ಶಿವಮೊಗ್ಗದ ಮನೆ ಮಾಲೀಕರಿಗೆ ಪೊಲೀಸರಿಂದ 4 ಪಾಯಿಂಟ್ ಸೂಚನೆ, ಏನದು? ಯಾಕಾಗಿ ಈ ಪ್ರಕಟಣೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 23 NOVEMBER 2022

SHIMOGA | ಜಿಲ್ಲೆಯಲ್ಲಿ ಮನೆಗಳನ್ನು ಬಾಡಿಗೆಗೆ ಕೊಡುವಾಗ ಮಾಲೀಕರು (house rent) ನಾಲ್ಕು ಪ್ರಮುಖಾಂಶಗಳನ್ನು ಪಾಲಿಸಬೇಕು ಎಂದು ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Atiyas Motors

ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇಕೆ?

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ತೀರ್ಥಹಳ್ಳಿಯ ಶಾರಿಕ್ ಮೈಸೂರಿನಲ್ಲಿ ಮನೆ ಬಾಡಿಗೆಗೆ (house rent) ಪಡೆದಿದ್ದ. ನಕಲಿ ಆಧಾರ್ ಕಾರ್ಡ್ ಬಳಸಿ, ನಕಲಿ ಹೆಸರಿನ ಮೂಲಕ ಮನೆ ಬಾಡಿಗೆಗೆ ಪಡೆದು ವಾಸವಾಗಿದ್ದ. ಅಲ್ಲಿಯೆ ಆತ ಬಾಂಬ್ ತಯಾರಿಸಿರುವ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ಪೊಲೀಸರು ಮನೆ ಬಾಡಿಗೆ ನೀಡುವಾಗ ಪಾಲಿಸಬೇಕಾದ 4 ಪ್ರಮುಖಾಂಶಗಳ ಕುರಿತು ಮಾಹಿತಿ ನೀಡಿದ್ದಾರೆ.

(house rent)

ಯಾವೆಲ್ಲ 4 ಅಂಶ ಪಾಲಿಸಬೇಕು?

ಪ್ರಮುಖಾಂಶ 1 – ಸಾರ್ವಜನಿಕರು ತಮ್ಮ ಮನೆಗಳನ್ನು ಬಾಡಿಗೆಗೆ ಕೊಡುವ ಸಂದರ್ಭ, ಬಾಡಿಗೆದಾರರ ಪೂರ್ವಾಪರ ಪರಿಶೀಲಿಸಬೇಕು. ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಪರಿಶೀಲಿಸಿ, ಮಾಹಿತಿ ಖಚಿತಪಡಿಸಿಕೊಳ್ಳಬೇಕು. ನಂತರವೇ ಬಾಡಿಗೆಗೆ ನೀಡಬೇಕು. ಬಾಡಿಗೆದಾರರ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.

Shimoga nanjappa Hospital

ಪ್ರಮುಖಾಂಶ 2 – ಮನೆ ಬಾಡಿಗೆಗಾಗಿ ಬರುವ ವ್ಯಕ್ತಿಗಳು ನೀಡುವ ಆಧಾರ್ ಕಾರ್ಡನ್ನು ಆಧಾರ್ ಕಾರ್ಡ್ ವೆಬ್ ಸೈಟಲ್ಲಿ ಪರಿಶೀಲಿಸಬೇಕು. ಆಧಾರ್ ಸಂಖ್ಯೆಯನ್ನು ನಮೂದಿಸಿ, ಸೆಂಡ್ ಓ.ಟಿ.ಪಿ ಎಂದು ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ನಲ್ಲಿ ನೋಂದಾಯಿಸಲಾದ ಮೊಬೈಲ್ ನಂಬರ್ ಗೆ ಓ.ಟಿ.ಪಿ ಬರಲಿದೆ. ಆ ಓಟಿಪಿಯು ಆ ವ್ಯಕ್ತಿಯ ಮೊಬೈಲ್ ನಂಬರ್ ಗೆ ಬಂದಿದೆಯೆ ಎಂದು ಪರಿಶೀಲಿಸಿ, ಅಧಾರ್ ಕಾರ್ಡ್ ನೈಜ್ಯತೆ ದೃಢಪಡಿಸಿಕೊಳ್ಳಬೇಕು.

ಪ್ರಮುಖಾಂಶ 3 – ಮನೆ ಬಾಡಿಗೆಗೆ ಬರುವ ವ್ಯಕ್ತಿಗಳು ಮಾಡುತ್ತಿರುವ ಕೆಲಸ ಹಾಗೂ ಕೆಲಸ ಮಾಡುತ್ತಿರುವ ಸ್ಥಳದ ವಿಳಾಸ, ವಿವರವನ್ನು ಪಡೆದುಕೊಳ್ಳಬೇಕು.

ಪ್ರಮುಖಾಂಶ 4 – ಅಪರಿಚಿತ ವ್ಯಕ್ತಿಗಳು ತಮ್ಮ ಏರಿಯಾದಲ್ಲಿ ಮನೆ ಬಾಡಿಗೆಗೆ ಕೇಳಿಕೊಂಡು ಬರುವುದು ಅಥವಾ ವಾಸವಾಗಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬಹುದು. ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ 9480803300 ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಕ್ಲಿಕ್ ಮಾಡಿ ಇದನ್ನೂ ಓದಿ |

Shimoga Nanjappa Hospital

(house rent)

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 23, 2022

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

ಮಾಜಿ ಮಿನಿಸ್ಟರ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಮಾಜಿ ಮಿನಿಸ್ಟರ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

ವಕ್ತರರಾಗಿ ಜಿ.ಡಿ.ಮಂಜುನಾಥ್‌ ನೇಮಕ

ವಕ್ತರರಾಗಿ ಜಿ.ಡಿ.ಮಂಜುನಾಥ್‌ ನೇಮಕ

ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

Leave a Comment