ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 25 AUGUST 2024 : ಶಿವಮೊಗ್ಗ – ಶಿಕಾರಿಪುರ – ಶಿರಾಳಕೊಪ್ಪ ಮಧ್ಯೆ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಟೋಲ್ ಬೂತ್ (Toll) ನಿರ್ಮಿಸಲಾಗಿದೆ. ಅವುಗಳನ್ನು ಸರ್ಕಾರ ತೆರವು ಮಾಡಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಆ.29ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಶಿವರಾಜ್ ಪಾಟೀಲ್, ರಾಜ್ಯ ಸರ್ಕಾರ ಅವೈಜ್ಞಾನಿಕ ಟೋಲ್ ಗೇಟ್‌ಗಳನ್ನು ಕೂಡಲೆ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಆರೋಪಗಳೇನು?
ರಾಜ್ಯ ಸರ್ಕಾರವು 2013ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿದೆ. ಕಾಯ್ದೆ ಅನುಸಾರ ಗೇಟ್‌ಗಳನ್ನು ನಿರ್ಮಿಸಿಲ್ಲ. ಟೋಲ್‌ಗಳ ನಡುವೆ 60 ಕಿ.ಮೀ ಅಂತರ ಇರಬೇಕು. ಆದರೆ ಶಿಕಾರಿಪುರ ರಸ್ತೆಯಲ್ಲಿ ಕಲ್ಲಾಪುರ ಮತ್ತು ಕುಟ್ರವಳ್ಳಿ ನಡುವೆ 30 ಕಿ.ಮೀ ಅಂತರದಲ್ಲಿ ಎರಡು ಟೋಲ್‌ಗಳಿವೆ.
ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯಲ್ಲಿರುವವರಿಗೆ ಪಾಸ್ ಕೊಡಬೇಕು. ಆದರೆ ಇಲ್ಲಿ ಆ ನಿಯಮವನ್ನು ಕೂಡ ಉಲ್ಲಂಘಿಸಲಾಗಿದೆ. ಸ್ಥಳೀಯರು ಕೂಡ ನಿತ್ಯ ಕೆಲಸಕ್ಕೆ, ತೋಟ, ಗದ್ದೆಗೆ ತೆರಳಲು ಟೋಲ್‌ನಲ್ಲಿ ಹಣ ಕಟ್ಟುವಂತಾಗಿದೆ.
ಟೋಲ್ ಗೇಟ್‌ನಿಂದಾಗಿ ಬಸ್ ಪ್ರಯಾಣ ದರ, ಗೂಡ್ಸ್ ವಾಹನಗಳ ಬಾಡಿಗೆ ಹೆಚ್ಚಳವಾಗಿದೆ. ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ವಾಹನ ಸವಾರರು ಫಜೀತಿ ಅನುಭವಿಸುತ್ತಿದ್ದಾರೆ. ಇದಕ್ಕೆ ತಡೆಯೊಡ್ಡುವ ಸಲುವಾಗಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿನಯಕ ಪಾಟೀಲ್, ಅಬ್ದುಲ್ ನವೀದ್, ಪುಟ್ಟಣ್ಣ ಗೌಡರು, ಶಿವರಾಜ್, ಶೇಖರಪ್ಪ, ಮನ್ಸೂರ್ ಖಾನ್ ಸೇರಿ ಹಲವರು ಇದ್ದರು.
ಇದನ್ನೂ ಓದಿ ⇒ SHIMOGA JOBS | ಪ್ರತಿ ತಿಂಗಳು 15 ಸಾವಿರ ರೂ.ವರೆಗೆ ಸಂಬಳದ ಕೆಲಸ ಖಾಲಿ ಇದೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422