ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SHIMOGA | 19 ಏಪ್ರಿಲ್ 2022
ಭದ್ರಾ ನಾಲೆಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋದ ಶಿಕ್ಷಕ ನೀರು ಪಾಲಾಗಿದ್ದಾರೆ. ಬಾಲಕ ಪಾರಾಗಿದ್ದಾನೆ.
ಹೊಳೆಹೊನ್ನೂರು ಸಮೀಪದ ಮಾರಶೆಟ್ಟಿಹಳ್ಳಿಯ ಶ್ರೀ ಮಾರುತಿ ಪ್ರೌಢಶಾಲೆ ಶಿಕ್ಷಕ ವಿಜಯ್‌ಕುಮಾರ್ (50) ನಾಪತ್ತೆಯಾಗಿದ್ದಾರೆ. ಅರಬಿಳಚಿ ಕ್ಯಾಂಪ್ ನಿವಾಸಿ ವಿಜಯಕುಮಾರ್ ದೊಡ್ಡಪ್ಪನ ಮಗ ಹಾಗೂ ರಜೆಗೆಂದು ಹಾವೇರಿ ಜಿಲ್ಲೆ ಬ್ಯಾಡಗಿಯಿಂದ ಬಂದಿದ ಒಂದಿಬ್ಬರು ಮಕ್ಕಳನ್ನು ಕರೆದುಕೊಂಡು ಭದ್ರಾ ನಾಲೆಗೆ ಈಜಲು ತೆರಳಿದ್ದಾರೆ.
ನಾಲೆಯಲ್ಲಿ ಈಜುವಾಗ ಜತೆಯಲ್ಲಿ ಈಜಲು ಬಂದಿದ್ದ ಹುಡುಗನೊಬ್ಬ ನೀರಿನಲ್ಲಿ ಸ್ವಲ್ಪ ಮುಂದಕ್ಕೆ ಹೋಗಿದ್ದನ್ನು ಕಂಡ ವಿಜಯ್‌ಕುಮಾರ್ ಹುಡುಗ ನೀರಿನಲ್ಲಿ ಮುಳುಗುತ್ತಿದ್ದಾನೆ ಎಂದು ರಕ್ಷಣೆಗೆ ತೆರಳಿದ್ದಾರೆ. ಅಲ್ಲೇ ಸಮೀಪದಲ್ಲಿ ಟ್ರ್ಯಾಕ್ಟರ್ ತೊಳೆಯುತ್ತಿದ್ದವರೊಬ್ಬರು ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿ ದಂಡೆಗೆ ತಂದಿದ್ದಾರೆ.
ಆದರೆ ಬಾಲಕನ ರಕ್ಷಣೆಗೆಂದು ಹೋದ ಶಿಕ್ಷಕ ವಿಜಯ್ ಕುಮಾರ್ ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422