ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬದ ಸಂದರ್ಭ ಇಲ್ಲಿನ ಮೃಗಾಲಯಕ್ಕೆ ಇಂದೋರ್ ಮತ್ತು ಔರಂಗಾಬಾದ್‌ನಿಂದ ಪ್ರಾಣಿಗಳು (Animals) ಆಗಮಿಸಲಿವೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಮೃಗಾಲಯಕ್ಕೆ ಅಧಿಕಾರಿಗಳು ಭೇಟಿ
ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ, ಇಂದೋರ್ ಮತ್ತು ಔರಂಗಾಬಾದ್ ಮೃಗಾಲಯದ ಅಧಿಕಾರಿಗಳು ಇಂದು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಾಣಿಗಳ ವಿನಿಮಯಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ಶಿವಮೊಗ್ಗ ಮೃಗಾಲಯದ ಅಧಿಕಾರಿಗಳು ಆಗಸ್ಟ್ ತಿಂಗಳಲ್ಲಿ ಇಂದೋರ್ ಮತ್ತು ಔರಂಗಾಬಾದ್ ಮೃಗಾಲಯಗಳಿಗೆ ಭೇಟಿ ನೀಡಿದ್ದರು.

ದಸರಾ ಹಬ್ಬಕ್ಕೆ ಹೊಸ ಪ್ರಾಣಿಗಳು
ಪ್ರಾಣಿಗಳ ವಿನಿಮಯ ಯೋಜನೆ ಅಡಿ ದಸರಾ ಹಬ್ಬದ ಸಂದರ್ಭದಲ್ಲೆ ಹೊಸ ಪ್ರಾಣಿಗಳು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಾಧಾಮಕ್ಕೆ ಆಗಮಿಸಲಿವೆ. ಅ.2ರಂದು ಪ್ರಾಣಿಗಳು ಆಗಮಿಸುತ್ತವೆ ಎಂದು ಅಮರಾಕ್ಷರ ತಿಳಿಸಿದ್ದಾರೆ.
ಔರಂಗಾಬಾದ್ ಮೃಗಾಲಯದಿಂದ 1 ಗಂಡು ಬಿಳಿ ಹುಲಿ, 2 ಹೆಣ್ಣು ಬೆಂಗಾಲ್ ಟೈಗರ್ಸ್, ಇಂದೋರ್ ಮೃಗಾಲಯದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹ, ಒಂದು ಗಂಡು ಬೆಂಗಾಲ್ ಟೈಗರ್ ಬರಲಿವೆ.
ನಟ ಸಚಿನ್ ಚಲುವರಾಯಸ್ವಾಮಿ ಅಭಿನಯದ ಕಮಲ್ ಶ್ರೀದೇವಿ ಸಿನಿಮಾ ಟ್ರೇಲರ್
ಶಿವಮೊಗ್ಗದಿಂದ ವಿನಿಮಯವಾಗಲಿವೆ ಪ್ರಾಣಿಗಳು
ಇನ್ನು, ತ್ಯಾವರೆಕೊಪ್ಪ ಮೃಗಾಲಯದಿಂದ ಸೆ.25ರಂದು ಕೆಲವು ಪ್ರಾಣಿಗಳನ್ನು ಇಂದೋರ್ ಮತ್ತು ಔರಂಗಾಬಾದ್ ಮೃಗಾಲಯಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.
ಇದನ್ನೂ ಓದಿ » ಮೈಸೂರು – ಶಿವಮೊಗ್ಗ, ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ಮಾರ್ಗ ಮಧ್ಯೆ ನಿಯಂತ್ರಣ, ಯಾವಾಗ?
ಔರಂಗಾಬಾದ್ ಮೃಗಾಲಯಕ್ಕೆ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹ, ಒಂದು ಕರಡಿ, ಒಂದು ಗಂಡು ಮತ್ತು ಒಂದು ಹೆಣ್ಣು ನರಿಯನ್ನು ರವಾನಿಸಲಾಗುತ್ತಿದೆ. ಇಂದೋರ್ ಮೃಗಾಲಯಕ್ಕೆ ಒಂದು ಕಾಡುಕೋಣ, ಎರಡು ಗಂಡು ಮತ್ತು ಎರಡು ಹೆಣ್ಣು ಆಸ್ಟ್ರಿಚ್‌ಗಳನ್ನು ರವಾನಿಸಲಾಗುತ್ತಿದೆ ಎಂದು ಅಮರಾಕ್ಷರ ತಿಳಿಸಿದ್ದಾರೆ.

news, Shivamogga, zoo, Tyavarekoppa, animal exchange, white tiger, Bengal tiger, lion, local news, tourism, Karnataka
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





