ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 22 FEBRUARY 2024
SHIMOGA : ನಗರದ ಅಲ್ಲಮಪ್ರಭು ವೈದಾನದಲ್ಲಿ ಫೆ.24ರಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿದೆ. 50 ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರೇಶ್, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಗ್ಯಾರಂಟಿ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿತ್ತು. ಈಗ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶವನ್ನು ಅದೇ ಸ್ಥಳದಲ್ಲಿ ಆಯೋಜಿಸಲಾಗುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವರುಗಳು, ಶಾಸಕರು, ಪ್ರಮುಖರು ಉಪಸ್ಥಿತರಿರಲಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಜಾತಿ, ಮತ ನೋಡದೆ ಗ್ಯಾರಂಟಿ ಜಾರಿ
ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ ಮುಖಂಡರು ಟೀಕೆ ಮಾಡುತ್ತಿದ್ದರು. ಆದರೆ ಸರ್ಕಾರ ಜಾತಿ, ಮತ ನೋಡದೆ ಎಲ್ಲ ವರ್ಗದ ಜನರಿಗೂ ಯೋಜನೆ ತಲುಪಿಸಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ 4.58 ಲಕ್ಷ ಫಲಾನುಭವಿಗಳು, ಗೃಹ ಲಕ್ಷಿ ಯೋಜನೆಗೆ 3.55 ಲಕ್ಷ ಫಲಾನುಭವಿಗಳು, ಅನ್ನಭಾಗ್ಯದಿಂದ 3.80 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ. ಶಕ್ತಿ ಯೋಜನೆಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ 1.60 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಎಂ.ಶ್ರೀಕಾಂತ್, ಕಲಗೋಡು ರತ್ನಾಕರ್, ಸಿ.ಹೆಚ್.ಚಂದ್ರಭೂಪಾಲ್, ಚಂದ್ರಶೇಖರ್, ದಿನೇಶ ಪಟೇಲ್, ಶಿ.ಜು.ಪಾಶ, ಎನ್.ಡಿ.ಪ್ರವೀಣ್ ಕುಮಾರ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಪತ್ನಿ ಜೊತೆ ಮಾತನಾಡಿದವನ ಬೆರಳು ಕಟ್, ಕಾರಿನ ಗಾಜು ಪೀಸ್ ಪೀಸ್
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















