ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 1 AUGUST 2023
SHIMOGA : ಹಾಫ್ ಹೆಲ್ಮೆಟ್ ವಿರುದ್ಧ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾಗಾಗಿ ವಾಹನ ಸವಾರರು ಫುಲ್ ಹೆಲ್ಮೆಟ್ (Helmet) ಖರೀದಿಗೆ ಮುಗಿಬಿದ್ದಿದ್ದಾರೆ. ಐಎಸ್‌ಐ ಗುರುತಿನ ಹೆಲ್ಮೆಟ್‌ಗಳ ಮಾರಾಟ ನಾಲ್ಕು ಪಟ್ಟು ಹೆಚ್ಚಾಗಿದೆ.
ಅಸುರಕ್ಷಿತ ಹಾಫ್ ಹೆಲ್ಮೆಟ್ ವಿರುದ್ಧ ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ಕಳೆದ ವಾರ ದಿಢೀರ್ ಕಾರ್ಯಾಚರಣೆ ನಡೆಸಿದ್ದರು. ದ್ವಿಚಕ್ರ ವಾಹನ ಸವಾರರಿಂದ ಹಾಫ್ ಹೆಲ್ಮೆಟ್‌ಗಳನ್ನು (Helmet) ಕಸಿದುಕೊಂಡು ಕಳುಹಿಸುತ್ತಿದ್ದರು. ಅಲ್ಲದೆ ಅಂಗಡಿಗಳ ಮೇಲೆ ದಾಳಿ ನಡೆಸಿ ಹಾಫ್ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದರು.
ಫುಲ್ ಹೆಲ್ಮೆಟ್‌ಗೆ ಫುಲ್ ಡಿಮಾಂಡ್
ಪೊಲೀಸರ ಕಾರ್ಯಾಚರಣೆ ಬೆನ್ನಿಗೆ ಫುಲ್ ಹೆಲ್ಮೆಟ್‌ಗೆ ಶಿವಮೊಗ್ಗದಲ್ಲಿ ಫುಲ್ ಡಿಮಾಂಡ್ ಸೃಷ್ಟಿಯಾಗಿದೆ. ವಾಹನ ಸವಾರರು ಐಎಸ್‌ಐ ಗುರುತಿನ ಫುಲ್ ಹೆಲ್ಮೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಹೆಲ್ಮೆಟ್ ಅಂಗಡಿಗಳು, ರಸ್ತೆ ಬದಿಯಲ್ಲಿ ಹೆಲ್ಮೆಟ್ ಮಾರಾಟಗಾರರ ಬಳಿ ಜನ ಗುಂಪುಗೂಡಿ ಖರೀದಿ ಮಾಡುತ್ತಿದ್ದಾರೆ.
ನಾಲ್ಕು ಪಟ್ಟು ಹೆಚ್ಚಾದ ಮಾರಾಟ
ಶಿವಮೊಗ್ಗ ನಗರದಲ್ಲಿ ಐಎಸ್‌ಐ ಗುರುತಿನ ಹೆಲ್ಮೆಟ್ ಮಾರಾಟ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಈ ಮೊದಲು ಪ್ರತಿದಿನ 5 ರಿಂದ 10 ಹೆಲ್ಮೆಟ್ ಮಾರಾಟವಾಗುತ್ತಿದ್ದ ಮಳಿಗೆಗಳಲ್ಲಿ ಈಗ 50ಕ್ಕೂ ಹೆಚ್ಚು ಹೆಲ್ಮೆಟ್‌ಗಳು ಸೇಲ್ ಆಗುತ್ತಿವೆ. ವಾಹನಗಳ ಬಿಡಿ ಭಾಗಗಳ ಮಾರಾಟ ಮಳಿಗೆಗಳ ಮುಂದೆ ಹೆಲ್ಮೆಟ್‌ಗಳೆ ರಾರಾಜಿಸುತ್ತಿವೆ. ಗ್ರಾಹಕರನ್ನು ಸೆಳೆಯಲು ಬಗೆಬಗೆ ಹೆಲ್ಮೆಟ್‌ಗಳನ್ನು ಅಂಗಡಿಗಳ ಮುಂದ ಜೋತು ಹಾಕಲಾಗಿದೆ.
ಹೆಲ್ಮೆಟ್ ಕಳ್ಳರ ಹಾವಳಿ
ಹಾಫ್ ಹೆಲ್ಮೆಟ್ ಕಾರ್ಯಾಚರಣೆ ನಂತರ ಹೆಲ್ಮೆಟ್ ಕಳ್ಳರ ಹಾವಳಿ ಹೆಚ್ಚಾಗಿದೆ. ವಾಹನ ನಿಲ್ಲಿಸಿ ಹ್ಯಾಂಡಲ್‌ಗೆ ಹೆಲ್ಮೆಟ್ ತೂಗು ಹಾಕಿ ಹೋದರೆ ಕಳ್ಳತನವಾಗುತ್ತಿವೆ. ಹಾಗಾಗಿ ಹೆಲ್ಮೆಟ್ ಲಾಕ್‌ಗು ಈಗ ಡಿಮಾಂಡ್ ಸೃಷ್ಟಿಯಾಗಿದೆ. ಅಂಗಡಿಗಳಲ್ಲಿ ಹೆಲ್ಮೆಟ್ ಜೊತೆಗೆ ಲಾಕ್ ಖರೀದಿಸುವವರ ಸಂಖ್ಯೆಯು ಹೆಚ್ಚಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, ರಾಶಿ ರಾಶಿ ಹಾಫ್ ಹೆಲ್ಮೆಟ್ ವಶಕ್ಕೆ, ವಿಡಿಯೋಗಳು ವೈರಲ್
ಹಾಫ್ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ಮತ್ತು ಪೊಲೀಸರು ದಂಡ ವಿಧಿಸುತ್ತಿರುವುದರಿಂದ ವಾಹನ ಸವಾರರು ತಪ್ಪದೆ ಹೆಲ್ಮೆಟ್ ಧರಿಸಲು ಆರಂಭಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422