ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಎಸ್ಟಿ 2.0 ಇಂದಿನಿಂದ ಜಾರಿಗೆ ಬಂದಿದ್ದು, ಆಟೋಮೊಬೈಲ್ (Automobile) ಕ್ಷೇತ್ರದಲ್ಲಿ ಚೈತನ್ಯ ಮೂಡಿದೆ. ಶಿವಮೊಗ್ಗದಲ್ಲಿಯು ಬೈಕು, ಕಾರುಗಳ ಶೋ ರೂಂಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ವಾಹನಗಳ ಕುರಿತು ವಿಚಾರಣೆ, ಬುಕಿಂಗ್ ಮತ್ತು ಖರೀದಿ ಪ್ರಕ್ರಿಯೆ ಬಿರುಸು ಪಡೆದಿದೆ.
ಎಲ್ಲೆಲ್ಲಿ ಹೇಗಿದೆ ಟ್ರೆಂಡ್?
[su_divider top=”no” style=”dotted” divider_color=”#ffff” link_color=”#000000″ margin=”10″]
ಬೈಕ್ ಶೋ ರೂಂಗಳಲ್ಲಿ ಚೈತನ್ಯ
ಜಿಎಸ್ಟಿ ಪ್ರಮಾಣ ಇಳಿಕೆ ವಿಚಾರ ಸುದ್ದಿಯಾಗುತ್ತಿದ್ದಂತೆ ಶೋ ರೂಂಗಳಿಗೆ ಜನ ಕಡಿಮೆಯಾಗಿದ್ದರು. ಆದರೆ ಇವತ್ತು ಜಿಎಸ್ಟಿ 2.0 ಜಾರಿಗೆ ಬಂದಿದ್ದು, ಬೈಕುಗಳ ದರ ₹9,000 ದಿಂದ ₹20,000ದವರೆಗೆ ಇಳಿಕೆಯಾಗಿದೆ. ಹಾಗಾಗಿ ಶೋ ರೂಂಗಳಿಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆ ಏರಿಕೆಯಾಗಿದೆ. ಬೆಳಗ್ಗೆಯಿಂದ ಬೈಕುಗಳ ಕುರಿತು ವಿಚಾರಣೆ, ಬುಕಿಂಗ್ ಪ್ರಕ್ರಿಯೆ ಆರಂಭವಾಗಿದೆ.
[su_button target=”blank” style=”flat” background=”#ffffff” color=”#ffffff” size=”15″ center=”yes” icon=”icon: quote-left” icon_color=”#c20009″][/su_button]
ಜಿಎಸ್ಟಿ 2.0 ಆಟೋಮೊಬೈಲ್ ಉದ್ಯಮಕ್ಕೆ ಚೇತೋಹಾರಿಯಾಗಿದೆ. ಸುಪ್ರೀಂ ಬಜಾಜ್ ಶೋ ರೂಂನಲ್ಲಿ ಕಳೆದ ವಾರದಿಂದಲೇ ಗ್ರಾಹಕರಿಗೆ ಜಿಎಸ್ಟಿ 2.0 ಕುರಿತು ಮಾಹಿತಿ ನೀಡಿದ್ದೆವು. ಹಾಗಾಗಿ ಇವತ್ತು ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ಇನ್ಮುಂದೆಯು ಗ್ರಾಹಕರ ಸಂಖ್ಯೆ ಇದೇ ರೀತಿ ಇರುವ ಸಾಧ್ಯತೆ ಇದೆ. ನಮ್ಮಲ್ಲಿ ತ್ರಿಚಕ್ರ ವಾಹನಗಳ ಶೋ ರೂಂ ಕೂಡ ಇದೆ. ಆಟೋಗಳ ದರದಲ್ಲಿ ಭಾರಿ ಇಳಿಕೆಯಾಗಿದೆ.
- ಪ್ರಭಾಕರ್ ರಾವ್, ಬಿಸ್ನೆಸ್ ಹೆಡ್, ಸುಪ್ರೀಂ ಗ್ರೂಪ್
![]()

ಕಾರು ಶೋ ರೂಂಗಳ ಟ್ರೆಂಡ್ ಹೇಗಿದೆ?
ಕಾರುಗಳ ದರವು ಇಳಿಕೆಯಾಗಿದೆ. ಈ ಕುರಿತು ಹಲವು ಕಾರು ಕಂಪನಿಗಳು ಈಗಾಗಲೇ ಜಾಹೀರಾತುಗಳ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದ್ದವು. ಹಲವು ಕಾರುಗಳ ದರದಲ್ಲಿ ಸುಮಾರು ₹1 ಲಕ್ಷದವರೆಗೆ ಇಳಿಕೆಯಾಗಿದೆ. ಇದರಿಂದಾಗಿ ಕಾರುಗಳ ಕುರಿತು ಮಾಹಿತಿಗಾಗಿ ಜನರು ಶೋ ರೂಂಗಳಿಗೆ ದಾಂಗುಡಿ ಇಡುತ್ತಿದ್ದಾರೆ.

