ಶಿವಮೊಗ್ಗ : ಕ್ಯಾನ್ಸರ್ ಎಂಬ ಪದ ಕೇಳಿದ ತಕ್ಷಣ ಜೀವನವೆ ಮುಗಿಯಿತು ಎಂದು ಭಾವಿಸುತ್ತಾರೆ. ಆದರೆ ಭಯವನ್ನು ಬದಿಗಿಟ್ಟರೆ ಕ್ಯಾನ್ಸರ್ ಎಂಬ ಸುರಂಗದಿಂದ ಗೆದ್ದು ಹೊರ ಬರಬಹುದು. ಇದು ಕ್ಯಾನ್ಸರ್ (Cancer) ಗೆದ್ದು ಬಂದ ಕರ್ನಲ್ ಡಾ. ಗುಂಜನ್ ಮಲ್ಹೋತ್ರ ಅನುಭವದ ಮಾತು.
ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಆನ್ಕೊಲಾಜಿ ಬ್ಲಾಕ್‌ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕರ್ನಲ್ ಡಾ. ಗುಂಜನ್ ಮಲ್ಹೋತ್ರ, ತಾವು ಕ್ಯಾನ್ಸರ್‌ನಿಂದ (Cancer) ಪಾರಾದ ಅನುಭವ ಹಂಚಿಕೊಂಡರು.
ಕರ್ನಲ್ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್
ನಾನು ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿದ್ದೇನೆ. ಖಜಕಿಸ್ತಾನದಲ್ಲಿಯು ಭಾರತೀಯ ಸೇನೆಗಾಗಿ ಕೆಲಸ ಮಾಡಿದ್ದೇನೆ. ಭಜದ ಬಳಿ ಗಂಟು ಕಾಣಿಸಿತ್ತು. ಆಗ ಆ್ಯಂಟಿ ಬಯೋಟಿಕ್ ತೆಗೆದುಕೊಂಡು ಗುಣವಾಗಿದ್ದೆ. 15 ದಿನದ ನಂತರ ಪರೀಕ್ಷೆಗೆ ಒಳಪಟ್ಟಾಗ ಕ್ಯಾನ್ಸರ್ ಎಂಬುದು ತಿಳಿಯಿತು. ಆರು ತಿಂಗಳು, 16 ಕಿಮೋಥೆರಪಿ ತೆಗೆದುಕೊಂಡೆ.
ಇದನ್ನೂ ಓದಿ » ನಂಜಪ್ಪ ಆಸ್ಪತ್ರೆಯಲ್ಲಿ ಕ್ಯಾಪ್ಸುಲ್ ಎಂಡೋಸ್ಕೋಪಿ, ಏನಿದು? ಉಪಯೋಗವೇನು?
ಮೊದಲ ಕಿಮೋ ಸಂದರ್ಭ ಯಾವುದೇ ಬದಲಾವಣೆ ಆಗಲಿಲ್ಲ. ಎರಡನೇ ಬಾರಿ ಕೂದಲು ಉದುರಿದವು. ಮಹಿಳಾ ಕ್ಯಾನ್ಸರ್ ರೋಗಿಗಳಲ್ಲಿ ಇದು ಸಾಮಾನ್ಯ. ಸ್ತನ ಕ್ಯಾನ್ಸರ್‌ನಲ್ಲಿ ಮಹಿಳೆಯರು ಸ್ತನ ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕಕ್ಕೀಡಾಗುತ್ತಾರೆ. ಆದರೆ ಪ್ಲಾಸ್ಟಿಕ್ ಸರ್ಜರಿ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದು.
ಇದನ್ನೂ ಓದಿ » ಸಿಗಂದೂರು ಸೇತುವೆ, ಮತ್ತೊಂದು ಮಹತ್ವದ ಬೆಳವಣಿಗೆ, ಫೋಟೊ ಹಂಚಿಕೊಂಡ ಸಂಸದ ರಾಘವೇಂದ್ರ
ಕೋವಿಡ್ ಸಂದರ್ಭ ಸ್ತನ ಕ್ಯಾನರ್ ಎಂದು ಗೊತ್ತಾಗಿದ್ದು. ನಾನು ಬದುಕುವುದೇ ಇಲ್ಲ ಎಂದು ಭಾವಿಸಿದ್ದೆ. ಆದರೆ ದೇವರು ಮತ್ತು ವಿಧಿಯ ಬಗ್ಗೆ ನಂಬಿಕೆ ಹೊಂದಿದ್ದೇನೆ. ನಿತ್ಯ ಧ್ಯಾನ ಮಾಡಲು ಆರಂಭಿಸಿದೆ. ವೈಫಲ್ಯಗಳನ್ನು ಬದಿಗಿಟ್ಟು ಪಾಸಿಟಿವ್ ಆಲೋಚನೆಯಿಂದ ಚಿಕಿತ್ಸೆಗೆ ಒಳಗಾದೆ. ಹಾಗಾಗಿ ಕ್ಯಾನ್ಸರ್ (Cancer) ಎಂಬ ಸುರಂಗದಿಂದ ಹೊರ ಬರಲು ಸಾಧ್ಯವಾಯಿತು.
ಇದನ್ನೂ ಓದಿ » ನಂಜಪ್ಪ ಲೈಫ್ ಕೇರ್‌ನಲ್ಲಿ ಟಿಎವಿಐ ಯಶಸ್ವಿ, ಏನಿದು? ಲಕ್ಷಣಗಳೇನು?
ತೂಕ ನಿಯಂತ್ರಣ, ಮದ್ಯ ಸೇವಿಸದಿರುವುದು, ನಿತ್ಯ ವ್ಯಾಯಾಮದ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ನಿಮಗೆ ಸಹಾಯ ಮಾಡಿದವರು, ಪೋಷಕರು, ಕಷ್ಟದಲ್ಲಿ ಜೊತೆಯಾಗಿ ನಿಂತವರನ್ನು ಮರೆಯಬೇಡಿ.
ಕಾರ್ಯಕ್ರಮದಲ್ಲಿ ನಂಜಪ್ಪ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಬೆನಕಪ್ಪ, ಸಿ.ಇ.ಒ ಡಾ. ಅವಿನಾಶ್, ಡಾ.ನಮ್ರತಾ, ಡಾ.ನಂದಿತಾ, ಡಾ.ಗುರುಚನ್ನ, ಡಾ.ಭಾರತಿ, ಡಾ.ವಿಶಾಲಾಕ್ಷಿ ಮೋಗಿ, ಡಾ.ಶಶಿಕಲಾ, ಡಾ.ಗೋವರ್ಧನ್, ಡಾ.ಶರತ್ ಚಂದ್ರ, ಡಾ.ಪ್ರಿಯಂವದಾ, ಡಾ.ನರೇಂದ್ರ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಯಶಸ್ಸಿಗೆ ಬೇಕು ಈ 3 ತತ್ವ, ವಿದ್ಯಾರ್ಥಿಗಳಿಗೆ ಸಕ್ಸಸ್ ಸೀಕ್ರೆಟ್ ತಿಳಿಸಿದ ನಂಜಪ್ಪ ಟ್ರಸ್ಟ್ ಅಧ್ಯಕ್ಷ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200