ಶಿವಮೊಗ್ಗ : ಹೊಳೆಹೊನ್ನೂರು ಸುತ್ತಮುತ್ತ ಅಕ್ರಮವಾಗಿ ಗಾಂಜಾ, ಓ.ಸಿ, ಇಸ್ಪೀಟು, ಐಪಿಎಲ್ ಬೆಟ್ಟಿಂಗ್ (Betting) ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ » ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಹಾಸನದಲ್ಲಿ ಉದ್ಯೋಗ, ಯಾವೆಲ್ಲ ಹುದ್ದೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು?
![]() |
ಸ್ಥಳೀಯರ ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಗೆ ತೆರಳಿದ್ದ ಶಾಸಕರು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬಲಿಯಾಗುತ್ತಿದ್ದಾರೆ ಮುಗ್ಧ ಜನರು
ಹೊಳೆಹೊನ್ನೂರಿನ ವಿವಿಧೆಡೆ 24 ಗಂಟೆಯು ದಂಧೆ ನಡೆಯುತ್ತಿದೆ. ಸರ್ಕಲ್‌ಗಳು, ಕೆಲವು ಹೊಟೇಲ್‌ಗಳು ಸೇರಿದಂತೆ ವಿವಿಧೆಡೆ ಬೆಟ್ಟಿಂಗ್ (Betting), ಓ.ಸಿ, ಇಸ್ಪೀಟ್ ದಂಧೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.
ಹೊಳೆಹೊನ್ನೂರು, ಆನವೇರಿ ಭಾಗದಲ್ಲಿ ಇಸ್ಪೀಟು, ಓ.ಸಿ ದಂಧೆಗಳು ನಡೆಯುತ್ತಿವೆ. ಆಡಲು ಹೋಗುವವರನ್ನು ಕರೆದೊಯ್ಯಲು ಪ್ರತ್ಯೇಕ ತಂಡವಿದೆ ಎಂದು ಪದೇ ಪದೆ ದೂರು ಬರುತಿತ್ತು. ಕಡಿವಾಣ ಹಾಕುವಂತೆ ಮನವಿ ಕೊಟ್ಟಿದ್ದೇವೆ. ಈ ದಂಧೆಗಳು ನಿಲ್ಲಿಸದೆ ಇದ್ದರೆ ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ದಂಧೆಕೋರರ ಹೆಸರುಗಳನ್ನು ಹೇಳಿ ಎಂದು ಎಸ್.ಪಿ.ಯವರು ನಮ್ಮನ್ನೆ ಕೇಳುತ್ತಿದ್ದಾರೆ. ಅವರು ತನಿಖೆ ನಡೆಸಿ ಪತ್ತೆಹಚ್ಚಬೇಕು.
ಶಾರದಾ ಪೂರ್ಯಾನಾಯ್ಕ್, ಶಿವಮೊಗ್ಗ ಗ್ರಾಮಾಂತರ ಶಾಸಕಿ
ಓ.ಸಿ., ಇಸ್ಪೀಟು, ಆನ್‌ಲೈನ್ ಬೆಟ್ಟಿಂಗ್ ಮೂಲಕ ಜನರು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಮನೆತನಗಳೆ ಹಾಳಾಗುತ್ತಿವೆ. ಇಂತಹ ದಂಧೆಕೋರರ ಕುರಿತು ಮಾಹಿತಿ ಲಭ್ಯವಿದ್ದರೆ ಗೌಪ್ಯವಾಗಿ ಪೊಲೀಸರಿಗೆ ತಿಳಿಸಲು ಅವಕಾಶವಿದೆ. ಕಠಿಣ ಕ್ರಮವಾದರೆ ಮಾತ್ರ ಇದಕ್ಕೆ ಕಡಿವಾಣ ಬೀಳಲಿದೆ.
ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ
ಹಣದ ಆಸೆಗೆ ಮುಗ್ದ ಜನರು ಈ ದಂಧೆಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕೂಡಲೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200