ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SUMMER | 28 ಮೇ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಭಾರಿ ಮಳೆಗೆ ಶಿವಮೊಗ್ಗ ನಗರ ತತ್ತರಿಸಿತ್ತು. ಇದಾಗಿ ಹತ್ತು ದಿನ ಕಳೆಯುವುದರಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಶಿವಮೊಗ್ಗ ನಗರ ಈಗ ನಿಗಿ ನಿಗಿ ಕೆಂಡದಂತಾಗಿದೆ.
ಶಿವಮೊಗ್ಗ ನಗರದಲ್ಲಿ ಬಿಸಿಲು ಜೋರಾಗಿದೆ. ದಿನೇ ದಿನೆ ತಾಪಮಾನ ಏರಿಕೆಯಾಗುತ್ತಿದೆ. ಬಿಸಿಲ ಝಳಕ್ಕೆ ಜನ ಮತ್ತೆ ಹೈರಾಣಾಗಿದ್ದಾರೆ.
ಮೇ 19ಕ್ಕೆ ಮುಳುಗಿತ್ತು ಶಿವಮೊಗ್ಗ
ಮೇ 18 ಮತ್ತು ಮೇ 19ರಂದು ಶಿವಮೊಗ್ಗ ನಗರದಲ್ಲಿ ಭಾರಿ ಮಳೆಯಾಗಿತ್ತು. ಹಲವು ಬಡಾವಣೆಗಳು ಜಲಾವೃತವಾಗಿದ್ದವು. ಆಸ್ತಿಪಾಸ್ತಿ ಹಾನಿ ಉಂಟಾಗಿತ್ತು. ಇದಾಗಿ ಹತ್ತು ದಿನದಲ್ಲಿ ಶಿವಮೊಗ್ಗ ನಗರದ ವಾತಾವರಣವೆ ಬದಲಾಗಿದೆ.
ಮೈಸುಡುವ ಬಿಸಿಲಿಗೆ ಜನ ಹೈರಾಣು
ಜೋರು ಮಳೆಯ ನಂತರ ಶಿವಮೊಗ್ಗ ನಗರದಲ್ಲಿ ಚಳಿ ವಾತಾವರಣವಿತ್ತು. ಆದರೆ ಕಳೆದ ಮೂರು ದಿನದಿಂದ ಹವಾಮಾನ ಬದಲಾಗಿದೆ. ಶಿವಮೊಗ್ಗ ನಗರದಲ್ಲಿ ರಣ ಬಿಸಿಲು ಪ್ರತ್ಯಕ್ಷವಾಗಿದೆ. ಮೇ 24ರಂದು ಜಿಲ್ಲೆಯ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಸಿಯಸ್, ಮೇ 25 ರಂದು 33.1 ಡಿಗ್ರಿ ಸೆಲ್ಸಿಯಸ್, ಮೇ 26 ರಂದು 32.4 ಡಿಗ್ರಿ ಸೆಲ್ಸಿಯಸ್ ಇತ್ತು. ಇವತ್ತು ಕೂಡ 32 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಇದರಿಂದ ಜನರು ಹೈರಾಣಾಗಿದ್ದಾರೆ.
ಮೈ ಸುಡುವ ಬಿಸಿಲಿಗೆ ಶಿವಮೊಗ್ಗದ ಜನರು ತತ್ತರಿಸಿ ಹೋಗಿದ್ದಾರೆ. ಬೆಳಗ್ಗೆಯಿಂದಲೆ ಬಿಸಿಲು ಬೇಗೆ ಹೆಚ್ಚಳವಾಗುತ್ತ ಹೋಗುತ್ತದೆ. ಮಧ್ಯಾಹ್ನದ ವೇಳೆಗೆ ರಸ್ತೆಗಿಳಿಯಲು ಜನರು ಬೆದರುವಂತಾಗಿದೆ. ಇದೆ ಕಾರಣಕ್ಕೆ ಈಗ ಜನರು ಮಳೆಗಾಗಿ ಆಗಸದೆಡೆ ಮುಖ ಮಾಡುವಂತಾಗಿದೆ.
ಇದನ್ನೂ ಓದಿ – ಇನ್ಮುಂದೆ ಪ್ರತಿ ಜೋರು ಮಳೆಗು ಮುಳುಗುತ್ತೆ ವಿದ್ಯಾನಗರ, ಶಾಂತಮ್ಮ ಲೇಔಟ್, ಕಾರಣವೇನು?
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.