ಶಿಕಾರಿಪುರದ ಬಿಜೆಪಿ ಮುಖಂಡರು ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ, ಯಾರೆಲ್ಲ ಸೇರ್ಪಡೆಯಾದರು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಶಿಕಾರಿಪುರದ ಬಿಜೆಪಿ ಮುಖಂಡ ಹಾಗೂ ಉದ್ಯಮಿ ಎನ್.ವಿ.ಈರೇಶ್ ತಮ್ಮ ಬೆಂಬಲಿಗರ ಜೊತೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಎನ್.ವಿ. ಈರೇಶ್ ಜತೆಗೆ ಬಳ್ಳಿಗಾವಿ ಶಿವಕುಮಾ‌ರ್, ಹಾಲೇಶಪ್ಪ, ತಾಳಗುಂದ ರಾಜಪ್ಪ ಸೇರಿದಂತೆ ಪ್ರಮುಖರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿಕಾರಿಪುರದ ಪುಷ್ಪಾ ಶಿವಕುಮಾ‌ರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆ‌ರ್. ಪ್ರಸನ್ನಕುಮಾರ್ ಪಕ್ಷದ ಧ್ವಜ ನೀಡುವ ಮೂಲಕ ಸ್ವಾಗತಿಸಿದರು.

ಶಿಕಾರಿಪುರ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಈಗಿನಿಂದಲೆ ಪಕ್ಷದ ಹಿರಿಯರು ಹಾಗೂ ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲಾಗುವುದು.

– ಪುಷ್ಪಾ ಶಿವಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

Shikaripura-BJP-leaders-joined-Congress-in-Shimoga

ಎಸ್‌.ಟಿ.ಹಾಲಪ್ಪ, ಗೋಣಿ ಮಾಲತೇಶ್, ಚಂದ್ರಶೇಖರ್, ಭಂಡಾರಿ ಮಾಲತೇಶ್, ನಿಂಗಪ್ಪ, ಶಿವಣ್ಣ, ಶಿವಾನಂದ್, ರವೀಂದ್ರ, ಉಳ್ಳಿ ದರ್ಶನ್, ಸ್ಟೆಲ್ಲಾ ಮಾರ್ಟಿನ್, ಅರ್ಚನಾ ನಿರಂಜನ್ ಮತ್ತಿತರರಿದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿಗಿ ಬಂದೋಬಸ್ತ್‌, ಸಾವಿರ ಸಾವಿರ ಪೊಲೀಸರ ನಿಯೋಜನೆ

BJP leaders joins congress party

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment