ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020
ಶಿವಮೊಗ್ಗ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆ ಹೆಚ್ಚಳವಾಗಿದೆ. ಈ ತನಕ ಒಂದೆ ಕಂಟೈನ್ಮೆಂಟ್ ಜೋನ್ ಇತ್ತು. ಆದರೆ ಎರಡು ಹೊಸ ಪಾಸಿಟಿವ್ ಪ್ರಕರಣದಿಂದ ಕಂಟೈನ್ಮೆಂಟ್ ಜೋನ್ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಂಟೈನ್ಮೆಂಟ್ ಜೋನ್ 1 | ತೀರ್ಥಹಳ್ಳಿ ತಾಲೂಕಿನ ಗ್ರಾಮ
ಪೇಷೆಂಟ್ ನಂಬರ್ 995 ಮುಂಬೈನಿಂದ ತೀರ್ಥಹಳ್ಳಿ ತಾಲೂಕು ಹಳ್ಳಿಕಬೈಲು ಗ್ರಾಮಕ್ಕೆ ಬಂದಿದ್ದರು. ಮರು ದಿನವೆ ಇವರಿಗೆ ಕರೋನ ಪಾಸಿಟಿವ್ ಬಂದಿತ್ತು. ಪಿ995 ಮತ್ತು ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಗ್ರಾಮದಲ್ಲಿ ಓಡಾಡಿದ್ದ ಹಿನ್ನೆಲೆ, ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿತ್ತು.
ಕಂಟೈನ್ಮೆಂಟ್ ಜೋನ್ 2 | ಶಿಕಾರಿಪುರ ತಾಲೂಕು ತರಲಘಟ್ಟ
ಪಿ1304 ಇದೇ ಗ್ರಾಮದವರು. ಇವರಿಗೆ ಸೋಂಕು ತಗುಲಿದ್ದು ಹೇಗೆ ಅನ್ನುವುದೇ ತಿಳಿದು ಬಂದಿಲ್ಲ. ಇದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತೀವ್ರ ತಲೆನೋವು ತಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತರಲಘಟ್ಟ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಗ್ರಾಮಸ್ಥರು ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೆ ಪೂರೈಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇನ್ನು ಗ್ರಾಮದೊಳಗೆ ಯಾರಿಗು ಪ್ರವೇಶವಿಲ್ಲ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ತಹಶೀಲ್ದಾರ್ ಕವಿರಾಜ್ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಂಟೈನ್ಮೆಂಟ್ ಜೋನ್ 3 | ಬಾಳೆಕೊಪ್ಪ, ಶಿವಮೊಗ್ಗ ತಾಲೂಕು
ಪಿ1305 ಈ ಗ್ರಾಮದವರು. ಇವರಿಗೂ ಸೋಂಕು ತಗುಲಿದ್ದು ಹೇಗೆ ಅನ್ನುವುದು ತಿಳಿದು ಬಂದಿಲ್ಲ. ಇತ್ತೀಚೆಗಷ್ಟೆ ಇವರು ದಾವಣಗೆರೆ ಜಿಲ್ಲೆಗೆ ಹೋಗಿ ಬಂದಿದ್ದರು. ಇವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಗಾಗಿ ಬಾಳೆಕೊಪ್ಪ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಇಲ್ಲಿಯು ಮನೆಯಿಂದ ಯಾರು ಹೊರಗೆ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಏನಿದು ಕಂಟೈನ್ಮೆಂಟ್ ಜೋನ್?
ಕರೋನ ಸೋಂಕು ಹರಡದಂತೆ ತಡೆಯಲು ಕಂಟೈನ್ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗುತ್ತದೆ. ಸೋಂಕಿತರು ಓಡಾಡಿರುವ ಜಾಗಗಳನ್ನು ಬಂದ್ ಮಾಡಲಾಗುತ್ತದೆ. ಆ ವ್ಯಾಪ್ತಿಯಲ್ಲಿ ಇರುವ ಎಲ್ಲರನ್ನು ನಿರಂತರ ಆರೋಗ್ಯ ತಪಾಸಣೆ ಒಳಪಡಿಸಲಾಗುತ್ತದೆ. ಒಂದು ವೇಳೆ ಇನ್ನಷ್ಟು ಸೋಂಕಿತರು ಆ ಸ್ಥಳದಲ್ಲಿದ್ದರೆ ಅವರನ್ನು ಕೂಡಲೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಸೋಂಕು ಮತ್ತಷ್ಟು ಪ್ರದೇಶಕ್ಕೆ ಹರಡದಂತೆ ನಿಯಂತ್ರಿಸಲು ಕಂಟೈನ್ಮೆಂಟ್ ಜೋನ್ ಸ್ಥಾಪಿಸಲಾಗುತ್ತದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]