ಶಿವಮೊಗ್ಗ ಲೈವ್.ಕಾಂ | SHIMOGA NEWS | 15 MARCH 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಆಯೋಜಿಸಲಾಗಿರುವ ನಂಜಪ್ಪ 3ಕೆ ರನ್‍ಗೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಚಾಲನೆ ನೀಡಿದರು. ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಮುಂಭಾಗದಿಂದ 3ಕೆ ರನ್ ಆರಂಭವಾಗಿದೆ.
ನಂಜಪ್ಪ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಸೇರಿ ಸುಮಾರು 200 ಮಂದಿ ‘ನಂಜಪ್ಪ 3ಕೆ ರನ್’ನಲ್ಲಿ ಭಾಗವಹಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಈ ಮ್ಯಾರಥಾನ್ ನಡೆಯಲಿದೆ.
ಇದನ್ನೂ ಓದಿ | ಕ್ಯಾನ್ಸರ್ ಜಾಗೃತಿಗೆ ನಂಜಪ್ಪ ಆಸ್ಪತ್ರೆಯಿಂದ ಸೈಕಲ್ ಜಾಥಾ ಆರಂಭ, ಸಮಾಲೋಚನ ಸೌಲಭ್ಯ
‘ನಂಜಪ್ಪ 3ಕೆ ರನ್’ ಉದ್ಘಾಟನೆಗೂ ಮೊದಲು ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಪ್ರತಿಯೊಬ್ಬರಿಗೂ ದೇಹದ ಅಂಗಾಂಗಗಳ ಆರೋಗ್ಯದ ಕುರಿತು ಅರಿವು ಇರಬೇಕು. ಕಿಡ್ನಿಯ ಆರೋಗ್ಯದ ಕುರಿತು ಕೆಲವು ವರ್ಷದ ಹಿಂದಿನವರೆಗೂ ಇಷ್ಟೊಂದು ಜಾಗೃತಿ ಇರಲಿಲ್ಲ. ಈಗ ಕಿಡ್ನಿ ವಿಚಾರದಲ್ಲಿ ಹೆಚ್ಚು ತಿಳಿದುಕೊಳ್ಳುತ್ತಿದ್ದೇವೆ. ಅದರ ಆರೋಗ್ಯದ ಕುರಿತು ಎಲ್ಲರೂ ನಿಗಾ ವಹಿಸಬೇಕು ಎಂದರು.
ಡಯಾಲಿಸಿಸ್ ಘಟಕಕ್ಕೆ 25 ವರ್ಷ
1995ರ ಫೆ. 23ರಂದು ನಂಜಪ್ಪ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಿದ್ದು, ಅಂದಿನಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಉತ್ತರಕನ್ನಡ ಜಿಲ್ಲೆಗಳ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಡಯಾಲಿಸಿಸ್ ಉಪಕರಣಗಳೊಂದಿಗೆ ದಿನದಲ್ಲಿ 8 ರೋಗಿಗಳಿಗೆ ಡಯಾಲಿಸಿಸ್ ಮಾಡಲು ಶುರುವಾದ ಚೊಚ್ಚಲು ಪಯಣ ಪ್ರಸ್ತುತ 14 ಅತಿ ಉತ್ತಮ ಹಾಗೂ ಅತ್ಯಾಧುನಿಕ ಉಪಕರಣಗಳ ಮುಖಾಂತರ ತಿಂಗಳಿಗೆ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ.

ನಂಜಪ್ಪ ಆಸ್ಪತ್ರೆ ಮಲೆನಾಡಿನಲ್ಲಿ ಮೊದಲ ಬಾರಿಗೆ ಹಿಮೋಡಯಾಲಿಸಿಸ್, ಥೆರಪುಟಿಕ್ ಪ್ಲಾಸ್ಕಾಪೆರಿಸಿಸ್ ಹಾಗೂ ಕಂಟಿನ್ಯೂಸ್ ಆಂಬ್ಯುಲೇಟರಿ ಪೆರಿಟೋನಿಯಲ್ ಡಯಾಲಿಸಿಸ್ (ಸಿಎಪಿಡಿ)ಯನ್ನು ಪರಿಚಯಿಸಿದೆ. ಇತ್ತೀಚಿನ ಕಂಟಿನ್ಯೂಸ್ ರೀನಲ್ ರಿಪ್ಲೇಸ್ಮೆಂಟ್ ಥೆರಪಿ ಮಷಿನ್ ಪ್ರಿಸ್ಮಪ್ಲೆಕ್ಸ್ (ಬ್ಯಾಕ್ಟರ್) ಸೇರ್ಪಡೆ ಮಾಡಿದ ಹೆಗ್ಗಳಿಕೆಯನ್ನೂ ಹೊಂದಿದೆ
ಪ್ರತಿ ವರ್ಷ 3ಕೆ ರನ್
ನಂಜಪ್ಪ ಆಸ್ಪತ್ರೆ ವತಿಯಿಂದ ಇನ್ಮುಂದೆ ಪ್ರತಿ ವರ್ಷ ‘ನಂಜಪ್ಪ 3ಕೆ ರನ್’ ಆಯೋಜಿಸಲಾಗುತ್ತದೆ. ಕಿಡ್ನಿ ಮತ್ತು ಅದರ ಆರೋಗ್ಯ ಕುರಿತು ಜಾಗೃತಿಗಾಗಿ ಈ ರನ್ ಆಯೋಜನೆ ಮಾಡಲಾಗುತ್ತಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






