| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ: ಅರ್ಹತೆ ಇಲ್ಲದವರು ಚರ್ಮ ರೋಗದ ಚಿಕಿತ್ಸೆ, ಸೌಂದರ್ಯ ವರ್ಧನೆಯ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಇದರಿಂದ ಜನರ ಪ್ರಾಣಕ್ಕೆ ಅಪಾಯಕ್ಕೆ ಎದುರಾಗಿದೆ. ಆದ್ದರಿಂದ ಅನರ್ಹರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಸಹ್ಯಾದ್ರಿ ಡರ್ಮಾ ಆಸೋಸಿಯೇಷನ್ ಮನವಿ ಮಾಡಿದೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರ್ಮ ರೋಗ ತಜ್ಞರು, ಚರ್ಮರೋಗಕ್ಕೆ ಚಿಕಿತ್ಸೆ ನೀಡುವ ನೆಪದಲ್ಲಿ ಹಲವರು ಜನರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದಾರೆ ಎಂದು ಆರೋಪಿಸಿದರು.
ವೈದ್ಯರು ಏನೇನು ಹೇಳಿದರು? ಇಲ್ಲಿದೆ ಪಾಯಿಂಟ್ಸ್
ಅರ್ಹತೆ ಇಲ್ಲದ ವ್ಯಕ್ತಿಗಳು ಚರ್ಮರೋಗ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡುತ್ತಿದ್ದಾರೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ. ಈ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಎಂಬಿಬಿಎಸ್ ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಪಡೆದವರನ್ನು ಚರ್ಮರೋಗ ತಜ್ಞರು ಎನ್ನುತ್ತಾರೆ. ಇಂತಹ ವೈದ್ಯರು ಮಾತ್ರವೇ ಚರ್ಮ, ಕೂದಲು ಮತ್ತು ಉಗುರುಗಳ ಕಾಯಿಲೆ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಇವರು ಮಾತ್ರವೆ ಸೌಂದರ್ಯವರ್ಧಕ ಲೇಸರ್ ಚಿಕಿತ್ಸೆ ನಿರ್ವಹಿಸಲು ಕಾನೂನುಬದ್ಧವಾಗಿ ಅರ್ಹರು ಎಂದು ಆರೋಪಿಸಿದರು.
ನೈಸರ್ಗಿಕ ಚಿಕಿತ್ಸಕರು, ಸೂಕ್ತ ತರಬೇತಿ ಪಡೆಯದ ಬ್ಯೂಟಿ ಕ್ಲಿನಿಕ್ನ ಸಿಬ್ಬಂದಿ ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆ ನಡೆಸುತ್ತಿದ್ದಾರೆ. ಲೇಸರ್, ಕೂದಲು ತೆಗೆಯುವಿಕೆ, ಬೊಟಾಕ್ಸ್, ಫಿಲ್ಲರ್ಸ್, ಕೆಮಿಕಲ್ ಪೀಲ್ಸ್, ಮೈಕ್ರೋನೀಡ್ಲಿಂಗ್, ಪಿಆರ್ಪಿ ಮತ್ತು ಮಚ್ಚೆ ತೆಗೆಯುವಂತಹ ಚಿಕಿತ್ಸೆ ನೀಡುವುದು ಸಂಪೂರ್ಣವಾಗಿ ಅಸುರಕ್ಷಿತವಾಗಿದೆ ಎಂದು ಚರ್ಮ ರೋಗ ತಜ್ಞರು ಆರೋಪಿಸಿದರು.

ಅಸುರಕ್ಷಿತ ವಿಧಾನಗಳಿಂದ ಚರ್ಮದ ಮೇಲೆ ಗಾಯ, ಸೋಂಕು, ಬಣ್ಣ ಬದಲಾವಣೆ, ಹುಣ್ಣು ಉಂಟಾಗಬಹುದು. ಗಂಭೀರ ಚರ್ಮ ರೋಗವಿದ್ದರು ಅದನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚದೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದರು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಮಹಿಳೆಗೆ KFD ಪಾಸಿಟಿವ್, ಸರ್ವೇಕ್ಷಣಾಧಿಕಾರಿ ಏನಂದ್ರು? ಚಿಕಿತ್ಸೆಗೆ ಏನೆಲ್ಲ ವ್ಯವಸ್ಥೆಯಾಗಿದೆ?
![]()
ಸುದ್ದಿಗೋಷ್ಠಿಯಲ್ಲಿ ಡಾ.ಆದಿನಾಥ ಭಂಡಾರ್ಕರ್, ಡಾ.ಸುಮನ್, ಡಾ.ತೃಷ್ತಿ, ಡಾ.ಭರತ್, ಡಾ.ಪ್ರಗತಿ, ಡಾ. ಲಾವಣ್ಯ, ಡಾ.ಪ್ರೇರಣಾ ಸೇರಿ ಹಲವರು ಇದ್ದರು.
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
- ಶಿವಮೊಗ್ಗದಲ್ಲಿ ಬಸ್ ಹತ್ತಿ ಆಧಾರ್ ಕಾರ್ಡ್ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?
- ಕೋಟೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ, ಏನೇನೆಲ್ಲ ಪೂಜೆ ನೆರವೇರಿತು?
- ಅಡಿಕೆ ಧಾರಣೆ | 4 ಡಿಸೆಂಬರ್ 2025 | ಯಾವ್ಯಾವ ಅಡಿಕೆಗೆ ಎಷ್ಟಿತ್ತು ರೇಟ್?
![]()