ಮತ್ತೊಂದು ವಿಭಿನ್ನ ಹೆಜ್ಜೆ ಇಟ್ಟ ಶಿವಮೊಗ್ಗ MLA, ನಗರದ 50 ಕಡೆ ಕಾಣಿಸಲಿದೆ ಈ ಪಟ್ಟಿಗೆ, ಏನಿದು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 18 AUGUST 2023

SHIMOGA : ವಾಟ್ಸಪ್‌ ಮೂಲಕ ಸಾರ್ವಜನಿಕರ ಸಮಸ್ಯೆ (Problems) ಆಲಿಸುವ ವಿಭಿನ್ನ ಪ್ರಯೋಗ ಮಾಡಿದ್ದ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಈಗ ಇನ್ನೊಂದು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಇನ್ನು ಐದು ವರ್ಷ ಶಿವಮೊಗ್ಗ ನಗರ ಹೇಗಿರಬೇಕು ಎಂದು ನಾಗರಿಕರಿಂದ ಸಲಹೆ (Suggestion) ಪಡೆಯಲು ಮುಂದಾಗಿದ್ದಾರೆ. ಇದಕ್ಕಾಗಿ ನಗರದ 50 ಕಡೆ ಸಲಹಾ ಪೆಟ್ಟಿಗೆಗಳನ್ನು (Suggestion Box) ಇರಿಸಲು ತೀರ್ಮಾನಿಸಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇದನ್ನೂ ಓದಿ – ಶಿವಮೊಗ್ಗ MLA ಕಚೇರಿಯಲ್ಲಿ ವಾಟ್ಸಪ್‌ ಹೆಲ್ಪ್‌ಲೈನ್‌ ಶುರು, ಏನಿದು? ಹೇಗಿರುತ್ತೆ? ಜನಕ್ಕೇನು ಉಪಯೋಗ?

ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ (Gopi Circle) ಸಲಹಾ ಪಟ್ಟೆಗೆ ಇರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಯಾನಕ್ಕೆ ಚಾಲನೆ ನೀಡಿದರು.

ಏನಿದು ಸಲಹಾ ಪೆಟ್ಟಿಗೆ?

ಆ.17ರಿಂದ ಆ.31ರವರೆಗೆ ಶಿವಮೊಗ್ಗ ನಗರದ ಆಯ್ದ 50 ಕಡೆ ಸಲಹಾ ಪೆಟ್ಟಿಗೆಗಳನ್ನು ಇರಿಸಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ ಮಾಹಿತಿ ಕಾರ್ಡುಗಳು ಇರಲಿವೆ. ನಾಗರಿಕರು ಇನ್ನು ಐದು ವರ್ಷ ಶಿವಮೊಗ್ಗ ನಗರ ಹೇಗಿರಬೇಕು ಎಂದು ಕಾರ್ಡುಗಳಲ್ಲಿ ಅಭಿಪ್ರಾಯ ಬರೆದು, ಸಲಹಾ ಪೆಟ್ಟಿಗೆಗೆ ಹಾಕಬಹುದು. ನಂತರ ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಈ ಕಾರ್ಡುಗಳನ್ನು ಪರಿಶೀಲಿಸಿ ಮುಂದಿನ ಯೋಜನೆ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Opinion-Box-By-Shimoga-MLA-Channabasappa

ವಾಟ್ಸಪ್‌ ಮೂಲಕ ನಾಗರಿಕರ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿದ್ದೇವೆ. ಶಿವಮೊಗ್ಗ ನಗರ ಹೇಗಿರಬೇಕು ಎಂದು ಜನರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ. ಈಶ್ವರಪ್ಪ ಅವರ ನೇತೃತ್ವದಲ್ಲಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಜನರ ಸಲಹೆ ಪಡೆಯಲು ಸಲಹಾ ಪೆಟ್ಟಿಗೆಗಳನ್ನು ಇರಿಸಲಾಗುತ್ತಿದೆ.ಎಸ್‌.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕ

ಗೋಪಿ ವೃತ್ತದಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು. ಸಾರ್ವಜನಿಕರು, ಪೊಲೀಸ್‌ ಸಿಬ್ಬಂದಿ, ಮಳಿಗೆಗಳ ಮಾಲೀಕರು ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಬರೆದು ಪೆಟ್ಟಿಗೆಗೆ ಹಾಕಿದರು.

PARISHRAMA neet academy

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment