ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 FEBRUARY 2024
SHIMOGA : ಮಂಗನ ಕಾಯಿಲೆಗೆ (ಕೆಎಫ್‌ಡಿ) ತುತ್ತಾಗಿದ್ದ ಮಹಿಳೆಯೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿದ್ದಾಪುರ ತಾಲೂಕಿನ ಕೊರ್ಲಕೈ ಉಪಕೇಂದ್ರ ವ್ಯಾಪ್ತಿಯ ನಾಗಮ್ಮ (57) ಮೃತ ಮಹಿಳೆ.
ಐಸಿಯುನಲ್ಲಿ ದಾಖಲಾಗಿದ್ದ ನಾಗಮ್ಮ ಅವರು ಫೆ.25ರಂದು ರಾತ್ರಿ 8.30ರ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ಒತ್ತಾಯವಾಗಿ ಆಸ್ಪತ್ರೆಗೆ ದಾಖಲು
ಜ.28ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ವೇಳೆ ನಾಗಮ್ಮ ಅವರಿಗೆ ಕೆಮ್ಮು, ಜ್ವರ ಇರುವುದು ಗೊತ್ತಾಗಿತ್ತು. ಕಫ ಪರೀಕ್ಷೆಗೆ ನೀಡುವಂತೆ ಸೂಚಿಸಿದ್ದರು. ಫೆ.29ರಂದು ಸಾಗರದ ಭಾಗವತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ.30 ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ಸಂದರ್ಭ ಇನ್ನೂ ಜ್ವರ ಇರುವುದು ಗೊತ್ತಾಗಿತ್ತು. ಈ ಹಿನ್ನೆಲೆ ಸಮುದಾಯ ಆರೋಗ್ಯಾಧಿಕಾರಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದರು. ಫೆ.1ರಂದು ಕೆಎಫ್‌ಡಿ ಆರ್‌ಟಿಪಿಸಿಆರ್ ಪಾಸಿಟಿವ್ ಎಂದು ತಿಳಿದು ಬಂದಿತ್ತು.
ಫೆ.2ರಂದು ರೋಗಿಯನ್ನು ಸಿದ್ದಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಫೆ.3 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚೇತರಿಕೆ ಕಾಣದ ಹಿನ್ನೆಲೆ ಫೆ.4ರಂದು ಕೆಎಂಸಿ ಮಣಿಪಾಲಕ್ಕೆ ದಾಖಲು ಮಾಡಲಾಗಿತ್ತು. ಫೆ.24 ರಂದು ವೈದ್ಯರ ಸಲಹೆ ವಿರುದ್ಧವಾಗಿ ಕೆಎಂಸಿ ಆಸ್ಪತ್ರೆಯಿಂದ ಮಧ್ಯಾಹ್ನ 3.30ಕ್ಕೆ ಬಿಡುಗಡೆಯಾಗಿದ್ದರು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನವೊಲಿಸಿ ಫೆ.24 ರಂದು ಸಂಜೆ ಮೆಗ್ಗನ್ ಆಸ್ಪತ್ರೆಯ ಐಸಿಯುಗೆ ದಾಖಲಿಸಿದ್ದರು ಎಂದು ಡಾ. ರಾಜೇಶ್ ಸುರಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಜನ ಸಂಚಾರ ಹೆಚ್ಚಿರುವ ರಸ್ತೆಯಲ್ಲೇ ಬೈಕುಗಳು ನಾಪತ್ತೆ, ಎರಡು ಪ್ರತ್ಯೇಕ ಕೇಸ್ ದಾಖಲು
LATEST NEWS
- ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ, ದೂರಿನಲ್ಲಿ ಭದ್ರಾವತಿಯ 3 ಸ್ನೇಹಿತರ ಉಲ್ಲೇಖ, ಯಾರದು?

- ನಿನ್ನ ಬೈಕ್ ಕೊಡು ಎಂದು ವ್ಯಕ್ತಿಯನ್ನು ಅಡ್ಡಗಟ್ಟಿ ಹೊಡೆದ ಅಪರಿಚಿತರು, ಕಾರಣವೇನು? ಏನಿದು ಕೇಸ್?

- ಶಿವಮೊಗ್ಗದ ಬೈಪಾಸ್ ರಸ್ತೆಯ ಸೇತುವೆ ಬಳಿ ತುಂಗಾ ಹೊಳೆಗೆ ಹಾರಲು ಯತ್ನಿಸಿದ ಬಾಲಕ

- ಸಂಜೆ ಇದ್ದದ್ದು ಬೆಳಗ್ಗೆ ಮಾಯ! ಪುರದಾಳ್ ಡ್ಯಾಂ ಬಳಿ ಆಗಿದ್ದೇನು? ದಾಖಲಾಯ್ತು ಕೇಸ್

- ಸಿಡಿಲು ಬಡಿದು ಅಂಗಡಿಗೆ ಬೆಂಕಿ, ವ್ಯಾಪಾರಿ ಸಾವು, ಎಲ್ಲಿ?

About The Editor
ನಿತಿನ್ ಆರ್.ಕೈದೊಟ್ಲು















