಿಕೊಂಡಿದ್ದೇನೆ. ನಾನು ಯಾರದ್ದೋ ಭುಜದ ಮೇಲೆ ಕುಳಿತು, ಲಿಫ್ಟ್ನಲ್ಲಿ ಮೇಲೆ ಬಂದವನಲ್ಲ. ಲಿಫ್ಟ್ನಲ್ಲಿ ಕುಳಿತು ಬಂದವರಿಗೆ ಮೆಟ್ಟಿಲು ಹತ್ತಿದವರ ಕಷ್ಟ ಗೊತ್ತಾಗುವುದಿಲ್ಲ ಎಂದು ಟೀಕಿಸಿದರು.
ಅಚ್ಚರಿ ಅಭ್ಯರ್ಥಿ ಎಂದು ನಿಮ್ಮನ್ನು ಅಚ್ಚರಿಗೊಳಿಸಿದ್ದಾರೆ
ಸಂಸತ್ ಚುನಾವಣೆಗೆ ಕಾಂಗ್ರೆಸ್ನಿಂದ ಅಚ್ಚರಿ ಅಭ್ಯರ್ಥಿ ಕುರಿತು ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಅಚ್ಚರಿಯ ಅಭ್ಯರ್ಥಿ ಎಂದು ಮಧು ಬಂಗಾರಪ್ಪ ಹೇಳುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸಿದ್ದಾರೆ. ಆದರೆ ಪದವೀಧರರ ಕ್ಷೇತ್ರದ ಚುನಾವಣೆಗೆ ತಯಾರಿ ನಡೆಯುತ್ತಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು, ಎಸ್.ಪಿ.ದಿನೇಶ್ ಅವರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದಾರೆ ಎಂಬ ಪ್ರಶ್ನೆಗೆ, ರಾಜಕೀಯ ಸ್ವಯಂವರ ಇದ್ದ ಹಾಗೆ. ಅವಕಾಶ ಯಾರಿಗೆ ಒಲಿಯುತ್ತದೋ ಗೊತ್ತಿಲ್ಲ. ದೇಹ ಒಂದು ಕಡೆ, ಮನಸು ಒಂದು ಕಡೆಗೆ ಇಟ್ಟುಕೊಳ್ಳುವ ರಾಜಕಾರಣಿ ನಾನಲ್ಲ. ಎಲ್ಲೆ ನಿಂತರು ಗಟ್ಟಿಯಾಗಿ ನಿಲ್ಲುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವೈ.ಹೆಚ್.ನಾಗರಾಜ್, ಧೀರರಾಜ್ ಹೊನ್ನವಿಲೆ, ಶಿ.ಜು.ಪಾಶಾ, ಪದ್ಮನಾಭ ಇದ್ದರು.
ಇದನ್ನೂ ಓದಿ – ‘ಅಲ್ಲಿ ನಮ್ಮಪ್ಪನ ಆಸ್ತಿ ಇಲ್ಲ’, ಆಯನೂರು ಮಂಜುನಾಥ್ ವಿರುದ್ಧ ರಾಘವೇಂದ್ರ ಗರಂ, ಇಲ್ಲಿದೆ 5 ಪ್ರಮುಖ ಪಾಯಿಂಟ್