ಶಿವಮೊಗ್ಗ ಲೈವ್.ಕಾಂ | HOSANAGARA | 3 ಫೆಬ್ರವರಿ 2020
ಕರ್ತವ್ಯನಿರತ ವೈದ್ಯರನ್ನು ಬೇರೆಡೆಗೆ ನಿಯೋಜಿಸಿರುವುದರನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಹೊಸನಗರ ತಾಲೂಕು ಸೋನಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮಾರುತಿ ಅವರನ್ನು ರಿಪ್ಪನ್’ಪೇಟೆ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಇದರ ವಿರುದ್ಧ ಸೋನಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಗ್ರಾಮಸ್ಥರು ಪ್ರಾತಿಭಟನೆ ನಡೆಸುತ್ತಿದ್ದಾರೆ. ಸೋನಲೆ ಸುತ್ತಮುತ್ತಲು ಇವರೊಬ್ಬರೇ ವೈದ್ಯರಿದ್ದಾರೆ. ಇವರನ್ನು ಈಗ ರಿಪ್ಪನ್’ಪೇಟೆಗೆ ನಿಯೋಜಿಸಿದರೆ ಈ ಭಾಗದ ಗ್ರಾಮಸ್ಥರಿಗೆ ಸಮಸ್ಯೆ ಆಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಡಾ.ಮಾರುತಿ ಅವರನ್ನು ರಿಪ್ಪನ್’ಪೇಟೆಗೆ ನಿಯೋಜಿಸುವ ಸರ್ಕಾರದ ಆದೇಶವನ್ನು ಕೂಡಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದೇಶ ಹಿಂಪಡೆಯುವವರೆಗು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಸ್ವಾಮಿರಾವ್, ತಾ.ಪಂ ಸದಸ್ಯ ಆಲವಳ್ಳಿ ವೀರೇಶ್, ವಾಲೆಮನೆ ನಾಗೇಶ್, ಗುರುಶೆಟ್ಟಿ ಬಿಳ್ಳೋಡಿ, ನಿವಣೆ ಮಹೇಶ್ ಗೌಡ, ಸೊನಲೆ ಸುರೇಶ್, ಸೊನಲೆ ರಾಜೇಶ್, ಸೊನಲೆ ವಿಜಯೇಂದ್ರಗೌಡ, ಹರೀಶ್, ವಿದ್ಯಾ, ಸುಮಾ, ರೂಪ, ಚೈತ್ರ, ಸುಮಿತ್ರ, ಅನುಪಮ, ನವ್ಯ, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
