SHIVAMOGGA LIVE NEWS | 20 DECEMBER 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಫಟಾಫಟ್ ನ್ಯೂಸ್ : ಶಿವಮೊಗ್ಗ ನಗರದಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್ ಸುದ್ದಿಗಳು.
ಸಿ.ಟಿ.ರವಿ ಬಂಧನ ಖಂಡಿಸಿ ಪ್ರತಿಭಟನೆ ಸಿ.ಟಿ.ರವಿ ಮತ್ತು ಬಿಜೆಪಿಯ ಬೆಳವಣಿಗೆ ಸಹಿಸದೆ ಸರ್ಕಾರ ಈ ಕೃತ್ಯ ಎಸಗಿದೆ. ವಾಲ್ಮೀಕಿ ನಿಗಮ, ಭೋವಿ ನಿಗಮ, ಮೂಡ ಹಗರಣಗಳಿಂದ ಗಮನ ಬೇರೆಡೆ ಸೆಳೆಯಲು ಕಲಾಪವನ್ನು ಹಾಳುಗೆಡವಿದ್ದಾರೆ. ಟಿ.ಡಿ.ಮೇಘರಾಜ್, ಬಿಜೆಪಿ ಜಿಲ್ಲಾಧ್ಯಕ್ಷ Shivamogga Live
ಡಿಸಿ ಕಚೇರಿ : ಸಿ.ಟಿ.ರವಿ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
![]()
ಇದನ್ನೂ ಓದಿ » ಅಡಿಕೆ ಧಾರಣೆ | 20 ಡಿಸೆಂಬರ್ 2024 | ಇವತ್ತು ಎಷ್ಟಿದೆ ಅಡಿಕೆ ರೇಟ್?
Shivamogga Live ಪಾಲಿಕೆ ನೌಕರರ ಸಂಘದ ಗೋವಿಂದ ಅಧ್ಯಕ್ಷ
ಶಿವಮೊಗ್ಗ : ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾಗಿ ಎನ್. ಗೋವಿಂದ ಮರು ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಎನ್ .ಗೋವಿಂದ ಅವರನ್ನು ಆಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾದ ಕುಮಾರ್, ವೇಣುಗೋಪಾಲ್, ಮಂಜುನಾಥ್, ಮೋಹನ್ ಮತ್ತಿತರರು ಈ ಸಂದರ್ಭ ಇದ್ದರು.
Shivamogga Live ಎಂ.ಶ್ರೀಕಾಂತ್ ಅಭಿಮಾನಿಗಳಿಂದ ಹಣ್ಣು, ಬ್ರೆಡ್ ವಿತರಣೆ
ಮೆಗ್ಗಾನ್ ಆಸ್ಪತ್ರೆ : ಮಾಜಿ ಸಂಸದ ಡಿ.ಕೆ.ಸುರೇಶ್ ಜನ್ಮದಿನದ ಅಂಗವಾಗಿ ಎಂ.ಶ್ರೀಕಾಂತ್ ಅಭಿಮಾನಿ ಬಳಗದಿಂದ ಆಸ್ಪತ್ರೆಯ ಹೆರಿಗೆಯ ವಾರ್ಡ್‌ನಲ್ಲಿ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು. ಅಭಿಮಾನಿ ಬಳಗದ ನವುಲೆ ಮಂಜು, ಜಿಲ್ಲಾ ಅಲೆಮಾರಿ ಮತ್ತು ಅರೆ ಅಲೆಮಾರಿ ಅನುಷ್ಠಾನ ಸಮಿತಿ ಸದಸ್ಯ ಜಿ.ಸಂದೀಪ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಬಸವರಾಜು, ಯುವ ಕಾಂಗ್ರೆಸ್‌ನ ವಿನಯ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ಸಕ್ರೆಬೈಲು ಬಳಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ದೊಡ್ಡ ಅನಾಹುತ
ನಗರದಲ್ಲಿ ಮಲ್ಟಿಸ್ಪೆಷಾಲಿಟಿ ಸೇವೆಗಳು ಲಭ್ಯವಿರುವ ಆಸ್ಪತ್ರೆಗಳ ಪೈಕಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಗುಣಮಟ್ಟದ ಚಿಕಿತ್ಸೆ ಇಲ್ಲಿ ಲಭ್ಯವಿದೆ. ವರ್ಗೀಸ್ ಪಿ.ಜಾನ್, ವ್ಯವಸ್ಥಾಪಕ ನಿರ್ದೇಶಕ, ಸಹ್ಯಾದ್ರಿ ನಾರಾಯಣ ಆಸ್ಪತ್ರೆ Shivamogga Live ಎನ್.ಹೆಚ್.ಆಸ್ಪತ್ರೆಯಲ್ಲಿ ಯಶಸ್ವಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್
ಎನ್.ಹೆಚ್.ಆಸ್ಪತ್ರೆ : ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಮೂತ್ರಪಿಂಡ ಮತ್ತು ಕಿಡ್ನಿ ಕಸಿ ವಿಭಾಗದ ತಜ್ಞ ವೈದ್ಯರು ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಲಾಗಿದೆ. ಈ ಸಂಬಂಧ ಆಸ್ಪತ್ರೆಯ ನೆಪ್ರೋಲಾಜಿಸ್ಟ್ ಡಾ. ಮೊಹಮ್ಮದ್ ಇಮ್ರಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 
