SHIMOGA NEWS, 29 OCTOBER 2024 : ಶಿವಮೊಗ್ಗ ತಾಲೂಕಿನ ವಿವಿಧೆಡೆ ಕಾಣಿಸಿಕೊಂಡು ಬೆಳೆ ಹಾನಿ ಮಾಡಿ, ಆತಂಕ ಸೃಷ್ಟಿಸಿರುವ ಕಾಡಾನೆಗಳ (Wild Elephants) ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಸಕ್ರೆಬೈಲು ಬಿಡಾರದ ಮೂರು ಆನೆಗಳು ಪುರದಾಳು ಗ್ರಾಮಕ್ಕೆ ಆಗಮಿಸಿ ಬೀಡು ಬಿಟ್ಟಿವೆ.
ಆನೆ ಬಿಡಾರದ ಆಲೆ, ಬಹದ್ದೂರು ಮತ್ತು ಸೋಮಣ್ಣ ಆನೆಗಳನ್ನು ಪುರದಾಳು ಗ್ರಾಮಕ್ಕೆ ಕರೆತರಲಾಗಿದೆ. ಕಾಡಾನೆಗಳ ಸೆರೆಗೆ ಈಗಾಗಲೇ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಕಾರ್ಯಾಚರಣೆ ಶುರುವಾಗಿದೆ.
ಇದನ್ನೂ ಓದಿ » ಪುರದಾಳುವಿನಲ್ಲಿ ತೋಟ, ಹೊಲಕ್ಕೆ ನುಗ್ಗಿದ ಕಾಡಾನೆಗಳು
ಜನ ಪ್ರತಿಭಟನೆ ನಡೆಸಿದ್ದರು
ಶಿವಮೊಗ್ಗ ತಾಲೂಕಿನ ಪುರದಾಳು, ಮಲೇಶಂಕರ, ಆಲದೇವರ ಹೊಸೂರು, ಸಿರಿಗೆರೆ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆ ಹಾನಿ ಮಾಡಿದ್ದವು. ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ರಾತ್ರಿ ಪಟಾಕಿ ಸಿಡಿಸಿ ತೋಟ, ಹೊಲಗಳಿಗೆ ನುಗ್ಗದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿತ್ತು. ಆದರೆ ಆನೆಗಳು ಮಧ್ಯರಾತ್ರಿ ಭತ್ತದ ಗದ್ದೆ, ಅಡಕೆ ಹಾಗೂ ಬಾಳೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿ, ಬೆಳೆ ನಾಶ ಪಡಿಸುತ್ತಿದ್ದವು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಾಡಾನೆಗಳು
ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ರೈತರು ರೋಸಿ ಹೋಗಿದ್ದರು. ಕಾಡಾನೆ ಹಾವಳಿ ಖಂಡಿಸಿ ಡಿಸಿ ಕಚೇರಿ, ಸಿರಿಗೆರೆ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಗೆ ಮನವಿ ಸಲ್ಲಿಸಿ ಕಾಡಾನೆ ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದರು. ಈಗ ಕಾರ್ಯಾಚರಣೆ ಆರಂಭವಾಗಿದೆ.
Wild elephants wreak havoc in Shimoga taluk, damaging crops and sparking panic. Forest department launches capture operation with three trained elephants from Sakrebailu Camp. Residents protested against inaction, demanding relocation. Operation underway from Shettihalli Wildlife Sanctuary to mitigate elephant menace.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200