SHIVAMOGGA LIVE NEWS, 25 DECEMBER 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಹೊಂಗಿರಣ ಸಂಸ್ಥೆ ವತಿಯಿಂದ ಕುವೆಂಪು ನಾಟಕೋತ್ಸವ (Drama Festival) ಆಯೋಜಿಸಲಾಗಿದೆ. ಡಿಸೆಂಬರ್ 27ರಿಂದ ಮೂರು ದಿನ ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ಕ್ಕೆ ನಾಟಕಗಳು ಆರಂಭವಾಗಲಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಂಗಿರಣ ಸಂಸ್ಥೆಯ ಸಾಸ್ವೆಹಳ್ಳಿ ಸತೀಶ್, ಹೊಂಗಿರಣೋತ್ಸವದಲ್ಲಿ ಕುವೆಂಪು ನಾಟಕೋತ್ಸವ ನಡೆಯುತ್ತಿದೆ. ಕುವೆಂಪು ಅವರ ಶಿಷ್ಯ, ವಿಶ್ರಾಂತ ಪ್ರಚಾರ್ಯ ಪ್ರೊ. ಪಂಚಾಕ್ಷರಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಹಿರೇಗೋಣಿಗೆರೆ ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್.ಮಂಜುನಾಥ್, ಪ್ರಜಾವಾಣಿ ಪತ್ರಿಕೆಯ ಬೆಂಗಳೂರು ವರದಿಗಾರ ಚಂದ್ರಹಾಸ ಹಿರೇಮಳಲಿ, ಕನ್ನಡ ಮೀಡಿಯಂ ವಾಹಿನಿಯ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಗುತ್ತಿದೆ.
ಸಾಸ್ವೆಹಳ್ಳಿ ಸತೀಶ್, ಹೊಂಗಿರಣ ಸಂಸ್ಥೆ
![]()
ಮೂರ ದಿನ ಮೂರು ನಾಟಕ
ಡಿ.27ರಂದು ರಾವಣ ದರ್ಶನಂ ನಾಟಕ ಪ್ರದರ್ಶನವಾಗಲಿದೆ. ರಾಮಾಯಣ ದರ್ಶನಂ ಕೃತಿ ಆಧಾರಿತ ನಾಟಕದಲ್ಲಿ ರಾವಣ ಪಾತ್ರವನ್ನು ನಾಟಕ ಮಾಡಲಾಗುತ್ತದೆ. ಸಾಸ್ವೆಹಳ್ಳಿ ಸತೀಶ್ ಇದರ ನಿರ್ದೇಶನ ಮಾಡಿದ್ದಾರೆ.

ಡಿ.28ರಂದು ಬೊಮ್ಮನಹಳ್ಳಿಯ ಕಿಂದರಿ ಜೋಗಿ ನಾಟಕ ಪ್ರದರ್ಶನವಾಗಲಿದೆ. ಶೃತಿ ಆದರ್ಶ ಅವರು ಇದನ್ನು ನಿರ್ದೇಶಿಸಿದ್ದಾರೆ. ಆಯನೂರು ಭಾಗದ ಗ್ರಾಮೀಣ ಮಕ್ಕಳು ನಾಟಕದಲ್ಲಿ ಅಭಿನಯಿಸಿದ್ದಾರೆ.
ಡಿ.29ರಂದು ನನ್ನ ಗೋಪಾಲ ನಾಟಕ ಪ್ರದರ್ಶನವಾಗಲಿದೆ. ಸ್ವಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ.

ಮೂರು ನಾಟಕಗಳಿಗೆ ಪ್ರವೇಶ ದರ 100 ರೂ. ನಿಗದಿಪಡಿಸಲಾಗಿದೆ. ಒಂದೇ ನಾಟಕಕ್ಕೆ 50 ರೂ. ಟಿಕೆಟ್ ದರ ಇರಲಿದೆ. ಡಿ.29ರಂದು ಸಮಾರೋಪ ಸಮಾರಂಭ ನಡೆಯಲಿದೆ. ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ.ಸಾಗರ ಸಮಾರೋಪ ನುಡಿ ನುಡಿಯಲಿದ್ದಾರೆ. ಶಿಕಾರಿಪುರದ ಅರಣ್ಯ ಸಂರಕ್ಷಕ ರೇವಣ ಸಿದ್ದಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಗುತ್ತದೆ.
ಸಾಸ್ವೆಹಳ್ಳಿ ಸತೀಶ್, ಹೊಂಗಿರಣ ಸಂಸ್ಥೆ
![]()
ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ರಾವ್ ಎಲ್ಲೂರ್, ವರುಣ್ ಸಿಂಗ್, ಗಣೇಶ ಸಹ್ಯಾದ್ರಿ, ಚಂದ್ರಶೇಖರ್ ಹಿರೇಗೋಣಿಗೆರೆ ಇದ್ದರು.
ಇದನ್ನೂ ಓದಿ » ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಸ್ವಲ್ಪ ಯಾಮಾರಿದರೆ ನಿಮ್ಮ ಪ್ರಾಣಕ್ಕೆ ಸಂಚಕಾರ ಫಿಕ್ಸ್
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





