ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 16 NOVEMBER 2024 : ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕರ ಸ್ಥಾನದ ಚುನಾವಣೆಯ (Election) ಫಲಿತಾಂಶ ಪ್ರಕಟವಾಗಿದೆ. ಸಿ.ಎಸ್.ಷಡಾಕ್ಷರಿ ಬಣ ಭರ್ಜರಿಗೆ ಗೆಲುವು ಸಾಧಿಸಿದೆ.
28 ನಿರ್ದೇಶಕರ ಆಯ್ಕೆಗೆ ಶಿವಮೊಗ್ಗದ ಬಿ.ಹೆಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತದಾನ ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ, ಬಳಿಕ ಅಲ್ಲಿಯೇ ಮತ ಎಣಿಕೆ ಮಾಡಲಾಯಿತು.
ಷಡಾಕ್ಷರಿ ಬಣಕ್ಕೆ ಭರ್ಜರಿ ಗೆಲುವು
ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಒಟ್ಟು 66 ನಿರ್ದೇಶಕರ ಆಯ್ಕೆಯಾಗಲಿದೆ. ಈಗಾಗಲೇ 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರೆಲ್ಲ ಸಿ.ಎಸ್.ಷಡಾಕ್ಷರಿ ಬಣಕ್ಕೆ ಸೇರಿದ್ದಾರೆ. ಇವತ್ತು ಚುನಾವಣೆಯಲ್ಲಿ (Election) 28 ನಿರ್ದೇಶಕರ ಪೈಕಿ ಸಿ.ಎಸ್.ಷಡಾಕ್ಷರಿ ಬಣದ 24 ಮಂದಿ ಆಯ್ಕೆಯಾಗಿದ್ದಾರೆ. ಒಟ್ಟು 66 ನಿರ್ದೇಶಕರ ಪೈಕಿ 62 ಮಂದಿ ಷಡಾಕ್ಷರಿ ಬಣದವರು ಆಯ್ಕೆಯಾಗಿದ್ದಾರೆ.
ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ನಮ್ಮ ಅವಧಿಯಲ್ಲಿ ಮಾಡಿದ ಕೆಲಸವನ್ನು ಗುರುತಿಸಿದ್ದಾರೆ. ನಮ್ಮ ಬಣದವರೆ ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ನೌಕರರ ಪರವಾಗಿ ಮುಂದೆಯೂ ಕೆಲಸ ಮಾಡುತ್ತೇವೆ. ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.
ಸಿ.ಎಸ್.ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ
ಇವತ್ತು ಯಾರೆಲ್ಲ ಗೆದ್ದಿದ್ದಾರೆ?
ಗಿರೀಶ್.ಬಿ (ಕೃಷಿ ಇಲಾಖೆ ತಾಂತ್ರಿಕ ತರಬೇತಿ), ಸತ್ಯನಾರಾಯಣ.ಜಿ.ಹೆಚ್ (ಕಂದಾಯ ಇಲಾಖೆ), ದೀಪಕ್.ಪಿ.ಎಸ್ (ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ), ಕಿರಣ್.ಹೆಚ್ (ಜಿಲ್ಲಾ ಪಂಚಾಯತಿ), ಪ್ರವೀಣ್ ಕುಮಾರ್.ಜಿ (ತಾಲೂಕು ಪಂಚಾಯಿತಿ), ಮಧು ಸೂದನ್ (ಅಬಕಾರಿ ಇಲಾಖೆ)
ಇದನ್ನೂ ಓದಿ » ತ್ಯಾವರೆಕೊಪ್ಪ ಮೃಗಾಲಯಕ್ಕೆ ನಾಲ್ಕು ಹೊಸ ಬಗೆಯ ಪ್ರಾಣಿ, ಪಕ್ಷಿ ಪ್ರಭೇದ
ಕೊಟ್ರೇಶ್ (ಸಮಾಜ ಕಲ್ಯಾಣ ಇಲಾಖೆ), ಅನಿತಾ.ವಿ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ), ರಂಗನಾಥ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ), ಸತ್ಯಭಾಮ.ಎಸ್.ಜಿ (ಮೀನುಗಾರಿಕೆ ಇಲಾಖೆ), ರಾಜು ಲಿಂಬು ಚೌಹಾಣ್ (ಅರಣ್ಯ ಇಲಾಖೆ), ಡಾ.ಗುಡದಪ್ಪ ಕಸಬಿ (ಆರೋಗ್ಯ ಇಲಾಖೆ), ಡಾ.ಸಿ.ಎ ಹಿರೇಮಠ್ (ಆಯುಷ್ ಇಲಾಖೆ), ಮಹೇಶ.ಪಿ.ಎಲ್ (ಇಎಸ್ಐ), ರಮೇಶ್.ಎಸ್.ವೈ (ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ), ಮಹೇಶ್.ಕೆ.ಹೆಚ್ (ಗ್ರಂಥಾಲಯ ಇಲಾಖೆ).
ಇದನ್ನೂ ಓದಿ » ಸರ್ಕಾರಿ ನೌಕರರ ಸಂಘ, ಮತದಾನ, ಅಭ್ಯರ್ಥಿಗಳಿಗೆ ಢವಢವ
ಲಿಂಗಪ್ಪ ಮತ್ತು ಧರ್ಮಪ್ಪ (ಪ್ರೌಢಶಾಲಾ ವಿಭಾಗ), ಶಶಿಧರ್.ಡಿ.ಟಿ (ಪದವಿ ಪೂರ್ವ ಶಿಕ್ಷಣ), ಧನ್ಯ ಕುಮಾರ್ (ಪ್ರಥಮ ದರ್ಜೆ ಕಾಲೇಜು), ಹನುಮಂತಪ್ಪ.ಜಿ (ಮಹಿಳಾ ಪಾಲಿಟೆಕ್ನಿಕ್), ಅಣ್ಣಪ್ಪ.ವಿ.ಬಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ), ರವಿಕಿರಣ್.ವೈ (ಗಣಿ ಮತ್ತು ಭೂ ವಿಜ್ಞಾನ ಇಲಾಖೆ), ಚನ್ನಕೇಶವ ಮೂರ್ತಿ (ಭೂಮಾಪನ ಮತ್ತು ಕಂದಾಯ ಇಲಾಖೆ), ಸುಬ್ರಮಣ್ಯ ಜಾದವ್ (ಶಾಲಾ ಶಿಕ್ಷಣ ಇಲಾಖೆ), ವಿಜಯ್ ಆಂಟೊ ಸಗಾಯ್, ಅಶೋಕ್.ಟಿ.ಜಿ, ನರಸಿಂಹ.ಕೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸ್ಪತ್ರೆ ಮತ್ತು ಇತರ ಇಲಾಖೆ) ಗೆಲುವು ಸಾಧಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422