SHIVAMOGGA LIVE NEWS | PARK| 28 ಏಪ್ರಿಲ್ 2022
ಶಿವಮೊಗ್ಗದ ಹಳೆ ಜೈಲು ಆವರಣದ ಫ್ರೀಡಂ ಪಾರ್ಕ್’ಗೆ ಚಂದ್ರಶೇಖರ್ ಆಜಾದ್ ಪಾರ್ಕ್ ಎಂದು ನಾಮಕರಣ ಮಾಡಬೇಕು. ಈ ಪಾರ್ಕ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಎಸ್.ದತ್ತಾತ್ರಿ ಅವರು ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಏನಿದೆ?
ಫ್ರೀಡಂ ಪಾರ್ಕ್’ಗೆ ಚಂದ್ರಶೇಖರ್ ಆಜಾದ್ ಅವರ ಹೆಸರು ಇಡಬೇಕು. ಆದರೆ ಅದರ ನಿರ್ವಹಣೆ, ವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು.
ಫ್ರೀಡಂ ಪಾರ್ಕ್’ನಲ್ಲಿ ವಾಕಿಂಗ್ ಪಾತ್ ನಿರ್ಮಿಸಲಾಗಿದೆ. ಇದರ ಮೇಲೆ ದ್ವಿಚಕ್ರ ವಾಹನ ಚಲಾವಣೆ ಮಾಡಲಾಗುತ್ತಿದೆ. ಹಾಗಾಗಿ ವಾಕಿಂಗ್ ಮಾಡುವವರಿಗೆ ಸಮಸ್ಯೆ ಆಗುತ್ತಿದೆ. ಅಲ್ಲದೆ ವಾಕಿಂಗ್ ಪಾತ್ ಹಾಳಾಗುವ ಸಂಭವವಿದೆ. ಇಲ್ಲಿ ವಾಹನ ಚಲಾವಣೆಗೆ ಕಡಿವಾಣ ಹಾಕಬೇಕು.
ರಾತ್ರಿ ವೇಳೆ ಫ್ರೀಡಂ ಪಾರ್ಕ್’ನಲ್ಲಿ ಮದ್ಯ ಸೇವನೆ ಮಾಡಿ, ಬಾಟಲಿಗಳು, ತಿಂಡಿ, ತಿನಿಸುಗಳನ್ನು ಅಲ್ಲಿಯೆ ಬಿಸಾಡಿ ಹೋಗುತ್ತಿದ್ದಾರೆ. ಇವುಗಳಿಗೆ ನಿಯಂತ್ರಣ ಹೇರಲು ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು. ಅಲ್ಲದೆ ರಾತ್ರಿ ವೇಳೆ ವಿದ್ಯುತ್ ದೀಪಗಳನ್ನು ಬಂದ್ ಮಾಡುವ ವ್ಯವಸ್ಥೆ ಮಾಡಬೇಕು. ನಿಯಮಿತವಾಗಿ ಶೌಚಾಲಯಗಳ ಸ್ವಚ್ಛತೆ ಮಾಡಿಸಬೇಕು ಎಂದು ಎಸ್.ದತ್ತಾತ್ರಿ ಅವರು ಮನವಿಯಲ್ಲಿ ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮೇ 5 ರಂದು ಅಧಿಕಾರಿಗಳೊಂದಿಗೆ ಫ್ರೀಡಂ ಪಾರ್ಕ್ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಮನವಿ ಸಲ್ಲಿಸುವ ವೇಳೆ ಪ್ರಮುಖರಾದ ರಿಷಿಕೇಶ್ ಪೈ, ಸುಹಾಸ್ ಶಾಸ್ತ್ರಿ, ದಿನೇಶ್ ಆಚಾರ್ಯ, ಶರತ್ ಕಲ್ಯಾಣಿ, ಚೇತನ್, ವಿನ್ಸೆಂಟ್, ಶ್ರೀಹರಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಗಾಂಧಿ ಬಜಾರ್’ಗೆ ಹೋಗುತ್ತಿದ್ದ ಯುವಕನ ಮೇಲೆ ಬೈಕಲ್ಲಿ ಅಡ್ಡಾದಿಡ್ಡಿ ಬಂದವರಿಂದ ಹಲ್ಲೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200