ಶಿವಮೊಗ್ಗ ಲೈವ್.ಕಾಂ | 09 ಏಪ್ರಿಲ್ 2019
ಶಿವಮೊಗ್ಗ ಲೋಕಸಭಾ ಅಖಾಡದಲ್ಲಿ ಹನ್ನೆರಡು ಅಭ್ಯರ್ಥಿಗಳಿದ್ದು, ಮತಯಂತ್ರದಲ್ಲಿ ಯಾವ್ಯಾವ ಅಭ್ಯರ್ಥಿಯ ಹೆಸರು ಯಾವ ನಂಬರ್’ನಲ್ಲಿ ಇರಬೇಕು ಅನ್ನುವುದನ್ನು ಚುನಾವಣಾ ಆಯೋಗ ಫೈನಲ್ ಮಾಡಿದೆ.
ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಮೊದಲಿದ್ದರು. ಎರಡನೇ ನಂಬರ್’ನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಹೆಸರಿತ್ತು. ಆದರೆ ಈ ಬಾರಿ ವೋಟಿಂಗ್ ಮೆಷನ್’ನಲ್ಲಿ ಮಧು ಬಂಗಾರಪ್ಪ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಹೆಸರು ಮೂರನೇ ಸ್ಥಾನದಲ್ಲಿರುತ್ತೆ. ಇವರಿಬ್ಬರಿಗಿಂತಲೂ ಮೇಲೆ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಗುಡ್ಡಪ್ಪ ಅವರ ಹೆಸರನ್ನು ಪ್ರಕಟಿಸಲಾಗಿದೆ.
ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರಿನ ನಂತರ, ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಹಾಗಾಗಿ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಕೃಷ್ಣ ಅವರ ಹೆಸರು ನಾಲ್ಕನೇ ಸ್ಥಾನ, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ವೆಂಕಟೇಶ್ ಅವರ ಹೆಸರು ಐದನೇ ಸ್ಥಾನದಲ್ಲಿರಲಿದೆ. ಆ ನಂತರ ಪಕ್ಷೇತರ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]