ಶಿವಮೊಗ್ಗ: ಹೊನ್ನಾಳಿ ರಸ್ತೆಯ ಫ್ಲೈ ಓವರ್ ಬಳಿ ರಿಪೇರಿ ಕಾಮಗಾರಿ ರೈಲ್ವೆ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆರು ಗಂಟೆಗು ಹೆಚ್ಚು ಹೊತ್ತಿನಿಂದ ಗೂಡ್ಸ್ ರೈಲು (Goods Train) ಅನ್ ಲೋಡ್ ಆಗದೆ ನಿಂತಲ್ಲಿಯೇ ನಿಲ್ಲುವಂತಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ರೈಲ್ವೆ ನಿಲ್ದಾಣದಲ್ಲಿ ಕೊನೆಯ ಪ್ಲಾಟ್ ಫಾರಂ ಅನ್ನು ಗೂಡ್ಸ್ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಗೂಡ್ಸ್ ರೈಲುಗಳ ಬಳಿ ಲಾರಿಗಳು ತೆರಳಲು ಅನುವಾಗುವಂತೆ ಸಂರ್ಪಕ ರಸ್ತೆಯನ್ನು ನಿರ್ಮಿಸಲಾಗಿದೆ. ಶಾಂತಿನಗರ ಕ್ರಾಸ್ ಬಳಿ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಪಕ್ಕದಿಂದ ಲಾರಿಗಳು ರೈಲ್ವೆ ನಿಲ್ದಾಣದ ಒಳಗೆ ಪ್ರವೇಶಿಸುವತ್ತವೆ. ಈಗ ಸಂಪರ್ಕ ರಸ್ತೆ ಅಗೆದಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಲಾರಿಗಳು ರೈಲ್ವೆ ನಿಲ್ದಾಣದೊಳಗೆ ತಲುಪಲು ಆಗದಂತಾಗಿದೆ.
ಇಂದು ಬೆಳಗ್ಗೆ ರಸಗೊಬ್ಬರದ ಲೋಡ್ ಹೊತ್ತು ಗೂಡ್ಸ್ ರೈಲು ಆಗಮಿಸಿದ್ದು, ಅನ್‌ಲೋಡ್ ಮಾಡುವುದು ಕಷ್ಟವಾಗಿದೆ. ಶಿವಮೊಗ್ಗಕ್ಕೆ ಪ್ರತಿ ತಿಂಗಳು ಕನಿಷ್ಠ 20 ದಿನವಾದರು ಗೂಡ್ಸ್ ರೈಲುಗಳು ಆಗಮಿಸುತ್ತವೆ. ಸಾಮಾನ್ಯವಾಗಿ ಅಕ್ಕಿ, ಜೋಳ, ಗೊಬ್ಬರ ಹೊತ್ತು ತರುತ್ತವೆ.


ಇದನ್ನೂ ಓದಿ » ಇಡ್ಲಿ ಗಾಡಿಯಲ್ಲಿ ಗ್ರಾಹಕ ಬಿಟ್ಟು ಹೋದ ಬ್ಯಾಗ್‌ನಲ್ಲಿತ್ತು ₹1,00,000 ಹಣ, ಮುಂದೇನಾಯ್ತು?
Goods Train
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





