ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 02 OCTOBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ರಾಗಿಗುಡ್ಡದಲ್ಲಿ ಕಲ್ಲು ತೂರಟ ಪ್ರಕರಣ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ. ಇದರಿಂದ ನಗರದ ವಾಣಿಜ್ಯ ಉದ್ಯಮಕ್ಕೆ ತೊಂದರೆ ಉಂಟಾಗಿದೆ. ನಿಷೇಧಾಜ್ಞೆಯನ್ನು ರಾಗಿಗುಡ್ಡಕ್ಕೆ (ragi gudda) ಸೀಮಿತಗೊಳಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ (ragi gudda) ಘಟನೆ ಸಂಭವಿಸಿದೆ. ಆದರೆ ಗಾಂಧಿ ಬಜಾರ್ ಸೇರಿದಂತೆ ವಿವಿಧೆಡೆ ಅಂಗಡಿ – ಮುಂಗಟ್ಟು ಬಂದ್ ಮಾಡಿಸಲಾಗಿದೆ. ಇದರಿಂದ ವಾಣಿಜ್ಯೋದ್ಯಮಕ್ಕೆ ತೊಂದರೆ ಉಂಟಾಗಿದೆ. ಈಗಾಗಲೆ ಕಳೆದ ವಾರ ಮೂರ್ನಾಲ್ಕು ದಿನ ವಿವಿಧ ಕಾರಣಕ್ಕೆ ಉದ್ಯಮಗಳಲ್ಲಿ ಸ್ಥಗಿತಗೊಳಿಸಿದ್ದೆವು. ಈಗ ಪುನಃ ವ್ಯವಹಾರ ಸ್ಥಗಿತ ಮಾಡಿದರೆ ಸಮಸ್ಯೆಯಾಗಲಿದೆ ಎಂದರು.
ಇದನ್ನೂ ಓದಿ- ಹೊಳೆಹೊನ್ನೂರು ಸಮೀಪ ಭೀಕರ ಅಪಘಾತ, ಮೂವರು ಯುವಕರ ದೇಹ ಛಿದ್ರ ಛಿದ್ರ
ನಿಷೇಧಾಜ್ಞೆಯನ್ನು ಇಡೀ ನಗರಕ್ಕೆ ವಿಸ್ತರಿಸಿರುವ ಕ್ರಮ ಸರಿಯಲ್ಲ ಎಂದು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇವೆ. ಮಧ್ಯಾಹ್ನದ ನಂತರ ಅಂಗಡಿಗಳನ್ನು ತೆಗೆದು ವ್ಯಾಪಾರ ನಡೆಸುತ್ತೇವೆ.
ಕಾಂಗ್ರೆಸ್ ನಾಯಕ ಎಂ.ಶ್ರೀಕಾಂತ್ ಮಾತನಾಡಿ, ಮೂರ್ನಾಲ್ಕು ದಿನ ವ್ಯಾಪಾರ ಸ್ಥಗಿತಗೊಳಿಸಿದರೆ ಬಡವರು ಸೇರಿದಂತೆ ಹಲವರಿಗೆ ತೊಂದರೆ ಆಗಲಿದೆ. ಈ ಸಂಬಂಧ ನಗರದಲ್ಲಿ ಶಾಂತಿಯುತ ವಾತಾವರಣ ಇದೆ ಎಂದು ಎಲ್ಲರು ಒಗ್ಗೂಡಿ ತೋರಿಸಬೇಕಿದೆ ಎಂದರು.
ಇದನ್ನೂ ಓದಿ- 314 ರೈಲು ವೇಳಾಪಟ್ಟಿ ಬದಲು, ಶಿವಮೊಗ್ಗದ ಯಾವ್ಯಾವ ರೈಲುಗಳ ಸಮಯ ಬದಲು?
ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯಕುಮಾರ್ ದಿನಕರ್ ಮಾತನಾಡಿ, ಜಿಲ್ಲಾಧಿಕಾರಿ, ಜಿಲ್ಲಾರಕ್ಷಣಾಧಿಕಾರಿಯನ್ನು ಭೇಟಿಯಾಗಿದ್ದೇವೆ. ಮಾಧ್ಯಮಗಳಲ್ಲಿ ವರದಿ ಆಧರಿಸಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಮಾಧ್ಯಮಗಳು ಧಗಧಗ ಎಂದು ವರದಿ ಮಾಡುವುದು ನಿಲ್ಲಿಸಬೇಕು ಎಂದು ಮನವಿ ಮಾಡಿದರು.