ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 DECEMBER 2022
ಶಿವಮೊಗ್ಗ : ಗ್ರಾಹಕರ ಅನುಕೂಲಕ್ಕಾಗಿ ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ (DCC BANK) ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಇನ್ಮುಂದೆ ಇದರ ಮೂಲಕವೆ ರೈತರು ತಮ್ಮ ಖಾತೆಯಲ್ಲಿರುವ ಹಣ, ಹಿಂದಿನ ವ್ಯವಹಾರದ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಬಾರ್ಡ್ ಪ್ರಾದೇಶಿಕ ಕಚೇರಿಯ ಮುಖ್ಯ ಮಹಾ ಪ್ರಬಂಧಕ ಟಿ.ರಮೇಶ್ ಅವರು ಡಿಸಿಸಿ ಬ್ಯಾಂಕ್ ಆವರಣದಲ್ಲಿ ಆ್ಯಪ್ ಬಿಡುಗಡೆ ಮಾಡಿದರು.
ಆ್ಯಪ್ ಮೊಬೈಲ್ ಗೆ ಹಾಕಿಕೊಳ್ಳುವುದು ಹೇಗೆ?
ಡಿಸಿಸಿ ಬ್ಯಾಂಕ್ ಆ್ಯಪ್ ಮೊಬೈಲ್ ಗೆ ಡೌನ್ ಲೋಡ್ ಮಾಡಿಕೊಳ್ಳಬೇಕು. GOOGLE PLAY STOREನಲ್ಲಿ Shimoga DCCB – Mobile Banking ಎಂದು ಟೈಪ್ ಮಾಡಬೇಕು. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಲೋಗೋ ಜೊತೆಗೆ ಆ್ಯಪ್ ಕಾಣಿಸಲಿದೆ. ಅದನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.
ಡಿಸಿಸಿ ಬ್ಯಾಂಕಿನಲ್ಲಿ ಗ್ರಾಹಕರು ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರನ್ನು ಆ್ಯಪ್ನಲ್ಲಿ ಎಂಟರ್ ಮಾಡಬೇಕು. OTP PASSWORD ಬರಲಿದೆ. ಅದನ್ನು ಆ್ಯಪ್ನಲ್ಲಿ ಎಂಟರ್ ಮಾಡಬೇಕು. ಬಳಿಕ ಆ್ಯಪ್ ಸುರಕ್ಷತೆಗಾಗಿ ನಾಲ್ಕು ನಂಬರಿನ ಸೀಕ್ರೆಟ್ ಪಾಸ್ ವರ್ಡ್ ಎಂಟರ್ ಮಾಡಿಕೊಂಡು, ಲಾಗಿನ್ ಆಗಬಹುದು.
ಹೋಮ್ ಸ್ಕ್ರೀನ್ ನಲ್ಲಿ ಅಕೌಂಡ್ ಮಾಹಿತಿ, ಎಫ್.ಡಿ / ಆರ್.ಡಿ ಖಾತೆ, ಎಂ ಪಾಸ್ ಬುಕ್ ಸೇರಿದಂತೆ 7 OPTIONS ಇದೆ.
ಅಕೌಂಟ್ ಬ್ಯಾಲೆನ್ಸ್ ಪರಿಶೀಲನೆ
ಡಿಸಿಸಿ ಬ್ಯಾಂಕ್ ಆ್ಯಪ್ ಮೊಬೈಲಿನಲ್ಲೇ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಆ್ಯಪ್ನ ಹೋಂ ಸ್ಕ್ರೀನಿನಲ್ಲಿ ACCOUNT DETAILS ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ SAVINGS ACCOUNT, CURRENT ACCOUNT, DEPOSIT ACCOUNT, LOAN ACCOUNT ತೋರಿಸುತ್ತದೆ. ಗ್ರಾಹಕರು ತಮ್ಮ ಖಾತೆಯನ್ನು ಇಲ್ಲಿ ಪರಿಶೀಲಿಸಬಹದು. ಬ್ಯಾಂಕ್ ಬ್ಯಾಲೆನ್ಸ್, ಲೋನ್ ವಿವರಗಳು ಇದರಲ್ಲಿ ಲಭ್ಯವಿದೆ.
ಮುಂದೆ ಮತ್ತಷ್ಟು ಸೌಲಭ್ಯ
ಉದ್ಘಾಟನೆ ಬಳಿಕ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಅವರು, ‘ಮೊದಲ ಹಂತದಲ್ಲಿ ನಾನ್ ಫಂಡ್ ಸೇವೆಗಳನ್ನು ಮಾತ್ರ ಒದಗಿಸಲಾಗುತ್ತಿದೆ. ಗ್ರಾಹಕರ ಖಾತೆಗಳ ಬ್ಯಾಲೆನ್ಸ್, ಮಿನಿ ಪಾಸ್ ಬುಕ್, ಬ್ಯಾಂಕಿನ ಸಾಮಾನ್ಯ ಮಾಹಿತಿಗಳು, ಪಾಸಿಟೀವ್ ಪೇ ಸಿಸ್ಟ್ಂ ನಡಿಯಲ್ಲಿ ಗ್ರಾಹಕರು ನೀಡಿದ ಚೆಕ್ ವಿವರಗಳನ್ನು ಬ್ಯಾಂಕಿಗೆ ಒದಗಿಸಬಹುದಾಗಿದೆ. ಮುಂದೆ ಫಂಡ್ ಆಧಾರಿತ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ತಿಳಿಸಿದರು.
ಓಟಿಪಿ ಬಗ್ಗೆ ಇರಲಿ ಎಚ್ಚರ
ಡಿಸಿಸಿ ಬ್ಯಾಂಕ್ ಮೊಬೈಲ್ ಆ್ಯಪ್ ಬಳಕೆ ಮಾಡುವವರು ಓಟಿಪಿ ಕುರಿತು ಎಚ್ಚರ ವಹಿಸಬೇಕಿದೆ. ‘ಗ್ರಾಹಕರು ತಮ್ಮ ಓಟಿಪಿ, ಪಾಸ್ ವರ್ಡ್, ಎಂಪಿನ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಈ ಕುರಿತು ಗೌಪ್ಯತೆ ಕಾಪಾಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ತಿಳಿಸಿದರು.
ಇದನ್ನೂ ಓದಿ – ಮೈಸೂರಿನಿಂದ ಐರಾವತ ಬಸ್ಸಲ್ಲಿ ಬಂದ ಇಂಜಿನಿಯರ್, ಶಿವಮೊಗ್ಗದಲ್ಲಿ ಇಳಿಯುವಾಗ ಕಾದಿತ್ತು ಶಾಕ್
ಮೊಬೈಲ್ ಆ್ಯಪ್ ಉದ್ಘಾಟನೆ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎಲ್.ಷಡಾಕ್ಷರಿ, ಮುಖ್ಯ ಕಾರ್ಯನಿರ್ವಾಹಕ ನಾಗೇಶ್ ಎಸ್.ಡೋಂಗರೆ, ಸಹಕಾರ ಸಂಘಗಳ ಉಪ ನಿಬಂಧಕ ಜಿ.ವಾಸುದೇವ, ನಬಾರ್ಡ್ ಜಿಲ್ಲಾ ಅಧಿಕಾರಿ ರವಿ ಸೇರಿದಂತೆ ಹಲವರು ಇದ್ದರು.