SHIVAMOGGA LIVE| 24 JUNE 2023
SHIMOGA : ಚಿನ್ನಾಭರಣ ಖರೀದಿಗೆ ತೆರಳುತ್ತಿದ್ದಾಗ (Gold Smith) ಲಕ್ಷಾಂತರ ರೂ. ಹಣವಿದ್ದ ಬ್ಯಾಗ್ ಕಳ್ಳತನವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಏನಿದು ಪ್ರಕರಣ? ಹೇಗಾಯ್ತು ಕಳ್ಳತನ?
ದಾವಣಗೆರೆಯ ಚಿನ್ನಾಭರಣ ವ್ಯಾಪಾರಿ (Gold Smith) ಗೌರೀಶ್ ವರ್ಣೇಕರ್ ಎಂಬುವವರು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದರು. ಅಲ್ಲಿ ಚಿನ್ನಾಭರಣ ಖರೀದಿಸಲು 30 ಲಕ್ಷ ರೂ. ಹಣವನ್ನು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ಮಧ್ಯರಾತ್ರಿ 1 ಗಂಟೆ ಹೊತ್ತಿಗೆ ಶಿವಮೊಗ್ಗ ನಿಲ್ದಾಣಕ್ಕೆ ಬಸ್ ತಲುಪಿದೆ. ಈ ವೇಳೆ ಗೌರೀಶ್ ವರ್ಣೇಕರ್ ಬ್ಯಾಗನ್ನು ತಮ್ಮ ಸೀಟಿನ ಮೇಲಿಟ್ಟು ಬಸ್ಸಿನಿಂದ ಕೆಳಗಿಳಿದಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೆಳಗ್ಗೆ ಬಸ್ ಇಳಿಯುವ ಹೊತ್ತಿಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗೆ ಕಾದಿತ್ತು ಶಾಕ್
ಮಗನಿಗೆ ಫೋನ್ ಮಾಡಿ ಮಾತನಾಡಿದ ಬಳಿಕ ಬಸ್ ಹತ್ತಿ ಸೀಟ್ ಬಳಿ ಬಂದಾಗ ಗೌರೀಶ್ ವರ್ಣೇಕರ್ ಅವರ ಬ್ಯಾಗ್ ಇರಲಿಲ್ಲ. ಆ ಜಾಗದಲ್ಲಿ ಅದೇ ಬಣ್ಣದ ಮತ್ತೊಂದು ಬ್ಯಾಗ್ ಇತ್ತು. ಇದರಿಂದ ಆತಂಕಕ್ಕೀಡಾದ ಅವರು ಎಲ್ಲೆಡೆ ಹುಡುಕಾಡಿದರು. ಆದರೆ ಬ್ಯಾಗ್ ಸಿಕ್ಕಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಮೊದಲ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ರೆಡಿ, ಹೇಗಿದೆ? ಎಷ್ಟು ಕಾರ್, ಬೈಕ್ ನಿಲ್ಲಿಸಬಹುದು?
30 ಲಕ್ಷ ರೂ. ಹಣ ಕಳ್ಳತನ ಆಗಿರುವ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