‘ಹತ್ತು ಗ್ರಾಹಕರ ಪೈಕಿ 3 ಮಂದಿ ಬುಕಿಂಗ್ ಮಾಡುತ್ತಿದ್ದಾರೆʼ ಎಂದು ಶೃತಿ ಮೋಟರ್ಸ್ ಸಿಬ್ಬಂದಿ ತಿಳಿಸಿದ್ದಾರೆ. ಹುಂಡೈ, ಟಾಟಾ, ಟೊಯೊಟ, ಕಿಯಾ ಶೋ ರೂಂಗಳಲ್ಲಿ ಇದೇ ಟ್ರೆಂಡ್ ಇದೆ.
ಇದನ್ನೂ ಓದಿ » ಪ್ರವಾಸಿಗರಿಗೆ ಗುಡ್ ನ್ಯೂಸ್, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, ಆಗಮನದ ದಿನಾಂಕ ಫಿಕ್ಸ್
ಎಲೆಕ್ಟ್ರಿಕ್ ವಾಹನಗಳ ಬುಕಿಂಗ್ ಹೆಚ್ಚಳ
ಎಲೆಕ್ಟ್ರಿಕ್ ವಾಹನಗಳಿಗೆ ಈ ಮೊದಲು ಶೇ.5ರಷ್ಟು ಜಿಎಸ್ಟಿ ಇತ್ತು. ಈಗಲು ಅದೇ ಜಿಎಸ್ಟಿ ದರ ಮುಂದುವರೆದಿದೆ. ಅದರೆ ಸ್ಪೇರ್ ಪಾರ್ಟ್ಸ್ ದರ ಇಳಿಕೆಯಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಗ್ರಾಹಕರು ಮುಗಿಬಿದಿದ್ದಾರೆ. ಶಿವಮೊಗ್ಗದ ಏಥರ್ ಶೋ ರೂಂನಲ್ಲಿ ಬೆಳಗ್ಗೆಯಿಂದ ಗ್ರಾಹಕರು ಹೆಚ್ಚಾಗಿದ್ದಾರೆ. ಬುಕಿಂಗ್ ಕೂಡ ನಡೆಯುತ್ತಿದೆ.

[su_button target=”blank” style=”flat” background=”#ffffff” color=”#ffffff” size=”15″ center=”yes” icon=”icon: quote-left” icon_color=”#c20009″][/su_button]
ಈವರೆಗೂ ಇದ್ದ ಗ್ರಾಹಕರ ಸಂಖ್ಯೆಗಿಂತಲು ಇವತ್ತು ಹೆಚ್ಚಾಗಿದೆ. ಮಧ್ಯಾಹ್ನದವರೆಗೆ ಸುಮಾರು 6 ವಾಹನ ಮಾರಾಟವಾಗಿವೆ. ಇದೇ ಟ್ರೆಂಡ್ ಮುಂದುವರೆಯುವ ಸಾಧ್ಯತೆ ಇದೆ.
- ಶಿವಪ್ರಸಾದ್, ಮ್ಯಾನೇಜರ್, ಏಥರ್ ಶೋ ರೂಂ
![]()
[su_note note_color=”#f1f1f1″ text_color=”#000000″ radius=”0″]
ಸ್ಪೇರ್ ಪಾರ್ಟ್ಸ್ ದರ ಕಡಿಮೆ
[su_divider top=”no” style=”dotted” divider_color=”#f1f1f1″ link_color=”#000000″ margin=”10″]
ಜಿಎಸ್ಟಿ 2.0ನಲ್ಲಿ ವಾಹನಗಳ ದರ ಮಾತ್ರವಲ್ಲದೆ ಸ್ಪೇರ್ ಪಾರ್ಟ್ಸ್ ದರ ಕೂಡ ತಗ್ಗಿದೆ. ಈವರೆಗೂ ಶೇ.28ರಷ್ಟು ತೆರಿಗೆ ಇತ್ತು. ಈಗ ಸ್ಪೇರ್ ಪಾರ್ಟ್ಸ್ ದರ ಶೇ.18ಕ್ಕೆ ಇಳಿಕೆಯಾಗಿದೆ. ಇತ್ತ ವಾಹನಗಳ ದರ ಕಡಿಮೆಯಾಗಿ, ಅತ್ತ ನಿರ್ವಾಹಣೆ ಖರ್ಚೂ ಇಳಿಕೆಯಾಗಿದ್ದು ಗ್ರಾಹಕರಿಗೆ ಡಿಬಲ್ ಧಮಾಕ ಸಿಕ್ಕಂತಾಗಿದೆ. ಹಾಗಾಗಿ ವಾಹನಗಳ ಖರೀದಿಗೆ ಜನರು ಶೋ ರೂಂಗಳತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನುತ್ತಾರೆ ಕಾರು ಶೋ ರೂಂ ಒಂದರ ಸರ್ವಿಸ್ ವಿಭಾಗದ ಹಿರಿಯ ಸಿಬ್ಬಂದಿ. [/su_note]
ಈವರೆಗು ಪಿತೃ ಪಕ್ಷದ ಕಾರಣಕ್ಕೆ ಬುಕಿಂಗ್ ತಗ್ಗಿತ್ತು. ಈಗ ನವರಾತ್ರಿ ಮತ್ತು ಜಿಎಸ್ಟಿ 2.0 ಜಾರಿಯಿಂದ ಖರೀದಿದಾರರು ಹೆಚ್ಚಾಗಿದ್ದಾರೆ. ಇದು ಶಿವಮೊಗ್ಗದ ಆಟೋಬೊಬೈಲ್ ಕ್ಷೇತ್ರದಲ್ಲಿ ಉತ್ಸಾಹ ಮೂಡಿಸಿದೆ.
Shivamogga Automobile News
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















