ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 10 OCTOBER 2024 : ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ಏರ್ ಟ್ರಾಫಿಕ್ ಗಳಿಸಿ ಶಿವಮೊಗ್ಗ ವಿಮಾನ ನಿಲ್ದಾಣ (Airport) ದಾಖಲೆ ನಿರ್ಮಿಸಿದೆ. ಪ್ರತಿ ದಿನ ಇಲ್ಲಿಂದ 12 ಟ್ರಿಪ್ ವಿಮಾನ ಹಾರಾಟ ನಡೆಯುತ್ತಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ವಿಮಾನಗಳು 12 ಟ್ರಿಪ್ ಹಾರಾಟ ನಡೆಸುತ್ತಿವೆ. ಎರಡೇ ವರ್ಷದಲ್ಲಿ ಶಿವಮೊಗ್ಗ ನಿಲ್ದಾಣ ಇಷ್ಟೊಂದು ಏರ್ ಟ್ರಾಫಿಕ್ ಹೊಂದಿದೆ. ಬೀದರ್, ಬೆಳಗಾವಿ, ಹುಬ್ಬಳ್ಳಿಯಲ್ಲಿ ಅತ್ಯಂತ ದೀರ್ಘಾವಧಿಯ ಬಳಿಕ ಇಷ್ಟು ಏರ್ ಟ್ರಾಫಿಕ್ ಸೃಷ್ಟಿಯಾಗಿತ್ತು. ಈ ನಿಟ್ಟಿನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ದಾಖಲೆ ನಿರ್ಮಿಸಿದೆ. ಮಧ್ಯ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣವಾಗಲಿದೆ ಎಂದರು.
ಶಿವಮೊಗ್ಗದಿಂದ ದೆಹಲಿಗೆ ವಿಮಾನ
ಶಿವಮೊಗ್ಗದಿಂದ ಬೆಂಗಳೂರು, ಗೋವಾ, ತಿರುಪತಿ, ಹೈದರಾಬಾದ್, ಚೆನ್ನೈಗೆ ವಿಮಾನಗಳು ಹಾರಾಟ ನಡೆಸುತ್ತಿವೆ. ಮೂರನೆ ಮಾರ್ಗವಾಗಿ ದೆಹಲಿಗೆ ವಿಮಾನ ಹಾರಾಟ ನಡೆಸಲಿದೆ. ಇದಕ್ಕಾಗಿ ಸಿದ್ಧತೆಯಾಗುತ್ತಿದೆ. ದೇಶದ ಎಲ್ಲಾ ರಾಜ್ಯಗಳಿಗು ಶಿವಮೊಗ್ಗದಿಂದ ವಿಮಾನಯಾನ ಸಂಪರ್ಕ ಕಲ್ಪಿಸುವ ಯೋಚನೆ ಇದೆ. ಇದರಿಂದ ವ್ಯಾಪಾರ, ವಹಿವಾಟು ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅನುಕೂಲ ಆಗಲಿದೆ ಎಂದರು.
80 ಅಡೆತಡೆಗಳು ನಿವಾರಣೆ
ಶಿವಮೊಗ್ಗ ವಿಮಾನ ನಿಲ್ದಾಣದ ಒಎಲ್‌ಎಸ್ ಸರ್ವೆ ನಡೆಸಲಾಗಿದೆ. ವಿಮಾನ ನಿಲ್ದಾಣದ ಹೊರಗೆ 80 ವಿವಿಧ ಅಡೆತಡೆಗಳಿದ್ದವು. ಅವುಗಳನ್ನು ಬಗೆಹರಿಸಲಾಗಿದೆ. ರಾತ್ರಿ ವೇಳೆ ಲ್ಯಾಂಡಿಂಗ್ ಕಾರ್ಯದ ಕೆಲಸ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ (ಕೆಎಸ್‌ಐಐಡಿಸಿ) ಸಂಸ್ಥೆಗೆ ಉತ್ತಮ ಅಧಿಕಾರಿಗಳು ಬಂದಿದ್ದಾರೆ. ಡಿಜಿಸಿಎ ಕೂಡ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದರು.
ಇದನ್ನೂ ಓದಿ » ಶಿವಮೊಗ್ಗ – ಚೆನ್ನೈ ವಿಮಾನಯಾನ ಶುರು, ಹೇಗಿತ್ತು ಮೊದಲ ದಿನ?