SHIVAMOGGA LIVE NEWS | 8 FEBRUARY 2023
SHIMOGA : ಹೊಸ ಪಿಂಚಣಿ ನೀತಿ (NPS) ರದ್ದುಗೊಳಿಸಬೇಕು, ಪೊಲೀಸ್ ಇಲಾಖೆಯಲ್ಲಿ ವೇತನ ತಾರತಮ್ಯ ನಿವಾರಣೆಯಾಗಬೇಕು ಸೇರಿದಂತೆ ಕಾರ್ಮಿಕರು, ಶೈಕ್ಷಣಿಕ ಸಾಲ ಪಡೆದವರು, ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಈ ಭಾರಿ ಬಜೆಟ್ ನಲ್ಲಿ ಸಮಸ್ಯೆಗಳು ಪರಿಹಾರ ಕಾಣಬಹುದು ಎಂಬ ನಿರೀಕ್ಷೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಅವರು, ಕಳೆದ ಮೂರು ಬಜೆಟ್ ಅವಧಿಯಲ್ಲಿಯು ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದೆ. ಈ ಭಾರಿಯು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ. ನಾಳೆ ಶಿವಮೊಗ್ಗಕ್ಕೆ ಸಿಎಂ ಆಗಮಿಸುತ್ತಿದ್ದಾರೆ. ಅಗ ಪುನಃ ಮನವಿ ನೀಡಲಿದ್ದೇನೆ ಎಂದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನೆಲ್ಲ ಮನವಿ ಮಾಡಲಿದ್ದಾರೆ?
ರಾಜ್ಯದ 3 ಲಕ್ಷ ಸರ್ಕಾರಿ ನೌಕರರು ಹೊಸ ಪಿಂಚಣಿ ನೀತಿ (NPS) ರದ್ದುಗೊಳಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಹಳೆ ಪಿಂಚಣಿ ನೀತಿ ಜಾರಿಗೊಳಿಸಬೇಕು. ಈ ಮೂಲಕ ನೌಕರರು ನಿವೃತ್ತರಾದ ಮೇಲೆ ಜೀವನ ನಿರ್ವಹಣೆಗೆ ನಿರ್ದಿಷ್ಟ ಮೊತ್ತ ಸಿಗುವಂತಾಗಬೇಕು. ಅವರ ಕುಟುಂಬಕ್ಕೆ ದಾರಿ ತೋರಿಸಬೇಕು ಎಂದು ಆಯನೂರು ಮಂಜುನಾಥ್ ಒತ್ತಾಯಿಸಿದರು.
ಪೊಲೀಸ್ ಇಲಾಖೆಯಲ್ಲಿ ವೇತನ ತಾರತಮ್ಯವಾಗಿದೆ. ಸೇವಾ ಹಿರಿತನ ಇರುವವರಿಗೆ ಕಡಿಮೆ ವೇತನ, ಹೊಸದಾಗಿ ಆಯ್ಕೆಯಾದವರಿಗೆ ಹಚ್ಚಿಗೆ ಸಂಬಳವಿದೆ. ಈ ನ್ಯೂನತೆ ಸರಿಪಡಿಸಬೇಕು. ಬಡ್ತಿ ಹೊಂದಿದವರಿಗೆ ಭತ್ಯೆ, ರಜಾ ದಿನಗಳು ಕಡಿತವಾಗಿದೆ. ರಜಾ ರಹಿತವಾಗಿ ಕರ್ತವ್ಯ ನಿರ್ವಹಿಸುವವರಿಗೆ ಈ ಹಿಂದೆ 13 ತಿಂಗಳು ವೇತನ ನೀಡಲಾಗುತ್ತಿತ್ತು. ಈಗ ಹನ್ನೆರಡುವರೆ ತಿಂಗಳ ವೇತನ ನೀಡಲಾಗುತ್ತಿದೆ. ಅದನ್ನು ಪುನಃ 13 ತಿಂಗಳಿಗೆ ಹೆಚ್ಚಿಸಬೇಕು ಎಂದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ 620 ಮನೆಗಳ ಹಂಚಿಕೆ, ಸೌಲಭ್ಯವಿಲ್ಲದ್ದಕ್ಕೆ ಕಾಂಗ್ರೆಸ್ ಪಕ್ಷ ಗರಂ, ಮಾಜಿ ಎಂಎಲ್ಎ ಆರೋಪಗಳೇನು?
ಅಪಘಾತಗಳಲ್ಲಿ ಹಲವು ವಾಹನ ಚಾಲಕರು, ಕಾರ್ಮಿಕರು ಅಂಗವಿಲಕರಾಗುತ್ತಿದ್ದಾರೆ. ಅವರ ರಕ್ಷಣೆಗೆ ಮೋಟಾರ್ ವಾಹನ ಚಾಲಕರು, ನೌಕರರ ಕಲ್ಯಾಣ ಮಂಡಳಿ ರಚಿಸಬೇಕು. ಶೈಕ್ಷಣಿಕ ಸಾಲ ಪಡೆದು ಶಿಕ್ಷಣ ಮುಗಿಸಿದರು ಕೆಲಸ ಸಿಗದೆ ಯುವಕರು ಕಷ್ಟಪಡುತ್ತಿದ್ದಾರೆ. ಆದ್ದರಿಂದ ಪ್ರಸಕ್ತ ಬಜೆಟ್ ನಲ್ಲಿ ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ಆಯನೂರು ಮಂಜುನಾಥ್ ಆಗ್ರಹಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹುಲಿ ದತ್ತು ಪಡೆದ ಸರ್ಕಾರಿ ನೌಕರರ ಸಂಘ, ದತ್ತು ಪಡೆಯೋದು ಹೇಗೆ?
ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರ ಸೇವೆಯನ್ನು ಒಂದು ಬಾರಿ ಖಾಯಂಗೊಳಿಸಬೇಕು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಬಜೆಟ್ ನಲ್ಲಿ ಸೇವೆ ಖಾಯಂ ಘೋಷಣೆ ಮಾಡಬೇಕು ಎಂದು ಆಯನೂರು ಮಂಜುನಾಥ್ ಅವರು ಮನವಿ ಮಾಡಿದರು.