SHIVAMOGGA LIVE NEWS | 11 AUGUST 2023
SHIMOGA : ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸ್ಥಾಪಿಸಲಾಗಿರುವ ನೂತನ ನಾಮಫಲಕವನ್ನು (Name Board) ಶಾಸಕ ಎಸ್.ಎನ್.ಚನ್ನಬಸಪ್ಪ ಅನಾವರಣ ಮಾಡಿದರು.
ಯಾರೆಲ್ಲ ಏನೇನು ಹೇಳಿದರು?
ಎಸ್.ಎನ್.ಚನ್ನಬಸಪ್ಪ, ಶಾಸಕ : ‘ಈ ಮೊದಲು ಇದನ್ನು ಗೋಪಿ ವೃತ್ತ ಎಂದು ಕರೆಯುತ್ತಿದ್ದರು. 1956ರಲ್ಲಿ ಟಿ. ಸೀನಪ್ಪ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡಲಾಯಿತು. ಸರ್ಕಲ್ ಅಭಿವೃದ್ಧಿಗೆ ಆ ಕಾಲದಲ್ಲಿಯೇ ಸೀನಪ್ಪ ಶೆಟ್ಟಿ ಅವರ ಕುಟುಂಬ 25 ಸಾವಿರ ರೂ. ಕೊಟ್ಟಿದ್ದರು. ಸರ್ಕಲ್ ಮಧ್ಯೆ ಕಾರಂಜಿ ನಿರ್ಮಿಸಿದ್ದರು. ರಸ್ತೆ ಅಗಲೀಕರಣದ ಕಾರಂಜಿಯನ್ನು ಪಾಲಿಕೆಗೆ ಕೊಂಡೊಯ್ಯಲಾಯಿತು. ಈಗ ಅಲ್ಲಿಯು ಕಾರಂಜಿಯನ್ನು ತೆಗೆಯಲಾಗಿದೆ. ಗೋಪಿ ವೃತ್ತ ಅನ್ನುವ ಬದಲು ಇನ್ಮುಂದೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದೇ ಬಳಕೆ ಮಾಡೋಣ.ʼ
![]() |
ಇದನ್ನೂ ಓದಿ – ಕೇಂದ್ರ ಸಚಿವರನ್ನು ಭೇಟಿಯಾದ ಶಿವಮೊಗ್ಗ ಸಂಸದ, ಮೆಕ್ಕೆಜೋಳ ಕುರಿತು ಮಹತ್ವದ ಮನವಿ, ಏನಿದೆ ಮನವಿಯಲ್ಲಿ?
ವೆಂಕಟೇಶ ಮೂರ್ತಿ : ‘ಪುರಸಭೆ, ನಗರಸಭೆಯಿಂದ ಹಿಡಿದು ಈಗನ ಪಾಲಿಕೆಯ ತನಕ ಎಲ್ಲ ದಾಖಲೆಗಳಲ್ಲು ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದೆ ಪ್ರಕಟಿಸಲಾಗಿದೆ. ಈಗ ಪಾಲಿಕೆ ವತಿಯಿಂದ ನಾಮಫಲಕ (Name Board) ಸ್ಥಾಪಿಸಿ ಅಧಿಕೃತವಾಗಿ ಉದ್ಘಾಟಿಸಲಾಗಿದೆ. ನಮ್ಮ ಕುಟುಂಬದ ಹಿರಿಯ ದೂರದೃಷ್ಟಿಗೆ ಮನ್ನಣೆ ಸಿಕ್ಕಿದೆ.ʼ
ಟಿ.ಸೀನಪ್ಪ ಶೆಟ್ಟಿ ಅವರ ಕುಟುಂಬದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಟಿ.ಎಸ್.ಸಂದೀಪ್, ವಿಶ್ವನಾಥ್, ಗುರುಚರಣ್, ರಘುನಂದನ್, ವೈ.ಹೆಚ್.ನಾಗರಾಜ್, ಖಂಡೋಬರಾವ್, ಜಿ.ವಿಜಯಕುಮಾರ್ ಸೇರಿದಂತೆ ಹಲವರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200