ಶಿವಮೊಗ್ಗ: ರಾಷ್ಟ್ರೋತ್ಥಾನ ಬಳಗದಿಂದ ಇಲ್ಲಿನ ದ್ವಾರಕಾ ಕನ್ವೆನ್ಷನ್ ಹಾಲ್‌ನಲ್ಲಿ, ದೇಶಕ್ಕೆ ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷದ ಸ್ಮರಣೆ ಹಾಗೂ ಮರುಮುದ್ರಿತ ‘ಭುಗಿಲು’ ಪುಸ್ತಕವನ್ನು (Book) ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಲೋಕಾರ್ಪಣೆ ಮಾಡಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಬಿ.ಎಲ್.ಸಂತೋಷ್ ಏನೆಲ್ಲ ಹೇಳಿದರು?
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿದರು. ಅವರ ಭಾಷಣದ ಐದು ಪ್ರಮುಖ ಪಾಯಿಂಟ್ ಇಲ್ಲಿದೆ.
ಮೊದಲು ಪಕ್ಷವನ್ನು ಕೈವಶ ಮಾಡಿಕೊಂಡ ಅಂದಿನ ಪಧಾನಿ ಇಂದಿರಾ ಗಾಂಧಿ, ಬಳಿಕ ಆಡಳಿತ ತನ್ನ ಸುತ್ತಲೇ ಕೇಂದ್ರಿತವಾಗುವಂತೆ ನೋಡಿಕೊಂಡರು. ಅದರ ಮುಂದಿನ ಹಂತವಾಗಿ ದೇಶವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾದರು. ಇದರ ಪರಿಣಾಮ ದೇಶ ತುರ್ತು ಪರಿಸ್ಥಿತಿ ಎದುರಿಸಬೇಕಾಯಿತು.
ತುರ್ತು ಪರಿಸ್ಥಿತಿ ಹೇರುವ ಮುನ್ನವೇ ಇಂದಿರಾ ಗಾಂಧಿ ಪ್ರಜಾಪ್ರಭುತ್ವದಿಂದ ವಿಮುಖರಾದಂತೆ ಕಂಡುಬಂದಿದ್ದರು. ಕೀನ್ಯಾದಲ್ಲಿ ಅವರು ಮಾಡಿದ್ದ ಭಾಷಣದಲ್ಲಿ ಭಾರತದಲ್ಲಿ ಅನೇಕ ಪ್ರತಿಪಕ್ಷಗಳಿವೆ. ಇದು ನನಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದಿದ್ದರು. ಬಾಂಗ್ಲಾದಲ್ಲಿದ್ದ ಅಧ್ಯಕ್ಷಿಯ ಆಡಳಿತವನ್ನು ಅವರು ಸ್ವಾಗತಿಸಿದ್ದರು.
ಈ ದೇಶದ ಜನ ಎಂದಿಗೂ ಬೇರೆಯವರು ತಮ್ಮ ವಿಚಾರ ಹಿಡಿದಿಟ್ಟುಕೊಳ್ಳುವುದನ್ನು ಹಾಗೂ ಸ್ವಾತಂತ್ರ್ಯಹರಣ ಮಾಡುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ವಾಸ್ತವ ಇಂದಿರಾ ಗಾಂಧಿಗೆ ತಿಳಿದಿರಲಿಲ್ಲ. ಗಣ್ಯರಾದವರು ಮನೆಯೊಳಗೆ ಕುಳಿತಿದ್ದರೆ ಸಾಮಾನ್ಯ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು.

ಈ ದೇಶಕ್ಕೆ ಇನ್ನೆಂದೂ ತುರ್ತು ಪರಿಸ್ಥಿತಿ ಎದುರಿಸುವ ಅನಿವಾರ್ಯತೆ ಬೀಳುವುದಿಲ್ಲ. ಏಕೆಂದರೆ 1975ರ ಭಾರತ, ಅಂದಿನ ಆರ್‌ಎಸ್‌ಎಸ್, ಅಂದಿನ ಎಬಿವಿಪಿ ಎಲ್ಲವೂ ಇಂದು ಬದಲಾಗಿವೆ. ಮುಖ್ಯವಾಗಿ ಕಾಂಗ್ರೆಸ್ ಕೂಡಾ ಬದಲಾಗಿದೆ. ಅಂದು ದೇಶದಲ್ಲಿ ಸರ್ವವ್ಯಾಪಿಯಾಗಿದ್ದ ಕಾಂಗ್ರೆಸ್ ಈಗ ಶಕ್ತಿ ಕಳೆದುಕೊಂಡಿದೆ ಎಂದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೇರೆಯವರ ಮನೆ ಹಾಳು ಮಾಡಿದ್ದ ಕಾಂಗ್ರೆಸ್, ಈಗ ತನ್ನ ಮನೆ ಕಾಪಾಡಿಕೊಳ್ಳಲು ಪ್ರಯತ್ನ ನಡೆಸುವ ಸ್ಥಿತಿಗೆ ಬಂದಿದೆ. 75 ವರ್ಷಗಳ ಹಿಂದಿನ ಕಾಂಗ್ರೆಸ್ ಪಕ್ಷ ಈಗ ಉಳಿದಿಲ್ಲ ಎಂದು ಬಿ.ಎಲ್.ಸಂತೋಷ್ ತಿಳಿಸಿದರು.
ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದಿಂದ ಮೊದಲ ಎಚ್ಚರಿಕೆ, ಯಾವುದೇ ಸಂದರ್ಭ ಗೇಟ್‌ಗಳ ಮೂಲಕ ನೀರು ಹೊರಕ್ಕೆ

ರಾಷ್ಟ್ರೋತ್ಥಾನ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸುಧೀಂದ್ರ ಮಾತನಾಡಿದರು. ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ್, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಕೆ.ಬಿ.ಅಶೋಕ ನಾಯ್ಕ್, ಆರ್.ಕೆ.ಸಿದ್ರಾಮಣ್ಣ, ಮುಖಂಡರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಗೋವಿಂದ ನಾಯರ್ ಇದ್ದರು.
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





