SHIVAMOGGA LIVE NEWS | CASH THEFT| 12 ಮೇ 2022
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಗಾಂಧಿ ಬಜಾರ್’ನ ಪ್ರತಿಷ್ಠಿತ ಬಟ್ಟೆ ಅಂಗಡಿಯೊಂದರ ಕ್ಯಾಷ್ ಬಾಕ್ಸ್’ನಲ್ಲಿದ್ದ ಲಕ್ಷಾಂತರ ರೂ. ಹಣ ಕಳ್ಳತನವಾಗಿದೆ. ರಾತ್ರಿ ವೇಳೆ ಅಂಗಡಿಯೊಳಗೆ ನುಗ್ಗಿರುವ ಕಳ್ಳರು, ಕ್ಯಾಷ್ ಬಾಕ್ಸ್’ನಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ.
ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಹಣ ಕಳ್ಳತನವಾಗಿದೆ. ಮೇ 10ರಂದು ರಾತ್ರಿ ಎಂದಿನಂತೆ ಅಂಗಡಿ ಬಾಗಿಲು ಹಾಕಲಾಗಿದೆ. ಬೆಳಗ್ಗೆ ಅಂಗಡಿ ಬಾಗಿಲು ತೆಗೆದಾಗ ಕ್ಯಾಷ್ ಬಾಕ್ಸ್’ನಲ್ಲಿದ್ದ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಹಣ ಕಳ್ಳತನ ಹೇಗಾಯ್ತು?
ಮೇ 10ರಂದು ಅಂಗಡಿಯಲ್ಲಿ 3.17 ಲಕ್ಷ ರೂ.ನಷ್ಟು ವ್ಯಾಪಾರವಾಗಿತ್ತು. ಹಿಂದಿನ ದಿನದ ವ್ಯಾಪಾರದ ಹಣ 1.51 ಲಕ್ಷ ರೂ. ಹಣವು ಇತ್ತು. ಒಟ್ಟು 4.68 ಲಕ್ಷ ರೂ. ಹಣವನ್ನು ಕ್ಯಾಶ್ ಡ್ರಾದಲ್ಲಿ ಇರಿಸಿ ರಾತ್ರಿ ಅಂಗಡಿ ಬಾಗಿಲು ಹಾಕಲಾಗಿತ್ತು.
ಬೆಳಗ್ಗೆ ಅಂಗಡಿ ಮಾಲೀಕರು ಬಂದು ಬಾಗಿಲು ತೆಗೆದಾಗ ಕಳ್ಳರು ಅಂಗಡಿಯೊಳಗೆ ನುಗ್ಗಿರುವುದು ಗೊತ್ತಾಗಿದೆ. ಕ್ಯಾಶ್ ಡ್ರಾ ತೆಗೆದು ನೋಡಿದಾಗ 4.68 ಲಕ್ಷ ರೂ. ಹಣ ನಾಪತ್ತೆಯಾಗಿತ್ತು. ಪರಿಶೀಲನೆ ನಡೆಸಿದಾಗ ಅಂಗಡಿಯ ಕಟ್ಟಡದ ಮೇಲ್ಬಾಗದ ಗೋಡೋನ್ ಕಿಟಕಿಯ ಕಬ್ಬಿಣದ ರಾಡ್ ಗಳನ್ನು ಕಟ್ ಮಾಡಿ ಲಿಫ್ಟ್ ರೂಂ ಮೂಲಕ ಕಳ್ಳರು ಅಂಗಡಿಯೊಳಗೆ ಪ್ರವೇಶ ಮಾಡಿರುವುದು ಬೆಳಕಿಗೆ ಬಂದಿದೆ.
ಕೂಡಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಪತಿ ಎದುರಲ್ಲೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ
ಇದನ್ನೂ ಓದಿ ⇒ ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






