‘ಕಾಂಗ್ರೆಸ್‌ ಘೋಷಿಸಿದ್ದು 5 ಗ್ಯಾರಂಟಿ, ಜಾರಿಗೆ ಬರೋದು 15 ಗ್ಯಾರಂಟಿ ಯೋಜನೆ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 AUGUST 2023

Shivamogga-Live-Number-1-Website

SHIMOGA : ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಸಿದ್ಧತೆ ಆರಂಭಿಸಿದೆ. ಈ ಹಿನ್ನೆಲೆ ಆಯನೂರು ಮಂಜುನಾಥ್‌ ಮತ್ತು ಶಿಕಾರಿಪುರದ ನಾಗರಾಜ ಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಇಬ್ಬರು ನಾಯಕರು ತಮ್ಮ ಸಂಗಡಿಗರೊಂದಿಗೆ ಶಿವಮೊಗ್ಗದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹೆಚ್.ಎಸ್.ಸುಂದರೇಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‌.ಎಸ್.ಸುಂದರೇಶ್‌, ಆಯನೂರು ಮಂಜುನಾಥ್‌ ತಮ್ಮ ಸಂಗಡಿಗರೊಂದಿಗೆ ಸೋಮವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ. ಮಂಗಳವಾರ ಶಿಕಾರಿಪುರದ ನಾಗರಾಜ ಗೌಡ ಅವರು ತಮ್ಮ ಸಂಗಡಿಗರ ಜೊತೆಗೆ ಸದಸ್ಯತ್ವ ಪಡೆಯಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ಚೌಕಟ್ಟಿನಲ್ಲಿ ಎಲ್ಲವು ಸರಿ ಮಾಡ್ತೀವಿ

ಆಯನೂರು ಮಂಜುನಾಥ್‌ ಅವರ ಸೇರ್ಪಡೆಗೆ ಕಾಂಗ್ರೆಸ್‌ ಪಕ್ಷದ ವಿಧಾನಸಭೆ ಅಭ್ಯರ್ಥಿ ಹೆಚ್‌.ಸಿ.ಯೋಗೇಶ್‌ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಪಕ್ಷದ ಚೌಕಟ್ಟಿನಲ್ಲಿ ಅದನ್ನು ಪರಿಹರಿಸುತ್ತೇವೆ. ಇನ್ನು, ನಾಗರಾಜ ಗೌಡ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಆದರೆ ಪಕ್ಷದ ಹಿತದೃಷ್ಟಿಯಿಂದ ಆದೇಶ ಹಿಂಪಡೆಯಲಾಗಿದೆ. ಎಲ್ಲರು ಒಗ್ಗಟ್ಟಿನಿಂದ ಲೋಕಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸಲಿದ್ದೇವೆ ಎಂದು ತಿಳಿಸಿದರು.

HS-Sundaresh-Press-Meet-in-Shimoga-Congress-Office.

15 ಗ್ಯಾರಂಟಿ ಯೋಜನೆಗಳಿವೆ

ಸರ್ಕಾರ ರಚನೆಯಾಗಿ ಎರಡೂವರೆ ತಿಂಗಳಿನಲ್ಲಿ ಮೂರು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಗೃಹಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್‌, ಅನ್ನಭಾಗ್ಯ ಯೋಜನೆ ಮೂಲಕ ಹೆಚ್ಚುವರಿ ಅಕ್ಕಿ ವಿತರಣೆ ಭರವಸೆಗಳನ್ನು ಈಡೇರಿಸಿದ್ದೇವೆ. ಆ.28ರಂದು ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದೇವೆ. ಕೋಟ್ಯಂತರ ಮಂದಿ ಇವುಗಳ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.

ಚುನಾವಣೆ ಸಂದರ್ಭ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಆದರೆ 15 ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದ್ದೇವೆ. ಪ್ರೌಢಶಾಲೆ ಮಕ್ಕಳಿಗು ಬಾಳೆಹಣ್ಣು, ಶೇಂಗಾ ಚಿಕ್ಕಿ, ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಸದ್ಯದಲ್ಲೆ ಮನೆ ಬಾಗಿಲಿಗೆ ವೈದ್ಯರು ಯೋಜನೆ ಜಾರಿಗೆ ಬರಲಿದೆ ಎಂದು ಸುಂದರೇಶ್‌ ತಿಳಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 27, 2023

