ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 25 ನವೆಂಬರ್ 2019
ಟ್ರಾಫಿಕ್ ರೂಲ್ಸ್ ಪಾಲಿಸದ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿಲು ಶಿವಮೊಗ್ಗ ಪೊಲೀಸರು ಹೊಸ ಪ್ಲಾನ್ ಮಾಡಿದ್ದಾರೆ. ಇನ್ಮುಂದೆ ಸಾರ್ವಜನಿಕರೆ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೊ ತೆಗೆದು ಪೊಲೀಸರಿಗೆ ವಾಟ್ಸಪ್ ಮಾಡಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ವಾಟ್ಸ್ ನಂಬರ್ ಕೂಡ ಬಿಡುಗಡೆ ಮಾಡಿದ್ದಾರೆ.
ವಾಟ್ಸಪ್ ಮೂಲಕವೇ ಕಂಪ್ಲೇಂಟ್
ಯದ್ವಾತದ್ವ ವಾಹನ ಓಡಿಸುವುದು, ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ, ಬೈಕ್’ನಲ್ಲಿ ತ್ರಿಬಲ್ ರೈಡಿಂಗ್, ವೀಲಿಂಗ್ ಸೇರಿದಂತೆ ಯಾವುದೇ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದರು, ಸಾರ್ವಜನಿಕರು ತಮ್ಮ ಮೊಬೈಲ್’ನಲ್ಲಿ ಫೋಟೊ ತೆಗೆಯಬಹುದು. ವಾಹನದ ನಂಬರ್, ನಿಯಮ ಉಲ್ಲಂಘನೆ ಮಾಡಿದ ಸ್ಥಳ, ದಿನಾಂಕ, ಸಮಯ ಮತ್ತು ಉಲ್ಲಂಘನೆ ಮಾಡಿದ ವಿಧವನ್ನು ವಾಟ್ಸಪ್ ಮಾಡಬೇಕಿದೆ.
ಪೊಲೀಸರ ವಾಟ್ಸಪ್ ನಂಬರ್ ಏನು?
ಸ್ಪಷ್ಟವಾದ ಫೋಟೊ, ಮಾಹಿತಿಯನ್ನು ಪೊಲೀಸ್ ಇಲಾಖೆಯ ವಾಟ್ಸಪ್ ನಂಬರ್’ಗೆ ಕಳುಹಿಸಬಹುದು. ಪೊಲೀಸರ ವಾಟ್ಸಪ್ ನಂಬರ್ 9480803300. ಇದಿಷ್ಟೆ ಅಲ್ಲ, ಶಿವಮೊಗ್ಗ ಪೊಲೀಸ್ ಫೇಸ್’ಬುಕ್ ಪೇಜ್’ಗೂ ಈ ಮಾಹಿತಿ ಕಳುಹಿಸಬಹುದಾಗಿದೆ. SHIVAMOGGA DISTRICT POLICE ಫೇಸ್’ಬುಕ್ ಪೇಜ್’ಗೆ ಫೋಟೊ ಮತ್ತು ಅಗತ್ಯ ಮಾಹಿತಿಯನ್ನು ರವಾನಿಸಬಹುದು.
ಆಟೋಮೇಷನ್ ಬಳಿಕ 40 ಲಕ್ಷ ಫೈನ್
ಶಿವಮೊಗ್ಗ ಜಿಲ್ಲೆಯಾದ್ಯಂತ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ಆಟೋಮೇಷನ್ ತಂತ್ರಾಂಶ ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಾಂಶ ಜಾರಿಗೆ ಬಂದ ನಂತರ 1,22,636 ನೊಟೀಸ್ ನೀಡಲಾಗಿದೆ. 40,14,400 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga police to utilize whatsapp to lodge complaint against traffic violations. Police has released the whatsapp number for public to click photos of traffic rules violation.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422