SHIVAMOGGA LIVE NEWS | 12 JANUARY 2024
SHIMOGA : ಮಂಗನಕಾಯಿಲೆಗೆ (ಕೆಎಫ್‌ಡಿ) ಬಲಿಯಾದ ಹೊಸನಗರದ ಯುವತಿಯ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಜಿಲ್ಲಾ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಬೇಕು. ಕೆಎಫ್‌ಡಿಯನ್ನು ರಾಷ್ಟ್ರಿಯ ಕಾಯಿಲೆಯಾಗಿ ಘೋಷಿಸಬೇಕು ಎಂದು ಕೆಎಫ್‌ಡಿ ಜನಜಾಗೃತಿ ಒಕ್ಕೂಟದ ಕೆ.ಪಿ.ಶ್ರೀಪಲ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ಶ್ರೀಪಾಲ್, ಮೂರು ಪ್ರಮುಖ ಸಂಗತಿಗಳನ್ನು ಪ್ರಸ್ತಾಪಿಸಿದರು.
ಏನೆಲ್ಲ ಪ್ರಸ್ತಾಪ ಮಾಡಿದರು?
ಹೊಸನಗರ ತಾಲೂಕು ಅರಮನೆಕೊಪ್ಪದ ಯುವತಿ ಅನನ್ಯಾ ರಕ್ತದ ಮಾದರಿ ಪರೀಕ್ಷಿಸಿದಾಗ ಕೆಎಫ್‌ಡಿ ದೃಢಪಟ್ಟಿತ್ತು. ಆದರು ನೆಗೆಟಿವ್ ಎಂದು ವರದಿ ನೀಡಲಾಗಿತ್ತು. ಯುವತಿ ಆರೋಗ್ಯ ಸ್ಥಿತಿ ಹದಗೆಟ್ಟಾಗ ಮೆಗ್ಗಾನ್ ಆಸ್ಪತ್ರೆಯಿಂದ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಪ್ಪು ಮಾಹಿತಿ ಒದಗಿಸಿದ್ದೇ ಯುವತಿ ಸಾವಿಗೆ ಕಾರಣ. ಆದ್ದರಿಂದ ಆಕೆಯದ್ದು ವ್ಯವಸ್ಥಿದ ಮರ್ಡರ್. ಈಗ ಯುವತಿ ಅಕ್ಕನಿಗು ಕೆಎಫ್‌ಡಿ ದೃಢಪಟ್ಟಿದೆ. ಆದರೆ ಆಕೆಗೆ ಡೆಂಗ್ಯೂ ಎಂದು ವರದಿ ನೀಡಲಾಗಿದೆ.
ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡುತ್ತಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರನ್ನು ಕೂಡಲೆ ಅಮಾನತು ಮಾಡಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಜೊತೆಗೆ ಪ್ರಯೋಗಾಲಯದ ಸಿಬ್ಬಂದಿ ವಿರುದ್ಧವು ಪ್ರಕರಣ ದಾಖಲಿಸಬೇಕು. ಈ ಕೂಡಲೆ ಲ್ಯಾಬ್ ಅನ್ನು ಸೀಜ್ ಮಾಡಬೇಕು.
ಇದನ್ನೂ ಓದಿ – ಶುಂಠಿ ಕಣದಲ್ಲಿ ನೀರು ಹಾಯಿಸುತ್ತಿದ್ದ ವ್ಯಕ್ತಿ ಕಾಲಿಗೆ ಗುಂಡು, ಯಾರು ಹೊಡೆದಿದ್ದು ಅನ್ನೋದೇ ನಿಗೂಢ
ಕೆಎಫ್‌ಡಿ ಗುಣಪಡಿಸುವ ಯಾವುದೆ ಔಷಧವಿಲ್ಲ. ಈವರೆಗೂ ಅದನ್ನು ತಡೆಯಲು ನೀಡುತ್ತಿದ್ದ ಲಸಿಕೆ ನಿಷ್ಪ್ರಯೋಜಕ ಎಂದು ವರದಿ ಬಂದಿದೆ. ಇಷ್ಟು ವರ್ಷ ಆರೋಗ್ಯ ಇಲಾಖೆ ಜನರಿಗೆ ಮಂಕು ಬೂದಿ ಎರಚಿದೆ. ಕೆಎಫ್‌ಡಿ ಶಿವಮೊಗ್ಗಕ್ಕೆ ಮಾತ್ರ ಸೀಮತವಾಗಿಲ್ಲ. ನೆರೆ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲು ಕೆಎಫ್‌ಡಿ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಇದನ್ನು ರಾಷ್ಟ್ರೀಯ ಕಾಯಿಲೆ ಎಂದು ಘೋಷಿಸಬೇಕು. ಲಸಿಕೆ ಮತ್ತು ಔಷಧ ಕಂಡು ಹಿಡಿಯಲು ಆದ್ಯತೆ ನೀಡಬೇಕು.
ಸುದ್ದಿಗೋಷ್ಠಿಯಲ್ಲಿ ಶಶಿ ಸಂಪಳ್ಳಿ, ಸುರೇಶ್ ಅರಸಾಳು, ಮಂಜುನಾಥ್ ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200