ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 25 DECEMBER 2024
ಶಿವಮೊಗ್ಗ : ನಗರದಲ್ಲಿ ಕ್ರಿಸ್ಮಸ್ ಹಬ್ಬವನ್ನು (Christmas) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಳೆದ ರಾತ್ರಿಯಿಂದಲೆ ಚರ್ಚುಗಳಲ್ಲಿ ಪ್ರಾರ್ಥನೆ ನಡೆಸಲಾಗುತ್ತಿದೆ.
ನಗರದ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ರಾತ್ರಿ ಪ್ರಾರ್ಥನೆ ನೆರವೇರಿಸಲಾಯಿತು. ದಿವ್ಯ ಬಲಿ ಪೂಜೆ, ಗೋದಲಿ ಮುಂದೆ ಪ್ರಾರ್ಥನೆ ನಡೆಸಲಾಯಿತು. ಬಿಷಪ್, ವಿವಿಧ ಚರ್ಚ್ಗಳ ಧರ್ಮಗುರುಗಳು ಪ್ರಾರ್ಥನೆ ವೇಳೆ ಪಾಲ್ಗೊಂಡಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ದೊಡ್ಡ ಸಂಖ್ಯೆಯ ಕ್ರೈಸ್ತರು ಏಸು ಕ್ರಿಸ್ತನನ್ನು ಪ್ರಾರ್ಥಿಸಿದರು. ಚರ್ಚ್ ಆವರಣಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಇದನ್ನೂ ಓದಿ » ನಟ ಶಿವರಾಜ್ ಕುಮಾರ್ಗಾಗಿ ಶಿವಮೊಗ್ಗದಲ್ಲಿ ಪೂಜೆ, ಸಿಗಂದೂರಿನಲ್ಲಿ ಹೋಮ
ಶಿವಪ್ಪನಾಯಕ ಪ್ರತಿಮೆ ಸಮೀಪದ ಸಂತ ಥಾಮಸ್ ಚರ್ಚ್, ಶರಾವತಿ ನಗರದ ಇನ್ಫ್ಯಾಂಟ್ ಜೀಸಸ್ ಚರ್ಚ್, ಗೋಪಾಳದ ಗುಡ್ ಶೆಫರ್ಡ್ ಚರ್ಚ್, ರಾಗಿಗುಡ್ಡದ ಬಳಿಯ ಶಾಂತಿನಗರದ ಸೇಂಟ್ ಅಂಥೋನಿ ಚರ್ಚ್ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ರಾತ್ರಿಯಿಂದಲೆ ಪ್ರಾರ್ಥನೆಗಳು ನಡೆಯುತ್ತಿವೆ. ಇಲ್ಲಿದೆ ವಿಡಿಯೋ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422