ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 23 SEPTEMBER 2024 : ಒಕ್ಕಲಿಗ ಸಮಾಜದ (Vokkaliga)) ಅವಹೇಳನ, ದಲಿತರ ನಿಂದನೆ ಮಾಡಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒಕ್ಕಲಿಗ ಸಮಾಜದ ಆಗ್ರಹಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕಲಿಗ ಸಂಘದ ಪ್ರಮುಖರು, ಶಾಸಕ ಮುನಿರತ್ನ ವಿರುದ್ಧ ಹರಿಹಾಯ್ದರು.
‘ಪದೇ ಪದೆ ತಪ್ಪು ಮಾಡುತ್ತಿದ್ದಾರೆʼ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಮುನಿರತ್ನ ಅವರು ಈ ಹಿಂದೆ ಉರಿಗೌಡ, ನಂಜೇಗೌಡ ಪ್ರಸ್ತಾಪ ತೆಗೆದು ಅದನ್ನು ಸಿನಿಮಾ ಮಾಡುವುದಾಗಿ ಹೇಳಿದ್ದರು. ನಮ್ಮ ಸಮಾಜದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬುದ್ಧಿವಾದ ಹೇಳಿದ್ದರು. ಕ್ಷಮೆ ಕೇಳಿ ಹೋಗಿದ್ದ ಮುನಿರತ್ನ ಪದೇ ಪದೆ ಇಂತಹ ತಪ್ಪು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ಬಗ್ಗೆ ಅವರಿಗಿರುವ ಕೀಳು ಅಭಿರುಚಿ ಎಷ್ಟೆಂದು ಗೊತ್ತಾಗುತ್ತದೆ. ತಾಯಿಯಾಗಲಿ, ಸೋದರಿಯಾಗಲಿ ಅವರನ್ನೂ ಬಿಡದೇ ಮಂಚಕ್ಕೆ ಕರೆಯುವ ಅವರ ಮಾತುಗಳು ಅವರ ಕೆಟ್ಟ ಸಂಸ್ಕೃತಿ ತೋರಿಸುತ್ತದೆ. ಇಂತಹವರು ರಾಜಕೀಯದಲ್ಲಿ ಇರುವುದು ಸೂಕ್ತವಲ್ಲ. ಆದ್ದರಿಂದ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಕ್ಕಲಿಗರ ಸಂಘದ ಜಿಲ್ಲಾ ಬಿ.ಎ.ರಮೇಶ್ ಹೆಗ್ಡೆ, ರಾಜ್ಯ ನಿರ್ದೇಶಕ ಧರ್ಮೇಶ್, ಪಟ್ಟಸ್ವಾಮಿ, ಭಾರತಿ ರಾಮಕೃಷ್ಣ, ಚೇತನ್ ಗೌಡ, ಚಂದ್ರಕಾಂತ್, ಸುದರ್ಶನ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ಸವಳಂಗ ರಸ್ತೆ ಮೇಲ್ಸೇತುವೆ ಗುಂಡಿಗಳು ಕೊನೆಗೂ ಬಂದ್ | IMPACT