ಕುಂಸಿ ಸುತ್ತಾಮುತ್ತಾ ಏ.8ರಂದು ಇಡೀ ದಿನ ಕರೆಂಟ್‌ ಇರಲ್ಲ, ಯಾವ್ಯಾವ ಊರು? ಇಲ್ಲಿದೆ ಲಿಸ್ಟ್

ಕುಂಸಿ ಸುತ್ತಾಮುತ್ತಾ ಏ.8ರಂದು ಇಡೀ ದಿನ ಕರೆಂಟ್‌ ಇರಲ್ಲ, ಯಾವ್ಯಾವ ಊರು? ಇಲ್ಲಿದೆ ಲಿಸ್ಟ್

ಸಕೆಂಡ್‌ ಹ್ಯಾಂಡ್‌ ಕಾರು ಖರೀದಿ ತಂದ ಫಜೀತಿ, ಶಿವಮೊಗ್ಗದಲ್ಲಿ ದಾಖಲಾಯ್ತು ಕೇಸ್‌? ಆಗಿದ್ದೇನು?

ಸಕೆಂಡ್‌ ಹ್ಯಾಂಡ್‌ ಕಾರು ಖರೀದಿ ತಂದ ಫಜೀತಿ, ಶಿವಮೊಗ್ಗದಲ್ಲಿ ದಾಖಲಾಯ್ತು ಕೇಸ್‌? ಆಗಿದ್ದೇನು?

ಶಿವಮೊಗ್ಗದ JNN ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬೂಟ್‌ ಕ್ಯಾಂಪ್‌, ಏನಿದು?

ಶಿವಮೊಗ್ಗದ JNN ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬೂಟ್‌ ಕ್ಯಾಂಪ್‌, ಏನಿದು?

ಶಿವಮೊಗ್ಗ, ಶಿಕಾರಿಪುರ, ಸಾಗರದ ಐದು ಕಡೆ ಲೋಕಾಯುಕ್ತ ದಾಳಿ, ಪರಿಶೀಲನೆ

ಶಿವಮೊಗ್ಗ, ಶಿಕಾರಿಪುರ, ಸಾಗರದ ಐದು ಕಡೆ ಲೋಕಾಯುಕ್ತ ದಾಳಿ, ಪರಿಶೀಲನೆ

ಹೊಸನಗರ ಕ್ಷೇತ್ರ ಮರು ರಚನೆ, ಪಾದಯಾತ್ರೆ ಸಮಾರೋಪ, ಸಚಿವ, ಸಂಸದರು ಏನಂದ್ರು?

ಹೊಸನಗರ ಕ್ಷೇತ್ರ ಮರು ರಚನೆ, ಪಾದಯಾತ್ರೆ ಸಮಾರೋಪ, ಸಚಿವ, ಸಂಸದರು ಏನಂದ್ರು?

ಎದುರು ಮನೆಗೆ ನುಗ್ಗಿದ್ದ ಭದ್ರಾವತಿ ವ್ಯಕ್ತಿಗೆ ಜೈಲು, ದಂಡ, ಎಷ್ಟು ವರ್ಷ ಶಿಕ್ಷೆ?

ಎದುರು ಮನೆಗೆ ನುಗ್ಗಿದ್ದ ಭದ್ರಾವತಿ ವ್ಯಕ್ತಿಗೆ ಜೈಲು, ದಂಡ, ಎಷ್ಟು ವರ್ಷ ಶಿಕ್ಷೆ?

ಭದ್ರಾವತಿ ತಾಲೂಕಿನ ಹಲವು ಕಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

ಭದ್ರಾವತಿ ತಾಲೂಕಿನ ಹಲವು ಕಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

ಶಿವಮೊಗ್ಗ KSRTC ನಿಲ್ದಾಣದಲ್ಲಿ ಭದ್ರಾವತಿ ಮಹಿಳೆಯ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನ

ಶಿವಮೊಗ್ಗ KSRTC ನಿಲ್ದಾಣದಲ್ಲಿ ಭದ್ರಾವತಿ ಮಹಿಳೆಯ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನ

ಶಿವಮೊಗ್ಗದಲ್ಲಿ ನೆತ್ತಿ ಸುಡುತ್ತಿದೆ ಬಿಸಿಲು, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗದಲ್ಲಿ ನೆತ್ತಿ ಸುಡುತ್ತಿದೆ ಬಿಸಿಲು, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?

ಧಗಧಗ ಹೊತ್ತಿ ಉರಿದ ಡಸ್ಟರ್‌ ಕಾರು, ತಪ್ಪಿದ ಅನಾಹುತ, ಆಗಿದ್ದೇನು?

ಧಗಧಗ ಹೊತ್ತಿ ಉರಿದ ಡಸ್ಟರ್‌ ಕಾರು, ತಪ್ಪಿದ ಅನಾಹುತ, ಆಗಿದ್ದೇನು?

Leave a Comment