ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ |SHIMOGA NEWS | 27 DECEMBER 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೆಗ್ಗಾನ್ ಆಸ್ಪತ್ರೆ ವೈದ್ಯರಿಗೆ ಬಿಸಿ ಮುಟ್ಟಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಇದಕ್ಕಾಗಿ ತಂಡ ರಚಿಸಲಾಗಿದ್ದು, ವರದಿ ನೀಡುವಂತೆ ಸೂಚಿಸಲಾಗಿದೆ.
ಏನಿದು ತಂಡ? ವರದಿ ಯಾಕೆ?
ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ಸಾರ್ವಜನಿಕರೇ ನೇರವಾಗಿ ದೂರು ಸಲ್ಲಿಸಿದ್ದಾರೆ.
ವಾಟ್ಸಪ್‍ನಲ್ಲಿ ಚಿಕಿತ್ಸೆ ಕೊಡ್ತಾರಂತೆ..!
ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ, ಮೆಗ್ಗಾನ್ ಆಸ್ಪತ್ರೆಗೆ ಬಂದ ರೋಗಿಗಳಿಗೆ ವಾಟ್ಸಪ್ ಮೂಲಕ ಚಿಕಿತ್ಸೆ ಕೊಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರೆ ಇದನ್ನು ದೃಢಪಡಿಸಿದ್ದಾರೆ.
ರೌಂಡ್ಸ್ ಬರಲ್ಲ, ಚೆಕಪ್ ಮಾಡಲ್ಲ
ಸಾಮಾನ್ಯವಾಗಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕರ್ತವ್ಯ ನಿರ್ವಹಿಸಬೇಕು. ಮಧ್ಯಾಹ್ನ ಸುಮಾರು ಒಂದು ಗಂಟೆಯ ವಿರಾಮದ ಅವಧಿ ಇರಲಿದೆ. ಆದರೆ ಹಲವು ವೈದ್ಯರು ಈ ಅವಧಿಯಲ್ಲೂ ಆಸ್ಪತ್ರೆಯಲ್ಲಿ ಇರಲ್ಲ. ಸರಿಯಾಗಿ ರೌಂಡ್ಸ್ ಬರಲ್ಲ, ಬಂದರೂ ಚೆಕಪ್ ನೀಟಾಗಿ ಮಾಡಲ್ಲ ಅನ್ನುವ ದೂರುಗಳಿವೆ.
ಆಸ್ಪತ್ರೆಯಲ್ಲಿ ಮೂಕರ್ಜಿ ಕಾಟ
ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂಕರ್ಜಿ ಕಾಟ ಶುರುವಾಗಿದೆ. ಸಿಬ್ಬಂದಿಗಳೇ ವೈದ್ಯರ ವಿರುದ್ಧ ಮೂಕರ್ಜಿಗಳನ್ನು ಬರೆಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಇತ್ತೀಚೆಗೆ ಮೂಕರ್ಜಿಗಳು ತಲುಪಿವೆ. ಕರ್ತವ್ಯ ಸರಿಯಾಗಿ ನಿಭಾಯಿಸದ ವೈದ್ಯರಿಗೂ ಈ ಮೂಕರ್ಜಿಗಳು ಬಿಸಿ ಮುಟ್ಟಿಸುತ್ತಿವೆ. ಈ ಮಧ್ಯೆ ವೃತ್ತಿ ವೈಷಮ್ಯದಿಂದಲೂ ಕೆಲವರು ಸರಿಯಾಗಿ ಕರ್ತವ್ಯ ನಿರ್ವಹಿಸುವ ವೈದ್ಯರ ವಿರುದ್ಧ ಮೂಕರ್ಜಿಗಳನ್ನು ಬರೆದಿದ್ದಿದೆ.
ಹೊರಗೆ ಔಷಧಿ ಖರೀದಿಸುವಂತೆ ಚೀಟಿ ಬರೆದುಕೊಡುವುದು, ಖಾಸಗಿ ಅಸ್ಪತ್ರೆಗಳಿಗೆ ರೋಗಿಗಳನ್ನು ರೆಫರ್ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ. ಮೆಗ್ಗಾನ್ ಆಸ್ಪತ್ರೆ ಆಡಳಿತ ಮಂಡಳಿ ಜೊತೆಗೆ ಇತ್ತೀಚಗೆ ಸಚಿವ ಈಶ್ವರಪ್ಪ ನಡೆಸಿದ ಸಭೆಯಲ್ಲಿ ಇವೆಲ್ಲವು ಚರ್ಚೆಯಾಗಿವೆ. ಈ ನಡುವೆ ಇಂತಹ ವೈದ್ಯರಿಗೆ ಚುರುಕು ಮುಟ್ಟಿಸುವ ಸಲುವಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಒಂದು ಸ್ಕ್ವಾಡ್ ರಚಿಸಲಾಗಿದೆ.
ಏನಿದು ಸ್ಕ್ವಾಡ್? ಕೆಲಸವೇನು?
ಬೇರೆಡೆ ಕರ್ತವ್ಯ ನಿರ್ವಹಿಸವ ಮೆಗ್ಗಾನ್ ಆಸ್ಪತ್ರೆ ವೈದ್ಯರು ಯಾರು, ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನುವುದರ ಪರಿಶೀಲನೆ ನಡೆಸಿ, ಈ ಸ್ಕ್ವಾಡ್ ವರದಿ ಸಿದ್ಧಪಡಿಸಲಿದೆ. ಮೆಗ್ಗಾನ್ ಆಡಳಿತ ಮಂಡಳಿಗೆ ವರದಿ ನೀಡಲಾಗುತ್ತದೆ. ಇಂತಹ ವೈದ್ಯರಿಗೆ ನೊಟೀಸ್ ನೀಡಿ, ಕಾನೂನು ಕ್ರಮ ಕೈಗೊಳ್ಳುವ ಕುರಿತು ಆಲೋಚಿಸಲಾಗಿದೆ.
ಸುತ್ತಮುತ್ತಲ ಊರುಗಳಿಗೆ ಮೆಗ್ಗಾನ್ ಆಸ್ಪತ್ರೆಯೇ ದೊಡ್ಡಾಸ್ಪತ್ರೆ. ಜಿಲ್ಲೆಯ ರೋಗಿಗಳು ಮಾತ್ರವಲ್ಲ, ಪಕ್ಕದ ಜಿಲ್ಲೆಗಳ ಹೊನ್ನಾಳಿ, ಚನ್ನಗಿರಿ, ತರೀಕೆರೆ, ಕಡೂರು ತಾಲೂಕುಗಳು, ಹಾವೇರಿ ಜಿಲ್ಲೆಯಿಂದಲೂ ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಇಂತಹ ಸಂದರ್ಭ ಸರಿಯಾದ ಚಿಕಿತ್ಸೆ ನೀಡಬೇಕಿರುವುದು ಅಗತ್ಯ. ಹಾಗಾಗಿ ಮೆಗ್ಗಾನ ಆಸ್ಪತ್ರೆಗೆ ಮೇಜರ್ ಸರ್ಜರಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]