ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಸರ್ಕಲ್‌ನಲ್ಲಿ ಬೃಹತ್‌ ಗುಂಡಿ, ರಸ್ತೆ ತುಂಬೆಲ್ಲ ಹರಡಿದೆ ಜೆಲ್ಲಿ, ಎಲ್ಲಿ ಇದು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 9 NOVEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ನಗರದ ಎನ್‌.ಟಿ.ರಸ್ತೆಯಲ್ಲಿರುವ ಬೈಪಾಸ್‌ ರಸ್ತೆಯ ಸರ್ಕಲ್‌ ಗುಂಡಿಮಯವಾಗಿದೆ (Pot Holes). ದ್ವಿಚಕ್ರ ವಾಹನ ಸವಾರರ ಪಾಲಿಗಂತು ಈ ಗುಂಡಿಗಳು ಯಮ ಸ್ವರೂಪಿಯಾಗಿ ಕಾಣಿಸುತ್ತಿವೆ.

ಎನ್‌.ಟಿ.ರಸ್ತೆ ಮತ್ತು ಬೈಪಾಸ್‌ ರಸ್ತೆ ಸೇರುವ ಸ್ಥಳದಲ್ಲಿರುವ ಸರ್ಕಲ್‌ನಲ್ಲಿ ಬೃಹತ್‌ ಗುಂಡಿಗಳು ಬಾಯ್ತೆರೆದಿವೆ. ಮೂರು ದಿಕ್ಕಿಂದ ಬರುವ ವಾಹನಗಳು ಈ ಗುಂಡಿಗಳನ್ನು ಹಾದು ಹೋಗಬೇಕಿದೆ. ಇಲ್ಲಿ ಸ್ವಲ್ಪ ಯಾಮಾರಿದರು ಅಪಘಾತ ನಿಶ್ಚಿತ.

ಇದನ್ನೂ ಓದಿ – ಅಕೌಂಟ್‌ಗೆ 79 ಸಾವಿರ ರೂ. ಹಾಕುತ್ತೇವೆ ಅಂದರು, ನಂತರ ಬಂದ SMS ನೋಡಿ ನಿವೃತ್ತ ಉದ್ಯೋಗಿಗೆ ಶಾಕ್

ಗುಂಡಿಗಳಿಂದ ಗಂಡಾಂತರ

ನಿತ್ಯ ನೂರಾರು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳು, ಹಲವು ಲಾರಿಗಳು ಸೇರಿದಂತೆ ಸಾವಿರಾರು ವಾಹನಗಳು ಈ ಸರ್ಕಲ್‌ ಹಾದು ಹೋಗುತ್ತವೆ. ಭಾರಿ ವಾಹನಗಳ ಸಂಚಾರದಿಂದಾಗಿ ಗುಂಡಿಗಳ ಗಾತ್ರ ಮತ್ತು ಆಳ ದಿನೇ ದಿನೆ ಹೆಚ್ಚುತ್ತಿದೆ. ಈ ಗುಂಡಿ ಹಾದು ಹೋಗುವಾಗ ಬಸ್ಸುಗಳೇ ಅತ್ತಿಂದಿತ್ತ ವಾಲಡುತ್ತವೆ. ಇನ್ನು ದ್ವಿಚಕ್ರ ವಾಹನ ಸವಾರರಿಗಂತು ಈ ಗುಂಡಿಗಳು ಜವರಾಯನ ದರ್ಶನ ಮಾಡಿಸುತ್ತಿವೆ.

Shimoga Bypass Road and NT Road conncetion Circle

ವೇಗವಾಗಿ ಬಂದರೆ ಅಪಘಾತ ಫಿಕ್ಸ್‌

ಎನ್‌.ಟಿ.ರಸ್ತೆ ಮತ್ತು ಬೈಪಾಸ್‌ ರಸ್ತೆಯ ತಿರುವಿನಲ್ಲೇ ಬೃಹತ್‌ ಗುಂಡಿಯಾಗಿದೆ. ವಾಹನಗಳು ವೇಗವಾಗಿದ್ದರೆ ಗುಂಡಿಗಿಳಿದರೂ ಅಪಘಾತ, ಗುಂಡಿ ತಪ್ಪಿಸಲು ಹೋದರೂ ಅವಘಡ ಉಂಟಾಗುತ್ತದೆ. ಇದೆ ರೀತಿ ಸರ್ಕಲ್‌ ಮಧ್ಯದಲ್ಲಿನ ಬೃಹತ್‌ ಗುಂಡಿ ಕೂಡ ಅಪಘಾತವನ್ನು ಆಹ್ವಾನಿಸುತ್ತಿದೆ. ಈಗಾಗಲೆ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಗುಂಡಿಗಳಿಂದಾಗಿ ರಸ್ತೆ ಮೇಲೆಲ್ಲ ಜೆಲ್ಲಿ ಕಲ್ಲು ಹರಡಿಕೊಂಡಿದೆ. ವಾಹನಗಳು ಸ್ಕಿಡ್‌ ಆಗಲು ಇವು ಕಾರಣವಾಗುತ್ತಿವೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಪ್ರಗತಿ ಪರಿಶೀಲನೆ, ಸಭೆಯಲ್ಲಿ ಚರ್ಚೆಯಾದ 7 ಪ್ರಮುಖಾಂಶ ಇಲ್ಲಿದೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment