ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 9 DECEMBER 2023
SHIMOGA : ನಗರದ ಶಂಕರ ಮಠ ರಸ್ತೆಯಲ್ಲಿರುವ ಪ್ರಮುಖ ಕಾರು ಶೋ ರೂಂ ಒಂದರ ವಿಮಾ ವಿಭಾಗದ ಗುಮಾಸ್ತನ ವಿರುದ್ಧ 13.72 ಲಕ್ಷ ರೂ. ವಂಚನೆ ಪ್ರಕರಣ ದಾಖಲಾಗಿದೆ.
ವಿಮಾ ಪಾಲಿಸಿ ನವೀಕರಣಕ್ಕೆ ಕಾರು ಶೋ ರೂಂನ ವಿವಿಧ ಶಾಖೆಗಳಲ್ಲಿ ಸಂಗ್ರಹವಾಗುವ ಹಣವನ್ನು ಸೇಲ್ಸ್ ಎಗ್ಸಿಕ್ಯೂಟಿವ್‌ಗಳು ಗುಮಾಸ್ತನ ಬಳಿ ತಂದು ಕೊಡುತ್ತಿದ್ದರು. ಇದನ್ನು ಕೌಂಟರ್‌ನಲ್ಲಿ ಪಾವತಿಸುವ ಜವಾಬ್ದಾರಿ ಆತ ನಿರ್ವಹಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
2021ರ ಜುಲೈ 1ರಿಂದ 2023ರ ಆಗಸ್ಟ್ 26ರವರೆಗೆ ತೀರ್ಥಹಳ್ಳಿ ಮತ್ತು ಎನ್.ಆರ್.ಪುರ ಶಾಖೆಗಳ ಹಣದಲ್ಲಿ 13.72 ಲಕ್ಷ ರೂ. ಹಣವನ್ನು ಕೌಂಟರ್‌ಗೆ ಪಾವತಿಸದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಕಾರು ಶೋ ರೂಂನ ವಿಮಾ ವಿಭಾಗದ ಮುಖ್ಯಸ್ಥ ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಸಕ್ರೆಬೈಲು ಸಮೀಪ ಕೆಟಿಎಂ ಬೈಕ್ ಅಪಘಾತ, ಶಿವಮೊಗ್ಗದ ಕಾಲೇಜು ವಿದ್ಯಾರ್ಥಿನಿ ತಲೆಗೆ ಪೆಟ್ಟು
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















