ಶಿವಮೊಗ್ಗ: KSRTC ಬಸ್ ನಿಲ್ದಾಣದಲ್ಲಿ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮಹಿಳೆಯ ಗುರುತು ಗೊತ್ತಾಗದ ಹಿನ್ನೆಲೆ ವಾರಸುದಾರರ ಪತ್ತೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಮೃತ ಮಹಿಳೆ 35 ರಿಂದ 42 ವರ್ಷ ವಯಸ್ಸಿನವರು. ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ ಹಾಗೂ ದೃಢವಾದ ಮೈಕಟ್ಟು ಹೊಂದಿದ್ದಾರೆ. ತಲೆಯಲ್ಲಿ ಸುಮಾರು 8 ಇಂಚು ಉದ್ದದ ಕಪ್ಪು ಬಿಳಿ ಬಣ್ಣದ ತಲೆ ಕೂದಲು, ಬಲಗೈನ ಒಳಭಾಗದಲ್ಲಿ ಏ ರುದ್ರಮ್ಮ, ಹಾಗೂ ತಿಮ್ಳೇಶ್ ಓ ಖ ಎಂಬ ಹಚ್ಚೆ ಗುರುತು ಇದೆ. ಮೃತರ ಎರಡು ಕಣ್ಣಿನ ಸುತ್ತ ಚರ್ಮ ಕಪ್ಪಾಗಿದ್ದು, ಮೈಮೇಲೆ ನೇರಳೆ ಮತ್ತು ಹಸಿರು ಬಣ್ಣದ ಡಿಸೈನ್ ಇರುವ ಪಾಲೀಸ್ಟರ್ ಸೀರೆ, ನೀಲಿ ಬಣ್ಣದ ಜಾಕೇಟ್, ಕಪ್ಪು ಬಣ್ಣದ ಲಂಗ ತೊಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೃತರ ವಾರಸುದಾರರ ಸುಳಿವು ದೊರತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ದೂ.ಸಂ: 08182-261414 ಅಥವಾ 99616882544 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ » ಕಾರಿನಲ್ಲಿ ಬಂದು ಹೊಟೇಲ್‌ನಲ್ಲಿ ಊಟ ಕೇಳಿ ಮಾಲೀಕನತ್ತ ಮಚ್ಚು ಬೀಸಿದ ವ್ಯಕ್ತಿ
KSRTC
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





