ಶಿವಮೊಗ್ಗ: ಗ್ರಾಹಕರು ಬಿಟ್ಟು ಹೋಗಿದ್ದ ಇದ್ದ ಚೀಲವನ್ನು (Money) ಇಡ್ಲಿ ಗಾಡಿ ಮಾಲೀಕ ತಿರುಮೂರ್ತಿ ಅವರು ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ವಾಪಸ್ಸು ನೀಡಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಆನವಟ್ಟಿಯ ಮಧುಕೇಶವ್ ಅವರು ನ.4ರಂದು ಸಂಜೆ ಶಿವಮೊಗ್ಗಕ್ಕೆ ಬಂದು ಆಲ್ಗೊಳ ವೃತ್ತದಲ್ಲಿ ಇಡ್ಲಿಗಾಡಿಯಲ್ಲಿ ಉಪಹಾರ ಸೇವನೆಗೆ ಹೋಗಿದ್ದರು. ಉಪಹಾರ ಸೇವನೆ ಸಂದರ್ಭ ಗಾಡಿ ಮೇಲಿಟ್ಟಿದ್ದ ಚೀಲವನ್ನು ಮರೆತು ವಾಪಸ್ಸು ಹೋಗಿದ್ದರು. ತಿರುಮೂರ್ತಿ ಅವರು ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ₹1,00,000 ಹಣ ಇತ್ತು.
ಕೂಡಲೆ ಅವರು ತುಂಗಾನಗರ ಪೊಲೀಸ್ ಠಾಣೆಗೆ ತೆರಳಿ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ ಅವರ ಸಮ್ಮುಖದಲ್ಲಿ ಒಪ್ಪಿಸಿದ್ದರು. ಮಧುಕೇಶವ್ ಅವರು ಮತ್ತೆ ಚೀಲ ಹುಡುಕಿಕೊಂಡು ಗಾಡಿ ಬಳಿ ಬಂದಾಗ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ಸಮ್ಮುಖದಲ್ಲಿ ವಾಪಸ್ಸು ನೀಡಿದರು. ಮಧುಕೇಶವ್ ಅವರು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ತಮ್ಮ ಸ್ನೇಹಿತನ ಚಿಕಿತ್ಸೆಗೆ ಹಣ ಪಾವತಿಸುವ ಸಲುವಾಗಿ ಹಣ ತಂದಿದ್ದರಂತೆ. ತಿರುಮೂರ್ತಿ ಅವರ ಪ್ರಾಮಾಣಿಕತೆಗೆ ಇನ್ಸ್‌ಪೆಕ್ಟರ್ ಗುರುರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ » ಮಹಿಳೆಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ರೆಡಿಯಾಗ್ತಿದೆ ಅಕ್ಕ ಪಡೆ, ನೀವು ಸೇರಬಹುದು, ಹೇಗೆ?
Money
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





