ಬಿಗಿ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ಬಂತು ಕರೋನ ಲಸಿಕೆ, ನಾಳೆಯಿಂದಲೇ ಸೇನಾನಿಗಳಿಗೆ ವಿತರಣೆ, ಎಷ್ಟು ಲಸಿಕೆ ಬಂದಿದೆ? ಎಲ್ಲೆಲ್ಲಿ ವಿತರಣೆ ಆಗುತ್ತೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 JANUARY 2021

ಶಿವಮೊಗ್ಗ ಜಿಲ್ಲೆಗೆ ಇವತ್ತು ಕರೋನ ಲಸಿಕೆ ಆಗಮಿಸಿದೆ. ಚಿತ್ರದುರ್ಗದ ಪ್ರಾದೇಶಿಕ ಉಗ್ರಾಣದಿಂದ ಲಸಿಕೆ ಶಿವಮೊಗ್ಗದ ಔಷಧ ಉಗ್ರಾಣಕ್ಕೆ ತಲುಪಿದೆ.

45 ಸಾವಿರ ಡೋಸ್ ಲಸಿಕೆಯನ್ನು ಶಿವಮೊಗ್ಗಕ್ಕೆ ಬಂದಿದೆ. ಜನವರಿ 16ರಿಂದ ಲಸಿಕೆ ವಿತರಣೆ ನಡೆಯಲಿದೆ.

ಚಿತ್ರದುರ್ಗದಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಲಸಿಕೆ ತರಲಾಯಿತು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಡಿಹೆಚ್‌ಒ ರಾಜೇಶ್ ಸುರಗೀಹಳ್ಳಿ ಸಮ್ಮುಖದಲ್ಲಿ ಲಸಿಕೆ ಮತ್ತು ಸಿರೇಂಜ್ ಬಾಕ್ಸ್‌ಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಲಸಿಕೆಯನ್ನು ವಾಕಿನ್ ಕೂಲರ್‌ನಲ್ಲಿ ಇರಿಸಲಾಯಿತು.

137540022 1309554966072587 201747856769407246 n.jpg? nc cat=103&ccb=2& nc sid=110474& nc ohc=GBinAheUXFsAX E2Oo7& nc ht=scontent.fblr1 5

ಮೊದಲ ದಿನ ಎಲ್ಲೆಲ್ಲಿ ಲಸಿಕೆ ವಿತರಣೆ?

ಜ.16ರಂದು ಶಿವಮೊಗ್ಗ ಜಿಲ್ಲೆಯ 9 ಕಡೆಯಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ. ಸಾಗರ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ, ಭದ್ರಾವತಿ ಮತ್ತು ಹೊಸನಗರ ತಾಲೂಕಿನ ಎಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ತುಂಗಾನಗರದ ಪ್ರಸೂತಿ ಕೇಂದ್ರ, ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ.

91 ಕೇಂದ್ರದಲ್ಲಿ ಲಸಿಕೆ

ಜ.18ರಿಂದ ಜಿಲ್ಲೆಯ 91 ಕೇಂದ್ರಗಳಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಪ್ರತಿ ಬೂತ್‍ನಲ್ಲೂ ನೂರು ಜನರಿಗೆ ಲಸಿಕೆ ನೀಡಲಾಗುತ್ತದೆ.

ಇದನ್ನೂ ಓದಿ | ಶಿವಮೊಗ್ಗಕ್ಕೆ ಮೊದಲು ಬರುತ್ತೆ ಕರೋನ ಲಸಿಕೆ, ಅಕ್ಕಪಕ್ಕದ ಜಿಲ್ಲೆಗೆ ಇಲ್ಲಿಂದಲೇ ಪೂರೈಕೆ, ಹೇಗಿದೆ ಗೊತ್ತಾ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ?

ಇದನ್ನೂ ಓದಿ | ಶಿವಮೊಗ್ಗದಲ್ಲಿ ಕರೋನ ಲಸಿಕೆ ಡ್ರೈ ರನ್ ಶುರು, ಏನಿದು ಡ್ರೈ ರನ್? ಎಲ್ಲೆಲ್ಲಿ ಆಗ್ತಿದೆ? ಯಾರೆಲ್ಲ ಭಾಗವಹಿಸಿದ್ದಾರೆ?

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment