ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 AUGUST 2023
SHIMOGA : ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ (Airport) ಸಾಲು ಸಾಲು ಸವಾಲುಗಳನ್ನು ಎದುರಿಸಿದೆ. ವಿಮಾನಯಾನ ಸೇವೆ ಆರಂಭದ ದಿನಾಂಕ ನಿಗದಿಯಾಗಿದ್ದರು ಒಂದು ಅನುಮತಿ ಪತ್ರಕ್ಕಾಗಿ ಕೊನೆಯ ಕ್ಷಣದವರೆಗೆ ಕಾಯುವಂತಾಯಿತು. ಒಂದು ವೇಳೆ ಈ ಅನುಮತಿ ಪತ್ರ ಸಿಗುವುದು ತಡವಾಗಿದ್ದರೆ, ಬೆಂಗಳೂರು – ಶಿವಮೊಗ್ಗ ವಿಮಾನಯಾನ ಸೇವೆ ಮತ್ತಷ್ಟು ವಿಳಂಬವಾಗುವ ಸಂಭವವಿತ್ತು.
ಈ ಅಚ್ಚರಿಯ ವಿಚಾರವನ್ನು ಖುದ್ದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆ ಆಯೋಜಿಸಿದ್ದ ಫ್ಲೈ ಕರ್ನಾಟಕ ಹೈ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಬಾಂಬ್ ಥ್ರೆಟ್ ಕಂಟಿನ್‌ಜೆನ್ಸಿ ಪ್ಲಾನ್ ಎನ್‌ಒಸಿ ಕೊನೆಯ ಹಂತದಲ್ಲಿ ಲಭಿಸಿದ ರೋಚಕ ಸಂಗತಿ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಿಂದ ವಿಮಾನ ಹಾರಾಟ 20 ದಿನ ತಡವಾಗಲು ಕಾರಣವೇನು? ಇಲ್ಲಿದೆ 3 ಕಾರಣ
ಸಂಸದ ರಾಘವೇಂದ್ರ ಹೇಳಿದ್ದೇನು?
‘ನಾಗರಿಕ ವಿಮಾನಯಾನ ಸೇವೆ ಪ್ರಾಧಿಕಾರ (ಡಿಜಿಸಿಎ) ಬಾಂಬ್ ಥ್ರೆಟ್ ಕಂಟಿನ್‌ಜೆನ್ಸಿ ಪ್ಲಾನ್ ಎನ್‌ಒಸಿ ಸಿಕ್ಕಿರಲಿಲ್ಲ. ಮೊನ್ನೆ ಶಿವಮೊಗ್ಗ ಪತ್ರಕರ್ತರ ಜೊತೆಗೆ ವಿಮಾನ ನಿಲ್ದಾಣಕ್ಕೆ (Airport) ಭೇಟಿ ನೀಡಿದ್ದೆ. ಅನುಮತಿ ವಿಚಾರದಲ್ಲಿ ಆಗಲೂ ನನ್ನಲ್ಲಿ ಆತಂಕವಿತ್ತು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬಾಂಬ್ ಪತ್ತೆ, ನಿಷ್ಕ್ರಿಯಕ್ಕಾಗಿ 13 ಉಪಕರಣ ಅಗತ್ಯವಿದ್ದವು. ನಮ್ಮ ಬಳಿ 10 ಮಾತ್ರ ಇದ್ದವು. ಇನ್ನು ಮೂರನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿತ್ತು. ಅವೆಲ್ಲವನ್ನು ತರಿಸಿಕೊಂಡಿದ್ದೇವೆʼ ಎಂದರು.
‘ಉಪಕರಣಗಳು ಆಗಮಿಸುತ್ತಿದ್ದಂತೆ ದೆಹಲಿಗೆ ತೆರಳಿ ಕೇಂದ್ರ ವಿಮಾನಯಾನ ಸಚಿವರು, ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆ. ಕಳೆದ ಭಾನುವಾರ ರಜೆ ಇದ್ದರು ದೆಹಲಿಯಿಂದ ಅಧಿಕಾರಿಗಳ ತಂಡ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲಿಸಿತು. ಆ.28ರ ಸಂಜೆ ಅನುಮತಿ ಪತ್ರ ಸಿಕ್ಕಿತು. ತುಂಬಾ ಸಮಾಧಾನವಾಯಿತು. ಆ.31ರಂದು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಶುರುವಾಗಲಿದೆ’ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಇದನ್ನೂ ಓದಿ- ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ಸಂಸ್ಥೆಗೆ ವಾರ್ನಿಂಗ್ ನೀಡಿದ ಎಂಪಿ, ವಿಳಂಬಕ್ಕೆ ಕಾರಣ ಬಯಲು, ಏನದು?
ಇದೇನು ಸಣ್ಣ ವಿಚಾರವಲ್ಲ
ಇದೇ ವೇಳೆ ಮಾತನಾಡಿದ ಉದ್ಯಮಿ ಕಿಮ್ಮನೆ ಜಯರಾಮ್, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿಮಾನ ನಿಲ್ದಾಣ ಅತ್ಯಂತ ಪ್ರಮುಖವಾದ್ದದ್ದು. ಈಚೆಗೆ ದೆಹಲಿಗೆ ತೆರಳಿದ್ದಾಗ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ವಿಮಾನ ನಿಲ್ದಾಣ ಆರಂಭದ ಸಾಹಸ, ಸಂಸದ ರಾಘವೇಂದ್ರ ಅವರ ಚಾಕಚಕ್ಯತೆ ಮತ್ತು ಶ್ರಮದ ಕುರಿತು ತಿಳಿಸಿದ್ದರು. ನರೇಂದ್ರ ಮೋದಿ ಅವರ ಸರ್ಕಾರ ವಿಮಾನ ನಿಲ್ದಾಣದ ಭದ್ರತಾ ಮಾನದಂಡವನ್ನು ಬದಲಿಸಿ ಮತ್ತಷ್ಟು ಬಿಗಿಗೊಳಿಸಿದೆ. ಆ ಮಾನದಂಡಗಳನ್ನು ಪೂರೈಸುವುದು ಸುಲಭದ ಸಂಗತಿಯಲ್ಲ. ಸಂಸದ ರಾಘವೇಂದ್ರ ಅತಿ ಶೀಘ್ರ ಎಲ್ಲಾ ನಿಯಮಗಳನ್ನು ಪಾಲಿಸಿ ವಿಮಾನ ನಿಲ್ದಾಣ ಆರಂಭಕ್ಕೆ ಕಾರಣವಾಗಿದ್ದಾರೆ. ಇದು ಸಣ್ಣ ಸಂಗತಿಯಲ್ಲ ಅನ್ನುವುದು ಎಲ್ಲರಿಗು ಅರಿವಾಗಬೇಕಿದೆ ಎಂದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422