![]()
ಇದನ್ನೂ ಓದಿ » ಭದ್ರಾವತಿ ಸ್ಪೋಟ ಕೇಸ್, ಒಬ್ಬ ಸಾವು, ಅವಶೇಷಗಳಡಿ ಮೃತದೇಹ ಪತ್ತೆ
ಬಿಜೆಪಿಯವರಿಗೆ ಸಂವಿಧಾನ ಬದಲಿಸುವ, ಮೀಸಲಾತಿ ರದ್ದುಗೊಳಿಸುವ ಹಿಡನ್ ಅಜೆಂಡ್ ಇದೆ. ಹಾಗಾಗಿಯೇ ಡಾ. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಕಂಡರೆ ಅವರಿಗೆ ಸಹಿಸಲು ಸಾಧ್ಯವಿಲ್ಲ. ಅಮಿತ್ ಷಾ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣ ಇದಕ್ಕೆ ಪುಷ್ಠಿ ನೀಡುತ್ತದೆ. ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ Shivamogga Live ಶಿವಮೊಗ್ಗದಲ್ಲಿ ಪಂಜಿನ ಮೆರವಣಿಗೆ
ಗೋಪಿ ವೃತ್ತ : ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಶಿವಪ್ಪನಾಯಕ ವೃತ್ತದಿಂದ ಗೋಪಿ ವೃತ್ತದವರೆಗೆ ಪಂಜಿನ ಮೆರವಣಿಗೆ. ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
![]()
ಇದನ್ನೂ ಓದಿ » ನವುಲೆ ಬಳಿ ಬೀದಿ ದೀಪಗಳ ಡಿಸ್ಕೋ ಡಾನ್ಸ್, ಏನಾಗಿದೆ ಸಮಸ್ಯೆ?
Shivamogga Live ರಾಹುಲ್ ಗೂಂಡಾ ವರ್ತನೆಗೆ ಖಂಡನೆ
ಮಹಾವೀರ ವೃತ್ತ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆ ವಿಡಿಯೋವನ್ನು ತಿರುಚಲಾಗಿದೆ. ಬಿಜೆಪಿ ಸಂಸದರೊಬ್ಬರ ಮೇಲೆ ರಾಹುಲ್ ಗಾಂಧಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ » ಕರ್ನಾಟಕದ 116 ರೈಲುಗಳ ಸಂಖ್ಯೆ ಬದಲು, ಯಾವ್ಯಾವ ರೈಲು? ಇಲ್ಲಿದೆ ಲಿಸ್ಟ್
Shivamogga Live ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ
ಮಹಾನಗರ ಪಾಲಿಕೆ : ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಅಮಿತ್ ಷಾ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ಸಂಘಟನೆಯಿಂದ ಪ್ರತಿಭಟನೆ. ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ » ಸಿಗಂದೂರು ಸೇತುವೆ ಬಹುತೇಕ ಪೂರ್ಣ, ಡ್ರೋಣ್ ಫೋಟೊ ವೈರಲ್
Shivamogga Live ಗೌರವ ಧನ ಹೆಚ್ಚಳ ಆಗ್ರಹಿಸಿ ಹೋರಾಟ
ಜಿಲ್ಲಾಧಿಕಾರಿ ಕಚೇರಿ : ಬಿಸಿಯೂಟ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನೌಕರರನ್ನು ಕಾಯಂಗೊಳಿಸಬೇಕು. ಗೌರವಧನ ಹೆಚ್ಚಳ ಮಾಡಬೇಕು. ನಿವೃತ್ತಿಯಾದವರಿಗೆ ಇಡುಗಂಟು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ.
ಇದನ್ನೂ ಓದಿ » ಭದ್ರಾವತಿ ಸ್ಪೋಟ ಕೇಸ್, ಒಬ್ಬ ಸಾವು, ಅವಶೇಷಗಳಡಿ ಮೃತದೇಹ ಪತ್ತೆ
Shivamogga Live ಅಮಿತ್ ಷಾ ರಾಜೀನಾಮೆಗೆ ಗುರುಮೂರ್ತಿ ಆಗ್ರಹ
ಶಿವಮೊಗ್ಗ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಎಂ. ಗುರುಮೂರ್ತಿ ಆಗ್ರಹಿಸಿದ್ದಾರೆ. ಕೋಮುವಾದಿಗಳು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿರುವುದಕ್ಕೆ ಇದಕ್ಕಿಂತ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ » ಸಕ್ರೆಬೈಲು ಬಳಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ದೊಡ್ಡ ಅನಾಹುತ
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






