ಇನ್ಮುಂದೆ ರೈಲ್ವೆ ಜನರಲ್‌ ಟಿಕೆಟ್‌ಗಾಗಿ ಕ್ಯೂ ನಿಲ್ಲಬೇಕಿಲ್ಲ, ಬಂದಿದೆ APP!

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 OCTOBER 2023

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಟಿಕೆಟ್‌ ಖರೀದಿ (railway ticket booking) ವ್ಯವಸ್ಥೆಯನ್ನು ತುಂಬಾ ಸರಳೀಕೃತಗೊಳಿಸಿದೆ. UN RESERVED ಕೆಟಗರಿಯ (ಜನರಲ್‌ ಬೋಗಿ) ರೈಲುಗಳ ಟಿಕೆಟ್‌ ಖರೀದಿಗೆ ಹೊಸ ರೂಪ ನೀಡಿದೆ. ಜನರಲ್‌ ಬೋಗಿ ಟಿಕೆಟ್‌ಗಾಗಿ ಇನ್ಮುಂದೆ ಕ್ಯೂನಲ್ಲಿ ನಿಲ್ಲಬೇಕಿಲ್ಲ, ಚಿಲ್ಲರೆಗಾಗಿ ತಡಕಾಡಬೇಕಿಲ್ಲ. ಮೊಬೈಲ್‌ನಲ್ಲೇ ಟಿಕೆಟ್‌ ಖರೀದಿಸಬಹುದಾಗಿದೆ.

UN RESERVED ಟಿಕೆಟ್‌

ಕೆಲವು ಬೋಗಿ ಅಥವಾ ರೈಲುಗಳಿಗೆ ರಿಸರ್ವೇಷನ್‌ ಕಡ್ಡಾಯ. ಹಾಗಾಗಿ ಸೀಟ್‌ ಕಾಯ್ದಿರಿಸಲು ವೆಬ್‌ಸೈಟ್‌ ಅಥವಾ ಮೊಬೈಲ್‌ ಆಪ್‌ನಲ್ಲೇ ಅವಕಾಶ ಕಲ್ಪಿಸಲಾಗಿದೆ. ಆದರೆ ಜನರಲ್‌ ಬೋಗಿಗಳ ಟಿಕೆಟ್‌ ಖರೀದಿಗೆ ((railway ticket booking) ರೈಲ್ವೆ ನಿಲ್ದಾಣಕ್ಕೇ ಹೋಗಬೇಕು, ಕ್ಯೂನಲ್ಲಿ ನಿಲ್ಲಬೇಕು, ಚಿಲ್ಲರೆ ಇಲ್ಲದಿದ್ದರೆ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಬೇಕು. ಇದೆ ಕಾರಣಕ್ಕೆ ಹಲವರು ಚಿಂತೆಗೀಡಾಗುತ್ತಾರೆ. ಈ ಸಮಸ್ಯೆಗೆ ರೈಲ್ವೆ ಇಲಾಖೆ ಪರಿಹಾರ ಕಂಡುಕೊಂಡಿದೆ. ಜನರಲ್‌ ಬೋಗಿಯ ಟಿಕೆಟ್‌ಗಳನ್ನು ಮೊಬೈಲ್‌ APP ಮೂಲಕವೇ ಖರೀದಿಸಬಹುದಾಗಿದೆ.

ಇದನ್ನೂ ಓದಿ- ದಸರಾ ರಜೆ, ಪ್ರಯಾಣಿಕರ ಅನುಕೂಲಕ್ಕಾಗಿ KSRTCಯಿಂದ ವಿಶೇಷ ವ್ಯವಸ್ಥೆ

ಯಾವುದದು APP? ಏನೆಲ್ಲ ಇದೆ?

ರೈಲ್ವೆ ಇಲಾಖೆ ವತಿಯಿಂದ UTS MOBILE APP (UNRESERVED TICKETS APP) ಬಿಡುಗಡೆ ಮಾಡಲಾಗಿದೆ. GOOGLE PLAY STOREನಲ್ಲಿ ಈ APP ಲಭ್ಯವಿದೆ. ಇದನ್ನು ಡೌನ್‌ ಲೋಡ್‌ ಮಾಡಿಕೊಂಡು ರಿಜಿಸ್ಟರ್‌ ಮಾಡಿಕೊಳ್ಳಬೇಕಿದೆ.

APPನಲ್ಲಿ ಟಿಕೆಟ್‌ ಬುಕಿಂಗ್‌ ಮಾಡುವ ಮೊದಲು PAPER LESS ಅಥವಾ PAPER ಎಂಬ ಎರಡು ಆಪ್ಷನ್‌ ಪೈಕಿ ಒಂದನ್ನು ಆಯ್ಕೆ ಮಾಡಬೇಕು. ನಂತರ ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ತೆರಳಬೇಕು ಎಂದು ನಮೂದಿಸಬೇಕು.

ಟಿಕೆಟ್‌ ದರ ಪಾವತಿಗೆ R-WALLET ಆಪ್ಷನ್‌ ಇದೆ. ಮೊದಲೆ walletನಲ್ಲಿ ಹಣ ಇರಿಸಿದ್ದರೆ ಟಿಕೆಟ್‌ ಖರೀದಿ ಮಾಡಬಹುದು. ಇಲ್ಲವಾದಲ್ಲಿ UPI, NET BANKING, CREDIT CARD, DEBIT CARD ಮೂಲಕವು ಟಿಕೆಟ್‌ ಖರೀದಿಸಬಹುದು.

ಇದನ್ನೂ ಓದಿ- ಇನ್ಮುಂದೆ ಮೆಟ್ರೋ ರೈಲಿನಲ್ಲೇ ಊರಿಗೆ ಹೋಗಬಹುದು, ರೆಡಿಯಾಗುತ್ತಿದೆ ವಂದೇ ಮೆಟ್ರೋ, ವಿಶೇಷತೆಗಳೇನು?

UTS APPನಲ್ಲಿ SHOW TICKET ಆಪ್ಷನ್‌ ಕ್ಲಿಕ್‌ ಮಾಡಿದರೆ PAPER LESS ಟಿಕೆಟ್‌ ಅನ್ನು ರೈಲ್ವೆ ಟಿಟಿಇಗೆ ತೋರಿಸಬಹುದು. PAPER ಟಿಕೆಟ್‌ ಅಗತ್ಯವಿದ್ದರೆ ಬುಕಿಂಗ್‌ ಅವಧಿಯಲ್ಲಿ ಒದಗಿಸಿದ ID ಬಳಸಿ ಬುಕಿಂಗ್‌ ಕೌಂಟರ್‌ನಲ್ಲಿ ಟಿಕೆಟ್‌ ಪಡೆಯಬಹುದಾಗಿದೆ.

ಈ APP ಮೂಲಕ ಪ್ಲಾಟ್‌ ಫಾರಂ ಟಿಕೆಟ್‌ ಕೂಡ ಖರೀದಿಸಬಹುದಾಗಿದೆ. R- WALLETನಲ್ಲಿ ಹಣವಿರಿಸಿ ಟಿಕೆಟ್‌ ಖರೀದಿಸಿದರೆ ಶೇ.3ರಷ್ಟು ಬೋನಸ್‌ ನೀಡಲಾಗುತ್ತದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 27, 2023

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment