ಯಡಿಯೂರಪ್ಪ ಲಕ್ಕಿ ಕಾರಿನಲ್ಲಿ ವಿಜಯೇಂದ್ರ ರೌಂಡ್ಸ್‌, ಅಪ್ಪನ ಏಟು, ಅಪಘಾತದ ಬಗ್ಗೆ ಮಾತು, ಏನೆಲ್ಲ ನೆನಪಿಸಿಕೊಂಡರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ‘ಅಂಬಾಸಿಡರ್‌ (ambassador) ಕಾರಿನ ವಿಚಾರವಾಗಿ ಯಡಿಯೂರಪ್ಪ ಅವರು ಜಗಳ ಮಾಡಿ ನನಗೆ ಎರಡು ತಟ್ಟಿದ್ದರು’  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರ ಲಕ್ಕಿ ಅಂಬಾಸಿಡರ್‌ ಕಾರಿನ ಕುರಿತು ಮೆಲುಕು ಹಾಕಿದರು.

ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸಿಕೆಆರ್‌ 45 ನಂಬರ್‌ನ ಅಂಬಾಸಿಡರ್‌ ಕಾರಿನ ಜೊತೆಗೆ ಬಿಜೆಪಿಯ ಅನೇಕ ನಾಯಕರಿಗೆ ಭಾವನಾತ್ಮಕ ಸಂಬಂಧವಿದೆ. ಯಡಿಯೂರಪ್ಪ, ಅನಂತ ಕುಮಾರ್‌ ಸೇರಿ ಹಲವು ಪ್ರಮುಖರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗೆ ಲಕ್ಷಾಂತರ ಕಿ.ಮೀ ಪ್ರವಾಸ ಕೈಗೊಂಡಿದ್ದಾರೆ. ಹಾಗಾಗಿ ಕಾರಿನ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.

ತರೀಕೆರೆ ಬಳಿ ಪಲ್ಟಿಯಾಗಿತ್ತು

ಅಂಬಾಸಿಡರ್‌ ಕಾರಿಗೆ ನಾಯಕ್‌ ಎಂಬ ಚಾಲಕರಿದ್ದರು. ಒಮ್ಮೆ ಯಡಿಯೂರಪ್ಪ ಅವರು ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರವಾಸಕ್ಕೆ ಹೊರಟಿದ್ದರು. ಕಾರಿನಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದರು. ಬೆಳಗ್ಗೆ 6 ಗಂಟೆ ಹೊತ್ತಿಗೆ ತರೀಕೆರೆ ಬಳಿ ಕಾರು ಪಲ್ಟಿಯಾಯಿತು. ಆದರೆ ಒಳಗಿದ್ದವರಿಗೆ ಸಣ್ಣ ಗಾಯವು ಆಗದೆ ಪಾರಾಗಿದ್ದರು. ಅಷ್ಟು ಸುರಕ್ಷಿತವಾಗಿ ಕಾಪಾಡಿತ್ತು ಎಂದು ಘಟನೆಯನ್ನು ಸ್ಮರಿಸಿಕೊಂಡರು.  

BY-Vijayendra-in-ambassador-car.

‘ನನಗೆ ಎರಡು ತಟ್ಟಿದ್ದರು’

ಆಗ ಇಷ್ಟೆಲ್ಲ ಸೌಕರ್ಯ ಇರಲಿಲ್ಲ. ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ತೆರಳಲು ಅಂಬಾಸಿಡರ್‌ ಕಾರು ಕೇಳಿದೆ. ಆಗ ಯಡಿಯೂರಪ್ಪ ಅವರು ನನ್ನೊಂದಿಗೆ ಜಗಳವಾಡಿದರು. ಅದು ಪಕ್ಷದ ಕಾರು. ಹಾಗೆಲ್ಲ ಬಳಸುವಂತಿಲ್ಲ ಎಂದು ತಿಳಿಸಿದರು. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಆಸ್ಪತ್ರೆಗೆ ತೆರಳುವ ಬಡವರಿಗೆ ಈ ಕಾರು ಕೊಟ್ಟು ಕಳುಹಿಸುತ್ತಿದ್ದರು. ‘ಅವರು ಇವರು ಕೇಳಿದರೆ ಕಾರು ಕೊಡುತ್ತೀರ. ಮಕ್ಕಳಿಗೆ ಕೊಡುವುದಿಲ್ಲ’ ಎಂದು ಹೇಳಿದೆ. ಆಗ ನನಗೆ ಎರಡು ತಟ್ಟಿದ್ದರು ಎಂದು ವಿಜಯೇಂದ್ರ ನೆನಪಿಸಿಕೊಂಡರು.

by VIJAYENDRA ABOUT ambassador CAR

[su_note note_color=”#f1f1f1″ text_color=”#000000″ radius=”0″]

ಶಿಕಾರಿಪುರದಲ್ಲಿ ರೌಂಡ್ಸ್‌, ವಿಡಿಯೋಗೆ ಮೆಚ್ಚುಗೆ

ಯಡಿಯೂರಪ್ಪ ಅವರ ಲಕ್ಕಿ ಕಾರಿನಲ್ಲಿ ಬಿ.ವೈ.ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ‘ಹಲವು ಪ್ರಮುಖರು ಕರೆ ಮಾಡಿ ಕಾರಿನ ಜೊತೆಗಿನ ತಮ್ಮ ಭಾವನಾತ್ಮಕ ಸಂಬಂಧ ತಿಳಿಸಿದರುʼ ಎಂದು ವಿಜಯೇಂದ್ರ ಹೇಳಿದರು.

by VIJAYENDRA ABOUT ambassador CAR

[/su_note]

ಇದೇ ಕಾರಲ್ಲಿ ಸಂಸದರ ರೌಂಡ್ಸ್‌

ಇತ್ತೀಚೆಗೆ ಸಂಸದ ಬಿ.ವೈ.ರಾಘವೇಂದ್ರ ಕೂಡ ಇದೇ ಅಂಬಾಸಿಡರ್‌ ಕಾರಿನಲ್ಲಿ ಶಿಕಾರಿಪುರದಲ್ಲಿ ಸಂಚರಿಸಿದ್ದರು. ಇದರ ವಿಡಿಯೋವನ್ನು ಬಿ.ವೈ.ರಾಘವೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ » ಗಾಂಧಿ ಬಜಾರ್‌ ಕೇಸರಿಮಯ, ಮಹಾದ್ವಾರ ರೆಡಿ, ಈ ಬಾರಿಯ ಕಾನ್ಸೆಪ್ಟ್‌ ಏನು?

BY Vijayendra speaks about yedyurappa’s ambassador car

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 4, 2025

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment