ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 25 DECEMBER 2024
ಶಿವಮೊಗ್ಗ : ಸಿ.ಟಿ.ರವಿ ಪ್ರಕರಣವನ್ನು ಸರ್ಕಾರ CID ತನಿಖೆಗೆ ವಹಿಸುವ ಬದಲು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕಿತ್ತು. ಪ್ರಕರಣದ ಪ್ರಮುಖ ಸಂಗತಿಗಳು ನ್ಯಾಯಾಂಗ ತನಿಖೆಯಿಂದ ಮಾತ್ರವೆ ಹೊರಬರಲು ಸಾಧ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ವಿಧಾನಸೌಧದಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿ ರಾತ್ರಿ ಪೂರ್ತಿ ಐದು ಜಿಲ್ಲೆ ಸುತ್ತಿಸಿದ್ದಾರೆ. ಇದರ ಸೂಕ್ತ ತನಿಕೆ ಆಗಬೇಕಿದ್ದರೆ ನ್ಯಾಯಾಂಗ ತನಿಖೆಯೇ ಸರಿ ಎಂದರು.
ಪೊಲೀಸ್ ಇಲಾಖೆಯ ವೈಫಲ್ಯವನ್ನು ಕಾಂಗ್ರೆಸ್ ಸೇರಿದಂತೆ ಎಲ್ಲ ಮುಖಂಡರು ಟೀಕಿಸಿದ್ದಾರೆ. ನೊಟೀಸ್ ಕೊಡದೆ ಕಾಡುಮೇಡು ಸುತ್ತಿಸಿದ್ದಾರೆ. ಸಿ.ಟಿ.ರವಿಗೆ ಸೆಕ್ಯೂರಿಟಿ ಕೊಡಲು ಹೀಗೆ ಮಾಡಿದ್ದಾಗಿ ಪೊಲೀಸ್ ಇಲಾಖೆ ಉತ್ತರಿಸಿದೆ. ಇನ್ಮೇಲೆ ಯಾರಿಗೇ ಸೆಕ್ಯೂರಿಟಿ ಬೇಕಿದ್ದರು ಕಾಡುಮೇಡು ಸುತ್ತಾಡಿಸುವುದು ಒಳ್ಳೆಯದು.
ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ಪೊಲೀಸರ ಕಾರ್ಯದ ಕುರಿತು ಮುಖ್ಯಮಂತ್ರಿ, ಗೃಹ ಸಚಿವರು ತಮಗೇನು ಗೊತ್ತಿಲ್ಲ ಎಂದಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಅವರು ಮಾತ್ರ, ಯಾವುದೇ ನಿರ್ಧಾರವಿದ್ದರು ತಾವು ಮತ್ತು ಸಿಎಂ ಸೇರಿಯೇ ತೆಗೆದುಕೊಳ್ಳುವುದು ಎಂದು ಹೇಳಿಕೆ ನೀಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೇಲಿನ ಆತ್ಮೀಯತೆಗಾಗಿ ಡಿ.ಕೆ.ಶಿವಕುಮಾರ್ ಅವರೆ ಇದನ್ನೆಲ್ಲ ಮಾಡಿಸಿರುವ ಸಾಧ್ಯತೆ ಇದೆ. ಸಿಐಡಿ ಅವರು ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ನಡೆಸುತ್ತಾರೆಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ » ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಸ್ವಲ್ಪ ಯಾಮಾರಿದರೆ ನಿಮ್ಮ ಪ್ರಾಣಕ್ಕೆ ಸಂಚಕಾರ ಫಿಕ್ಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422