ಶಿವಮೊಗ್ಗ: ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಮನೆಯೊಂದರ ಬೀಗ ಮುರಿದು ಸುಮಾರು ₹7.99 ಲಕ್ಷ ಮೌಲ್ಯದ ಚಿನ್ನಾಭರಣ (gold), ಬೆಳ್ಳಿ ವಸ್ತುಗಳು ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಮನೆಯ ಮಾಲೀಕರಾದ ವಿಜಯಲಕ್ಷ್ಮೀ ಅವರು ಮುಂಬೈಗೆ ಹೋಗಿದ್ದಾಗ ಮುಂಬಾಗಿಲಿನ ಇಂಟರ್ ಲಾಕ್ ಮುರಿದ ಕಳ್ಳರು ಒಳಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್ 12 ಸುದ್ದಿಗಳು
ಅಲ್ಮೇರಾದಲ್ಲಿದ್ದ 102 ಗ್ರಾಂ ಚಿನ್ನದ ಆಭರಣ, 200 ಗ್ರಾಂ ಬೆಳ್ಳಿ ವಸ್ತು, ಎರಡು ವಾಚ್‌ಗಳು ಹಾಗೂ ಸುಮಾರು ₹71,000 ನಗದು ದೋಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಿಜಯಲಕ್ಷ್ಮೀ ಅವರು ಮನೆಗೆ ಬೀಗ ಹಾಕಿಕೊಂಡು ಮುಂಬೈಗೆ ತೆರಳಿದ್ದರು. ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ವಿಜಯಲಕ್ಷ್ಮಿ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮುಂಬೈನಿಂದ ಶಿವಮೊಗ್ಗಕ್ಕೆ ಹಿಂತಿರುಗಿದ ಅವರು ಮನೆಯನ್ನು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
LATEST NEWS
- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

- ಶಿವಮೊಗ್ಗ ಸಿಟಿಯ ಹಲವೆಡೆ ಜನವರಿ 29, 30ರಂದ ಅರ್ಧ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗದಲ್ಲಿ ವಿದ್ಯಾರ್ಥಿಗಳೇ ಟ್ರಾಫಿಕ್ ಪೊಲೀಸರಾದರು, ಸಂಚಾರ ನಿಯಂತ್ರಿಸಿದರು, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





