ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 17 MAY 2024
SHIMOGA : ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಲ್ಲಿ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಿಸಲಾಗಿದೆ. ಆಕಾಂಕ್ಷಿಗಳ (Aspirant) ಅಭಿಪ್ರಾಯ ಕೇಳದೆ ಅಭ್ಯರ್ಥಿ ಘೋಷಿಸಲಾಗಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸೌಜನ್ಯಕ್ಕು ಆಹ್ವಾನಿಸಿಲ್ಲ ಎಂದು ಬಿಜೆಪಿ ಕಾನೂನು ಪ್ರಕೋಷ್ಟದ ಸಹ ಸಂಚಾಲಕ ಪ್ರವೀಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವೀಣ್, ಪದವೀಧರ ಕ್ಷೇತ್ರಕ್ಕೆ ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ರಘಪತಿ ಭಟ್ ಮತ್ತು ನಾನು ಆಕಾಂಕ್ಷಿಗಳಾಗಿದ್ದೆವು. ಇದಕ್ಕಾಗಿ ಪದವೀಧರರ ನೋಂದಣಿ ಕಾರ್ಯ ನಡೆಸಿದ್ದೇವೆ. ಆದರೆ ತಮ್ಮ ಅಭಿಪ್ರಾಯ ಕೇಳದೆ, ಈಚೆಗಷ್ಟೆ ಬಿಜೆಪಿ ಸೇರಿದವರಿಗೆ ಟಿಕೆಟ್ ನೀಡಲಾಗಿದೆ. ಇನ್ನೊಂದೆಡೆ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕಡು ಭ್ರಷ್ಟ ಎಂದು ಆರೋಪಿಸಿದರು.
ಇದನ್ನೂ ಓದಿ – ಪ್ಲಾಸ್ಟಿಕ್ ನುಂಗಿ ನಿತ್ರಾಣಗೊಂಡಿದ್ದ ಹಾವು, ಮಾರುದ್ದದ್ದ ಪ್ಲಾಸ್ಟಿಕ್ ಹೊರತೆಗೆದ ಉರಗ ರಕ್ಷಕ
ಮೇ 21ರ ನಂತರ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ದೇವೇಂದ್ರಪ್ಪ, ಮಹೇಂದ್ರ ಕುಮಾರ್, ವಾಗೀಶ್ ಉಪಸ್ಥಿತರಿದ್ದರು.
LATEST NEWS
- ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

- ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

- ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

- ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್

- ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

About The Editor
ನಿತಿನ್ ಆರ್.ಕೈದೊಟ್ಲು
















